23.8 C
Bengaluru
Thursday, November 7, 2024

ಪೊಲೀಸ್ ಇನ್ಸ್ಪೆಕ್ಟರ್ ಇಂದ ಪುನರ್ಜನ್ಮ

Date:

ಮೂಲತಃ ಹಾಸನದ ಕರ್ಕಿಹಳ್ಳಿ ಯವರಾದ ಕಿರಣ್ ಮತ್ತು ನಿವೇದಿತಾ ದಂಪತಿಗೆ ಎರಡನೆಯ ಮಗುವಾಗಿ 2019ರಲ್ಲಿ ನವನೀತ್ ಜನನ ವಾಗುತ್ತದೆ .ಎಲ್ಲ ಮಕ್ಕ್ಕಳಂತೆ ಆರೋಗ್ಯವಾಗಿ ಬಹಳ ಚಟುವಟಿಕೆ ಇಂದ ಇದ್ದಂತಹ ಮಗುವಿಗೆ ಏಕಾಏಕಿ ಜ್ವರ ಮತ್ತು gumsbleed ನಿಂದ ಮಗು ನವನೀತ್ ಬಳಲು ಆರಂಭಿಸುತ್ತದೆ .ಮಗುವನ್ನು ಹಲವು ವೈದ್ಯರ ಬಳಿ ಕರೆದು ಕೊಂಡು ಹೋದರು ಮಗು ಗುಣವಾಗುವುದಿಲ್ಲ.ವೈದ್ಯರ ಸೂಚನೆಯ ಮೇರೆಗೆ ಮಂಗಳೂರಿಗೆ ಮಗುವನ್ನು ಕರೆದುಕೊಂಡು ಹೋಗಲಾಗುತ್ತದೆ ಮಗುವನ್ನು ಪರೀಕ್ಷಿಸಿದ ವೈದ್ಯರು ಹತ್ತು ಲಕ್ಕ್ಷ ಮಕ್ಕಳಲ್ಲಿ ಒಂದು ಮಗುವಿಗೆ ಬರುವಂತಹ ಅಪರೂಪದ ಕಾಯಿಲೆಗಳಲ್ಲಿ ಒಂದಾದ ಫ್ಯಾಂಕಾನಿ ಅನೀಮಿಯಾ ಎಂಬ ಕಾಯಿಲೇ ಇಂದ ಮಗು ಬಳಲುತ್ತಿದ್ದು ಮಗುವನ್ನು ಉಳಿಸಿಕೊಳ್ಳುವು ಬಹಳ ಕಷ್ಟ ವೆಂದು ಮಗುವಿನ ಮೇಳ ಹೆಚ್ಚು ವಿಶ್ವಾಸವನ್ನು ಇಟ್ಟುಕೊಳ್ಳಬಾರದೆಂದು ತಿಳಿಸುತ್ತಾರೆ.

ಇದನ್ನು ಕೇಳಿ ಪೋಷಕರು ಅತೀವ ದುಃಖ್ಖಕ್ಕೆ ಒಳಗಾಗುತ್ತಾರೆ.ಆದರೆ ,ಇದರಿಂದ ಧೃತಿಗೆಡದೆ ಹೇಗಾದರೂ ಸರಿ ಮಗುವಿನ ಟ್ರೀಟ್ಮೆಂಟ್ ಮಾಡಿಸಲು ಮುಂದಾಗುತ್ತಾರೆಅದರಂತೆ ಈ ಕಾಯಿಲೆಗೆ ಬೋನ್ ಮ್ಯಾರೋ ಸರ್ಜರಿಯ ಅವಶ್ಯಕತೆ ಇದ್ದು,ಅದರ ಚಿಕಿತ್ಸೆಗಾಗಿ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸುತ್ತಾರೆ.ಅದರಂತೆ ಮಗುವನ್ನು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಕರೆದುಕೊಂಡುಬರುತ್ತಾರೆ.

