26.9 C
Bengaluru
Saturday, January 25, 2025

“ಮನುಷ್ಯ ರೂಪದ ರಾಕ್ಷಸ V/S ಖಾಕಿಯೊಳಗಿನ ಮಾನವೀಯತೆ”

Date:

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಆಸಿಡ್ ಅಟ್ಯಾಕ್ ಸುದ್ದಿ ಪ್ರತಿಯೊಬ್ಬರ ಮನಸ್ಸನ್ನು ಒಂದು ಕ್ಷಣ ತಲ್ಲಣ ಗೊಳಿಸಿತ್ತು .
ಅವ್ನು ಕಳೆದ ಐದು ವರ್ಷಗಳಿಂದ ಯುವತಿಯೊಬ್ಬಳ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ. ಆದ್ರೆ, ತನಗಿಂತ ಹತ್ತು ವರ್ಷ ಹಿರಿಯವನಾದ ಆತನ ಪ್ರಪೋಸಲ್ ಗೆ ಆಕೆ ನೋ ಎಂದಿದ್ಲು. ಆದರೆ ಬೆಂಬಿಡದೆ ಕಾಡ್ತಿದ್ದ ಅಷ್ಟಕ್ಕೆ ರೊಚ್ಚಿಗೆದ್ದ ಆ ಪಾಗಲ್, ನನಗೆ ಸಿಗದ ಚೆಲುವೆ ಇನ್ಯಾರಿಗೂ ಸಿಗ್ಬಾರ್ದು ಅಂತ ಆಕೆಯ ಮೇಲೆ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದ.
ಆತನನ್ನು ಪ್ರೇಮಿ ಎಂದರೆ ಆ ಪದಕ್ಕೆ ಅವಮಾನ ,ತಾನು ಪ್ರೀತಿಸಿದವರು ಎಲ್ಲಾದರೂ ಚೆನ್ನಾಗಿರಲಿ ಎಂದು ಅವರ ಕ್ಷೇಮ ಬಯಸುವುದೇ ಪ್ರೀತಿ .ಆದರೆ ಇಂಥ ಅಪರಾಧಿಕ ಮನಸುಳ್ಳವನನ್ನು ವಿಕೃತ ಮನಸ್ಸಿಗ ಎನ್ನಬಹುದು .


ಈತನ ವಿಕೃತತೆಯ ಚಿತ್ರಣ :
ಈತನ ವಿಕೃತಿಗೆ ನಲುಗಿದ ಯುವತಿ ಬೆಂಗಳೂರಿನ ಗಂಗಾಧರಪ್ಪ ಕಾಂಪ್ಲೆಕ್ಸ್ ನಲ್ಲಿರೋ ಖಾಸಗಿ ಫೈನಾನ್ಸ್ ಕಂಪನಿ ಮುತ್ತೂಟ್ ಪಿನ್ ಕಾರ್ಪ್ ಗೆ ಪ್ರತಿನಿತ್ಯ ಕೆಲಸಕ್ಕೆ ಬರ್ತಿದ್ದ ಯುವತಿಯೊಬ್ಬಳು ಎಂದಿನಂತೆ ಕೆಲಕ್ಕೆ ಬಂದಿದ್ಲು. ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ಡ್ರಾಪ್ ಹಾಕಿಸಿಕೊಂಡ ಆ ಯುವತಿ ಆಫೀಸ್ ಹತ್ತಿರ ಹೋಗಲು ಮೆಟ್ಟಿಲು ಅತ್ತುತ್ತಿದಂತೆ ದಿಢೀರನೆ ಆಕೆಯ ಹಿಂಬದಿ ಬಂದ ಯುವಕ ಆಕೆಯ ಮೇಲೆ ಆಸಿಡ್ ಸುರಿದಿದ್ದ. ಏನೋ ಮೇಲೆ ಬಿದ್ದು ಸಿಡ್ತಿದೆ ಎಂದು ಹಿಂದೆ ತಿರುಗಿ ನೋಡಿದ್ರೆ ಆಕೆಯ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಪಾಗಲ್ ನಾಗೇಶನೇ ತನ್ನ ಪ್ರೇಯಸಿ ಮೇಲೆ ಆಸಿಡ್ ಸುರಿದು ಕಾಲ್ಕಿತ್ತಿದ್ದ.


