27.4 C
Bengaluru
Friday, October 4, 2024

ಪೀಣ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

Date:

ಪೀಣ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 35 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಆಭರಣವನ್ನು ಸೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೀಣ್ಯ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಧರ್ಮೇಂದ್ರ ಅವರು ಕಾರ್ಯಾಚರಣೆ ನಡೆಸಿ , ಕಳ್ಳತನವನ್ನೇ ಕಾಯಕ‌ ಮಾಡಿಕೊಂಡಿದ್ದ ನಾಲ್ವರು ಕಳ್ಳರನ್ನು ಬಂಧಿಸಿ ಅವರಿಂದ ಆಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಡುಹಗಲೇ ಮನೆಯ ಬೀಗ ಮುರಿದು ಚಿನ್ನಾಭರಣಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು, ಶಾಲೆಯಿಂದ ಮಗುವನ್ನು ಕರೆತರಲು ಮನೆಗೆ ಬೀಗ ಹಾಕಿ ಮನೆಯವರು ಹೋಗಿದ್ದಾಗ ಕೇವಲ ಮೂವತ್ತು ನಿಮಿಷ ಅಂತರದಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು ಈ ಖತರ್ನಾಕ್ ಗಳು,ಕಳ್ಳತನ ಮಾಡುವುದಕ್ಕೂ ಐಷಾರಾಮಿ ಕಾರುಗಳನ್ನೇ ಈ ಖದೀಮರು ಬಳಸುತ್ತಿದ್ದ್ದರಂತೆ ,ಆರೋಪಿಗಳಿಂದ 35 ಲಕ್ಷ ಮೌಲ್ಯದ 655 ಗ್ರಾಂ ಚಿನ್ನಾಭರಣವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ಸೀಜ್
ಮಾಡಿದ್ದಾರೆ.

ಆರೋಪಿಗಳ ಹಿನ್ನೆಲೆ ನೋಡುವುದಾದರೆ
ಆರೋಪಿಗಳು 32 ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದರು
ಬೆಂಗಳೂರು,ಹಾಸನ,ಮಂಡ್ಯ,ಮೈಸೂರು ಸೇರಿದಂತೆ ರಾಜ್ಯಾದ್ಯಂತ 24 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು

ಈಗಾಗಲೇ 6 ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿಗಳು
ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಈ ಕೃತ್ಯ ದಲ್ಲಿ ಭಾಗಿಯಾಗಿದ್ದರು. ಆರೋಪಿಗಳು ಜೈಲಿನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರು ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಬ್ಯಾಂಕ್, ಫೈನಾನ್ಸ್ ನಲ್ಲಿ ಗಿರವಿ ಇಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

Latest Stories

LEAVE A REPLY

Please enter your comment!
Please enter your name here