ಆಸ್ಪತ್ರೆಯ ವೈದ್ಯರು ಮಗುವಿನ ಚಿಕಿತ್ಸೆಗಾಗಿ 30ರಿಂದ 40 ಲಕ್ಷ ಹಣ ಬೇಕಾಗುತ್ತದೆ,ಈಗಲೇ 20ಲಕ್ಷ ಹಣವನ್ನು ಕಟ್ಟಿದರೆ ಮಗುವಿಗೆ ಚಿಕಿತ್ಸೆ ಶುರು ಮಾಡುವುದಾಗಿ ತಿಳಿಸುತ್ತಾರೆ. ಲಕ್ಷ ಗಟ್ಟಲೆ ಹಣವನ್ನು ಕೈನಿಂದ ಮುಟ್ಟುವುದು ಬೇಡ ಕಣ್ಣಿಂದಲೂ ನೋಡಿರದ ದಂಪತಿಗೆ ಪ್ರಪಂಚವೇ ತಲೆಮೇಲೆ ಬಿದ್ದಂತೆ ಭಾಸವಾಗುತ್ತೆ.

ಮಗುವಿನ ಚಿಕಿತ್ಸಾ ವೆಚ್ಛಕ್ಕಾಗಿ ಹಲವರ ಬಳಿ ದಾನಿಗಳ ಬಳಿ ಛಲಬಿಡದ ತ್ರಿವಿಕ್ರಮ ನಂತೆ ಮಗುವನ್ನು ಉಳಿಸಿಕೊಳ್ಳಲು ಶತಃ ಪ್ರಯತ್ನ ಮಾಡುತ್ತಿರುತ್ತಾರೆ.ಆದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ,ಮಗುವಿನ ಚಿಕಿತ್ಸೆಗೆ ಯಾವುದೇ ದಾನಿಗಳು ಮುಂದೆ ಬರುವುದಿಲ್ಲ. ದಿಕ್ಕೇ ತೋಚದೆ ಊರಿಗೆ ವಾಪಸ್ಸಾಗುವ ನಿರ್ಧಾರ ಮಾಡಿ ಊರಿಗೆ ಹೊರಟಿದ್ದಾಗ ಅಕಸ್ಮಾತಾಗಿ ಅವರಿಗೆ ತಮ್ಮ ಪಕ್ಕದ ಊರಿನವರಾದ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ರವರು ಕಣ್ಣಿಗೆ ಬೀಳುತ್ತಾರೆ ,ಎಲ್ಲರ ಬಳಿ ಸಹಾಯ ಕೇಳಿ ಸೋತಿದ್ದ ಮಗುವಿನ ತಂದೆ ಕಿರಣ್ ರವರು ತಕ್ಷಣ ಇನ್ಸ್ಪೆಕ್ಟರ್ ರವರನ್ನು ಮಾತನಾಡಿಸಿ ತಮ್ಮ ಪರಿಚಯ ಹೇಳಿ ಕೊಳ್ಳುತ್ತಾರೆ ,ಆದರೆ ಅವರನ್ನು ಎಂದು ನೋಡಿರದ ಇನ್ಸ್ಪೆಕ್ಟರ್ ಲೋಹಿತ್ರವರುಅವರನ್ನುಗುರುತಿಸುವುದಿಲ್ಲ ,ಆದರೆ ಮಗುವಿನ ದುಸ್ಥಿತಿಯ ಬಗ್ಗೆ ಹೇಳಿದಾಗ ಅದನ್ನು ಕೇಳಿಸಿಕೊಂಡ ಇನ್ಸ್ಪೆಕ್ಟರ್ ಯಾವ ಪರಿಚಯವನ್ನು ಗಣನೆಗೆ ತೆಗೆದು ಕೊಳ್ಳದೆ “ನೀ ಏನಾದರು ಆಗು ಮೊದಲು ಮಾನವನಾಗು “ಎಂಬ ಕುವೆಂಪು ರವರ ಸಂದೇಶದಂತೆ ತನ್ನಿಂದ ಮೊದಲು ಮಗುವಿಗೆ ಏನು ಸಹಾಯ ಮಾಡಲು ಸಾಧ್ಯ ಎಂಬುದನ್ನು ಮಾತ್ರ ಯೋಚಿಸುತಾರೆ. ಇನ್ಸ್ಪೆಕ್ಟರ್ ಲೋಹಿತ್ ತಮಗೆ ಪರಿಚಯವಿದ್ದ ರಾಮಯ್ಯ ಹಾಸ್ಪಿಟಲ್ ನ ಕಸ್ಟಮರ್ ರಿಲೇಷನ್ಶಿಪ್ ಆಫೀಸರ್ ಆಗಿರುವಂತ ಲಕ್ಷ್ಮಿ ನಾರಾಯಣ ಅವರ ಬಳಿ ಮಗುವಿನ ಖಾಯಿಲೆಯ ಮತ್ತು ಅದಕ್ಕಿರುವ ಚಿಕಿತ್ಸೆಯ ಬಗ್ಗೆ ಚರ್ಚಿಸಿ, ಮಗುವನ್ನು ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಪೋಷಕರಿಗೆ ತಿಳುಸುತ್ತಾರೆ.ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ರಶ್ಮಿಯವರು ತಪಾಸಣೆ ನಡೆಸಿ ಮಗುವಿನ ಚೇತರಿಕೆಯ ಭರವಸೆ ನೀಡುತ್ತಾರೆ.