ಯಾವಾಗ ಆಸಿಡ್ ಮೈ ಮೇಲೆ ಬಿತ್ತೊ ಯುವತಿಯ ತಲೆಯ ಬಲಭಾಗ, ಬೆನ್ನು, ಎದೆಭಾಗ ಹಾಗೂ ತೊಡೆ ಭಾಗ ಸುಟ್ಟ ಗಂಭೀರವಾಗಿ ಗಾಯಗಲಾಗಿದ್ವು. ಕೂಡ್ಲೇ ತನ್ನ ಬಳಿಯಿದ್ದ ಮೊಬೈಲ್ ಫೋನ್ ನಿಂದ ತಂದೆ ರಾಜುಗೆ ಕರೆ ಮಾಡಿ ಅಪ್ಪ ನನ್ನ ಮೇಲೆ ನಾಗೇಶ ಅಸಿಡ್ ಹಾಕ್ಬಿಟ್ಟ ಅಂತ ಕರೆ ಮಾಡಿದ್ಲು.‌ ಮಗಳ‌ ಮಾತು ಕೇಳಿ ಆಘಾತಕ್ಕೊಳಗಾದ ತಂದೆ ಮತ್ತೆ ವಾಪಸ್ಸು ಬಂದ್ ನೋಡಿದ್ರೆ ಆಸಿಡ್ ದಾಳಿಗೊಳಗಾದ ಮಗಳು ಅಲ್ಲಿನ ಮೆಟ್ಟಿಲುಗಳ ಮೇಲೆ ಮಲಗಿದ್ಲು. ಕೂಡ್ಲೇ ಪೊಲೀಸ್ರಿಗೆ ಮಾಹಿತಿ ತಿಳಿಸಿದ ಯುವತಿಯ ತಂದೆ ಅಲ್ಲಿನ ಸ್ಥಳಿಯರ ಸಹಾಯ ಪಡೆದು ಮಗಳನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ರು.


ಮತ್ತೊಂದೆಡೆ ಘಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸ್ರು ಆರೋಪಿ ಬಗ್ಗೆ ಮಾಹಿತಿ ಕಲೆಹಾಕಿದ್ರು. ಹೆಗ್ಗನಹಳ್ಳಿ ನಿವಾಸಿಯಾಗಿರೋ ನಾಗೇಶ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯ ಮೇಲೆ ಕಣ್ಣಾಕಿದ್ದ. ನನ್ನ ಪ್ರೀತ್ಸು ಪ್ರೀತ್ಸು ಅಂತ ಐದು ವರ್ಷಗಳಿಂದ ಹಿಂದೆ ಬಿದ್ದಿದ್ದ. ಆದ್ರೆ, ಇದಕ್ಕೆ ಯುವತಿ ಕ್ಯಾರೇ ಅಂದಿರ್ಲಿಲ್ಲ. ಇಂದಲ್ಲ ನಾಳೆ ನನ್ನ ಪ್ರೀತಿ ಒಪ್ಪಿಕೊಳ್ತಾಳೆ ಅಂತ ಯುವತಿಯ ಹಿಂದೆಯೇ ಸುತ್ತುತ್ತಿದ್ದ ನಾಗೇಶ ನಿನ್ನೆ ಯಾಕೋ ವಿಷ್ಯನ ತುಂಬಾನೇ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾನೆ. ಕೊನೆಯದಾಗಿ ನನ್ನ ಪ್ರೀತಿಗೆ ಒಪ್ಪಿಗೊ ಕೊಡ್ತಾಳೋ ಇಲ್ವೋ ಅಂತ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಲವ್ ಮಾಡುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದು, ನನಗೆ ಸಿಗದ ನೀನು ಇನ್ಯಾರಿಗು ಸಿಗ್ಬಾರ್ದು ಅಂತೇಳಿ ಸಾಯಿಸೋ ಬೆದರಿಕೆ ಹಾಕಿದ್ದಾನೆ. ಈ ವಿಷ್ಯವನ್ನ ತನ್ನ ದೊಡ್ಡಮ್ಮನ ಬಳಿ ತಿಳಿಸಿದ್ದು, ಬೆಳಗ್ಗೆ ಒಬ್ಬಳೆ ಹೋದ್ರೆ ಏನಾದ್ರು ತೊಂದರೆ ಕೊಡ್ಬೋdಅಂತ ತಂದೆಯ ಜೊತೆ ಮಾಡಿ ಕೆಲಸಕ್ಕೆ ಕಳಿಸಿದ್ದಾರೆ. ಆದ್ರೂ, ಆ ಪಾಗಲ್ ತಾನು ಮಾಡಬೇಕು ಅಂದುಕೊಂಡಿದ್ದನ್ನ ಮಾಡಿಯೇ ತೀರಿದ್ದಾನೆ
ಬೆಳಗ್ಗೆಯೆ ಎದ್ದು ಹೆಗ್ಗನಹಳ್ಳಿ ಬಳಿ ತಾನು ಕೆಲಸ ಮಾಡುತ್ತಿದ್ದ ಸೋದರನ ಗಾರ್ಮೆಂಟ್ಸ್ ಗೆ ತೆರಳಿದ ನಾಗೇಶ ಬಟ್ಟೆ ವಾಶ್ ಮಾಡುವ ಆಸಿಡ್ ನ್ನ ಒಂದ್ ಬಾಟಲಿಗೆ ಹಾಕಿಕೊಂಡ್ ತಂದಿದ್ದಾನೆ. ನಂತರ ಯುವತಿ ಎಷ್ಟೊತ್ತಿಗೆ ಮನೆಯಿಂದ ಹೊರಡುತ್ತಾಳೆ ಅನ್ನೊದನ್ನ ಚೆನ್ನಾಗಿ ತಿಳಿಸಿದುಕೊಂಡಿದ್ದು, ಆಕೆಯ ಬರುವಿಕೆಗಾಗಿ ಮುತ್ತುಟ್ ಪಿನ್ ಕಾರ್ಪ್ ಬಳಿ ಕಾದು ಕುಳಿತಿದ್ದಾನೆ. ಬಳಿಕ ಅಲ್ಲಿಗೆ 8.30 ಸುಮಾರಿಗೆ ಯುವತಿ ತನ್ನ ತಂದೆಯ ಬೈಕ್ ಇಳಿದು ಮೆಟ್ಟಿಲೇರುತ್ತಿದ್ದಂತೆಯೆ ಹಿಂಬಾಲಿಸಿ ಅಕೆಯ ತಲೆ ಮೇಲೆ ಆಸಿಡ್ ಸುರಿದಿದ್ದಾನೆ. ಘಟನೆಯಿಂದ ಯುವತಿಯ ದೇಹ ಶೇ.40 ಭಾಗ ಸುಟ್ಟಿದ್ದು, ಸ್ಥಳೀಯ ಆಸ್ಪತ್ರೆಯಲ್ಕಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡುವ ಅವಶ್ಯಕತೆ ಇರುವುದರಿಂದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಯುವತಿಗೆ ಚಿಕಿತ್ಸೆ ಶುರುವಾಗಿದೆ .ಈಗಾಗಲೇ ಮನುಷ್ಯ ರೂಪದ ವೇಷ ತೊಟ್ಟು ರಾಕ್ಷಸನಂತೆ ವರ್ತಿಸಿದ್ದ ನಾಗೇಶನನ್ನು ಇಡೀ ತಂಡ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ .


ಸರಿ ಇನ್ನೇನು ನಮ್ಮ ಕೆಲಸ ಮುಗಿಯಿತು ಎಂದು ಭಾವಿಸದ ಪೊಲೀಸರು ಯುವತಿಯ ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಎಂದು ತಿಳಿಸಿದಾಗ ,ಒಮ್ಮೆಯೂ ಹಿಂದೆ ಮುಂದೆ ಯೋಚಿಸದ ಇನ್ಸ್ಪೆಕ್ಟರ್ ಪ್ರಶಾಂತ್ ಈ ಕಾರ್ಯಕ್ಕೆ ಮುಂದಾಗುತ್ತಾರೆ .

ಇಂದಿನ ನಮ್ಮ ಜನಸ್ನೇಹಿ ಪೊಲೀಸ್

ಪ್ರಸ್ತುತ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್ .
ಮೂಲತಃ ಚನ್ನಪಟ್ಟಣ ತಾಲ್ಲೂಕಿನ ರಾಮನಗರದ ಮಂಗಾಡಹಳ್ಳಿ ಯವರಾದ ಪ್ರಶಾಂತ್ ,2005 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾದವರು ಸದಾ ವೃತಿಯ ತುಡಿತ ಹೊಂದಿರುವ ಇನ್ಸ್ಪೆಕ್ಟರ್ 2019 ರಲ್ಲಿ ಸಿಎಂ ಮೆಡಲ್ ಗು ಕೂಡ ಭಾಜನ ರಾಗಿದ್ದಾರೆ ಮಾನವೀಯ ಮೌಲ್ಯಗಳುಳ್ಳ ಗುಣಗಳನ್ನು ಹೊಂದಿರುವವರು ,ಆಸಿಡ್ ಸಂತ್ರಸ್ತೆಯ ಪರಿಸ್ಥಿತಿ ಕಂಡು ಮಮ್ಮಲಾಮರುಗಿದವರಲ್ಲಿ ಇನ್ಸ್ಪೆಕ್ಟರ್ ಪ್ರಶಾಂತ್ ಕೂಡ ಒಬ್ಬರು ,ಏನಾದರಾಗಲಿ ಯುವತಿ ಬೇಗ ಮೊದಲಿನಂತಾದರೆ ಸಾಕು ಎಂದು ಪ್ರಾರ್ಥಿಸಿದ್ದರು ಪ್ರಶಾಂತ್ ಯುವತಿಯ ಚಿಕಿತ್ಸೆಗೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದಾಗ ಬೇರೆಯವರಿಗೆ ಹೋಗಿ ರಕ್ತ ಕೊಡಿ ಎಂದು ಆದೇಶ ಮಾಡುವಲ್ಲಿಗೆ ತಮ್ಮ ಅಧಿಕಾರವನ್ನು ಬಳಸಿಕೊಳ್ಳದೆ ಸ್ವತಹ ತಾವೇ ರಕ್ತ ನೀಡಲು ಮುಂದಾಗಿ ರಕ್ತ ದಾನ ಮಾಡಿ ಜೀವ ಉಳಿಸಿ ಎಂಬ tagline ಗೆ ಪ್ರೇರಕ ರಾಗಿದ್ದಾರೆ,ತಮ್ಮಂತೆ ತಮ್ಮ ಸಹೋದ್ಯೋಗಿಗಳಾದ ಪಿಎಸ್ಐ ವಿಶ್ವನಾಥ್ ರೆಡ್ಡಿ,ಸೋಮಶೇಖರ್ ,ಮಂಜುನಾಥ್,ಚಂದ್ರಯ್ಯ ,ಮೋಹನ್ ಇವರುಗಳೂ ಸಹ ರಕ್ತ ನೀಡುವಂತೆ ಪ್ರೇರೇಪಿಸಿದ್ದಾರೆ .ಖಾಕಿಯೊಳಗೊಬ್ಬ ಮನುಷ್ಯತ್ವವಿರುವ ಮನುಷ್ಯನ ಮಾನವೀಯ ಗುಣಗಳು ಕೆಲಸ ಮಾಡಿವೆ ಅಪರಾಧಿ ಯನ್ನು ಬಂದಿಸುವುದಷ್ಟೇ ನಮ್ಮ ಕಾರ್ಯ ಅದನ್ನು ನಾವು ಅಚ್ಚು ಕಟ್ಟಾಗಿ ಮಾಡಿ ಮುಗಿಸಿದ್ದೇವೆ ಎಂದು ಕೈ ಕಟ್ಟಿ ಕೂರದ ಖಾಕಿ ಮಾನವೀಯತೆ ಮೆರೆದಿದೆ. ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರ ಮಾದರಿ ನಡೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ.

ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್


ಸದಾ ತಪ್ಪು ಗ್ರಹಿಕೆ ಇಂದಲೇ ಪೊಲೀಸರನ್ನು ದೂರುವವವರೇ ಯಾರೋ ಒಬ್ಬರ ತಪ್ಪಿಗೆ ಇಡೀ ವ್ಯವಸ್ಥೆ ಯನ್ನೇ ದೂಷಿಸುವ ಮುನ್ನ ಒಮ್ಮೆ ಈ ಜನಸ್ನೇಹಿ ಪೊಲೀಸರ ನಡೆಯನ್ನ ಶ್ಲಾಘಿಸಿ. ಹೀಗೆ ನಿಮ್ಮ ಸಮಾಜ ಮುಖಿ ಕಾರ್ಯಗಳು ಯಾವ ಅಡೆತಡೆ ಇಲ್ಲದೆ ಸಾಗಲಿ.

ಹಾಟ್ಸ್ ಆಫ್ ಟು ಕರ್ನಾಟಕ ಪೊಲೀಸ್ ?
ಆದಷ್ಟು ಬೇಗ ಯುವತಿ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ನಮ್ಮ ಪತ್ರಿಕೆಯ ವತಿಯಿಂದ ಹಾರೈಸುತ್ತೇವೆ .
ಬದುಕಿ ಬದುಕಲು ಬಿಡಿ ಕ್ರೌರ್ಯಕ್ಕೆ ಅಂತ್ಯ ಹಾಡಿ

Latest Stories

LEAVE A REPLY

Please enter your comment!
Please enter your name here