ಡಾಕ್ಟರ್ ರಶ್ಮಿ ಮತ್ತು ಲಕ್ಷ್ಮೀನಾರಾಯಣ ಅವ್ರ ಬಳಿ ಪೋಷಕರ ನಿಸ್ಸಹಾಯಕ ಸ್ಥಿತಿಯ ಬಗ್ಗೆ ಇನ್ಸ್ಪೆಕ್ಟರ್ ಲೋಹಿತ್ ರವರು ಮಾತನಾಡಿ ಚಿಕಿತ್ಸೆ ಗಾಗಿ ವ್ಯಯಿಸಲು ಹಣಕಾಸಿನ ತೊಂದರೆ ಇರುವುದಾಗಿ ತಿಳಿಸುತ್ತಾರೆ ಹೇಗಾದರೂ ಮಗುವನ್ನುವುಳಿಸಿಕೊಡುವಂತೆ ಮನವಿ ಮಾಡುತ್ತಾರೆ, ಇನ್ಸ್ಪೆಕ್ಟರ್ ಮನವಿಯನ್ನು ಪರಿಗಣಿಸಿದ ಆಸ್ಪತ್ರೆಯವರು ,ಫಂಡ್ ರೈಸಿಂಗ್ ಮುಖಾಂತರ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳೋಣ ವೆಂದು ನಿರ್ಧರಿಸಿ ಮಗುವಿಗೆ ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳುತ್ತಾರೆ ಮಗುವಿಗೆ ಚಿಕಿತ್ಸೆ ಆರಂಭವಾಗುತ್ತದೆ .

ಇಲ್ಲಿಗೆ ಪೋಷಕರ ಕಷ್ಟ ಪರಿಹಾರವಾಗುವುದಿಲ್ಲ ಪ್ರತೀದಿನವು ಮಗುವಿನ ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇರುತ್ತದೆ,ದಿನವೂ ರಕ್ತದಾನಿಗಳನ್ನೂ ನೀವು ಕರೆತರಬೇಕೆಂದು ಡಾಕ್ಟರ್ ತಿಳುಸುತ್ತಾರೆ, ಈ ಮಹಾನಗರದಲ್ಲಿ ಯಾರ ಪರಿಚಯವೂ ಇರದ ದಂಪತಿ ಕಂಗಾಲಾಗುತ್ತಾರೆ.ಮತ್ತೆ ಪೇಚಿಗೆ ಸಿಲುಕಿದ ದಂಪತಿಗಳುಬಹಳ ಮುಜುಗರದಿಂದಲೇ ಮತ್ತೆ ಇನ್ಸ್ಪೆಕ್ಟರ್ ಗೆ ಕರೆ ಮಾಡಿ ರಕ್ತ ದ ಅವಶ್ಯಕತೆಯ ಬಗ್ಗೆ ತಿಳಿಸುತ್ತಾರೆ .

ಮಗುವಿನ ತಾಯಿ(ನಿವೇದಿತಾ ಹೇಳಿಕೆ): ಪದೇ ಪದೇ ತೊಂದರೆ ಕೊಡುತ್ತಿದ್ದೇವೆಂದು ನಂಗ್ಯಾಕೆ ಬೇಕಿತಪ್ಪ ಎಂದು ಒಂದು ಭಾರಿಯೂ ಬೇಸರಿಸದೆ ,ಅಸಡ್ಡೆ ತೋರಿಸದೆ ಇನ್ಸ್ಪೆಕ್ಟರ್ ನಮ್ಮ ಮನವಿಗೆ ಸ್ಪಂದಿಸಿದರು. ತಮ್ಮ ಸಹೋದ್ಯೋಗಿಗಳಲ್ಲಿ ಮಗುವಿಗೆ ಹೊಂದುವ ಬ್ಲಡ್ ಗ್ರೂಪ್ಕಿರುವ ಸ್ಟಾಫ್ ಗಳನ್ನೂ ರಕ್ತ ನೀಡುವಂತೆ ಕೇಳಿಕೊಂಡರು ಇದಕ್ಕೆ ಅವರ ಸಹೋದ್ಯೋಗಿಗಳು ಕೂಡ ಸಂತೋಷವಾಗಿಯೇ ಒಪ್ಪಿಕೊಂಡು ಪ್ರತಿದಿನ ಒಬ್ಬರು ಇಬ್ಬರಂತೆ ಬಂದು ಮಗುವಿಗೆ ರಕ್ತ ನೀಡಿ ,ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಜರುಗುವಂತೆ ನೋಡಿಕೊಂಡರು .ನಾನು ಪೊಲೀಸರೆಂದರೆ ಹೀಗಿರುತ್ತಾರೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ,ಪೊಲೀಸರ ಈ ನಡೆ ಕಂಡು ನಾನು ಮಂತ್ರ ಮುಗ್ದ ಳಾದೆ,ಹಳ್ಳಿಯ ನಮ್ಮಂತ ಜನರಿಗೂ ಸಹಾಯ ಮಾಡುವ ಹೌದಾರ್ಯತೇ ತೋರಿದ ಪೊಲೀಸರಿಗೆ ನಾನು ಎಂದಿಗೂ ಚಿರಋಣಿ.*ಈಗ ನನ್ನ ಬಂಧು ಗಳೆಂದರೆ ಪೊಲೀಸ್ನವರೇ* ಎಂದು ನಿವೇಧಿತಾ ಗದ್ಗದಿತರಾಗಿ ನಮ್ಮೊಂದಿಗೆ ಅವರ ನೋವನ್ನು ಹಂಚಿ ಕೊಂಡರು .ಈಗ ಮಗುವಿನಲ್ಲಿ ಚೇತರಿಕೆ ಕಂಡು ಬಂದಿದೆ.ಇನ್ಸ್ಪೆಕ್ಟರ್ ಆದಿಯಾಗಿ ರಕ್ತ ಕೊಟ್ಟ ಪ್ರತಿಯೊಬ್ಬರು ಮಗುವಿನ ಚೇತರಿಕೆ ಕಂಡು ಸಂತೋಷ ಪಡುತ್ತಾರೆ .

ಮಗುವಿನ ಚೇತರಿಕೆಗೆ ಇನ್ನೂ ಸ್ವಲ್ಪ ಸಮಯ ನಿಗಾ ವಹಿಸುವ ಅವಶ್ಯಕೆತೆ ಇದ್ದು ಅದಕ್ಕಾಗಿ ಸ್ವಲ್ಪ ದಿನಗಳ ಕಾಲ ಬೆಂಗಳೂರಿನಲ್ಲೇ ಇರಬೇಕಾದ ಅವಶ್ಯಕತೆ ಇರುವುದನ್ನು ಮನಗಂಡ ಇನ್ಸ್ಪೆಕ್ಟರ್ ನಮ್ಮನ್ನು ಕೆಲ ತಿಂಗಳುಗಳ ಕಾಲ ಬೆಂಗಳೂರಿನಲ್ಲೇ ಉಳಿದುಕೊಳ್ಳಲು ಒಂದು ಮನೆಯ ವ್ಯವಸ್ಥೆಯನ್ನೂ ಸಹ ಮಾಡಿಕೊಟ್ಟು ಇಂದು ಮಗು ಆರೋಗ್ಯವಾಗಿ ಓಡಾಡಿಕೊಂಡಿರುವಂತೆ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಈ ಮಾನವೀಯ ಕಾರ್ಯ ಮಾಡುವಲ್ಲಿ ಇನ್ಸ್ಪೆಕ್ಟರ್ ಲೋಹಿತ್ ರವರ ಪಾತ್ರ ಅಮೋಘ ಮತ್ತು ಶ್ಲಾಘನೀಯ ಪೊಲೀಸರ ಎಂದರೆ ಮೂಗು ಮುರಿಯುವಂತವರು,ಪೊಲೀಸರ ಬಗ್ಗೆ ಇಲ್ಲಸಲ್ಲದ ಒಡಂಬಡಿಕೆ ಹೊಂದಿರುವಂತವರು ,ಇಲಾಖೆಯಲ್ಲಿರುವ ಇಂತಹ ಎಲೆಮರೆ ಕಾಯಿಗಳ ಸಮಾಜಮುಖಿ ಕಾರ್ಯವನ್ನು ,ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ ಸದ್ದಿಲ್ಲದೆಯೇ ಪ್ರಚಾರಕ್ಕಾಗಿ ಸಮಾಜಸೇವೆ ಮಾಡಿ ಅದನ್ನು ತೋರಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಹಾನುಭಾಹೂತಿಯಿಂದ ಮುಗ್ದ ಜನರ ಸ್ಪಂದನೆಗೆ ಸ್ಪಂದಿಸಿದ ,ಉತ್ತಮ ನಡೆ ಹೊಂದಿರುವ ಇವರೇ “ನಮ್ಮ ಜನಸ್ನೇಹಿ ಪೊಲೀಸ್ ಹೀರೋ ಇನ್ಸ್ಪೆಕ್ಟರ್ ಲೋಹಿತ್ “. ಹಾಟ್ಸ್ ಆಫ್ ಟು ಯು ಸರ್ ಇಂತಹ ನಡೆಯನ್ನು ಶ್ಲಾಘಿಸಲೇಬೇಕು. ನಾವು ಮಾಡುವ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ ಎಂಬ ಕಾರಣಕ್ಕೆ ವಿನಾ ಕಾರಣ ಪೊಲೀಸರನ್ನು ಧೂಷಿಸದೆ, ಇಲಾಖೆಯಲ್ಲಿ ಇಂತಹ ಜನಸ್ನೇಹಿ ಪೊಲೀಸರು ಇದ್ದಾರೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ ತಮ್ಮ ಬಿಡುವಿಲ್ಲದ ಸಮಯ ಮತ್ತು ಕೆಲಸದ ಒತ್ತಡದ ನಡುವೆ ಒಂದು ಮಗುವಿನ ಜೀವ ಉಳಿಸಲು ಶತ ಪ್ರಯತ್ನ ಮಾಡಿದ ಇನ್ಸ್ಪೆಕ್ಟರ್ ಲೋಹಿತ್ ರವರ ಕಾರ್ಯ ಶ್ಲಾಘನೀಯ ,ನಿಜವಾಗಿ ಮಗುವಿನ ತಾಯಿ ಹೇಳಿದಂತೆ ಆ ಮಗುವಿಗೆ ಇನ್ಸ್ಪೆಕ್ಟರ್ ಲೋಹಿತ್ ರವರಿಂದ ಪುನರ್ಜನ್ಮ ವೇ ಸರಿ.

Join hands for a good cause by donating for the childs treatment the details are given below:-

Phone pay no:-9731047664 kiran kumar A/c:-12070100006462 IFSC:-PKGB0012070

Latest Stories

LEAVE A REPLY

Please enter your comment!
Please enter your name here