28.6 C
Bengaluru
Friday, October 4, 2024

ಸಾಮಾಜಿಕ ಕಳಕಳಿಯ ರೂವಾರಿ ಈ ನಮ್ಮ ಪಿಎಸ್ಐ :

Date:


ಇದೇನಪ್ಪ “ಸಾಮಾಜಿಕ ಕಳಕಳಿಯ ರೂವಾರಿ “ಒಬ್ಬ ಪಿಎಸ್ಐ !!
ಇದು ನಿಜಾನ ಹೌದು ಈ ಪ್ರಶ್ನೆ ನಮ್ಮಲ್ಲೂ ಮೂಡಿದ್ದು ಸಹಜ ಈತ ತಾನು ಸರಕಾರಿ ಹುದ್ಯೋಗಿ ಸರ್ಕಾರ ತನಗೆ ನೀಡುವ ಸಂಬಳಕ್ಕಾಗಿ ತನ್ನ ಮೇಲಧಿಕಾರಿಗಳು ಹೇಳಿದ ಕೆಲಸವನ್ನಷ್ಟೇ ಅಚ್ಚುಕಟ್ಟಾಗಿ ಮಾಡಿಕೊಂಡು ಇದ್ದಿದ್ದ್ರೆ ಇಂದು ನಾವು ಈತನನ್ನು ಈ ರೀತಿ ಕರೆಯುವ ಪ್ರಮೇಯವೇ ಬರುತ್ತಿರಲಿಲ್ಲ .ಆದರೆ ಇವರು ಮೊದಲಿನಿಂದಲು ಸಾಮಾಜಿಕ ಕಾಳಜಿ ಹೊಂದಿರುವ ವ್ಯಕ್ತಿ .
ಮೂಲತಃ ಬಳ್ಳಾರಿ ಜಿಲ್ಲೆ ಗೇಣಿಕಿಹಾಳ್ ಗ್ರಾಮದವರಾದ ಈ ನಮ್ಮ ಪಿಎಸ್ಐ ಶಾಂತಪ್ಪ ನವರು.ಕೃಷಿಕರಾದ ಶಿವಕುಮಾರ್ ಮತ್ತು ಜಡೆಮ್ಮನವರ್ ದಂಪತಿಗಳ ಮಗುವಾಗಿ ಜನಿಸಿ ಬಾಲ್ಯದಿಂದಲೇ ಕಷ್ಟ ಬಡತನ ಇವೆಲ್ಲವನ್ನೂ ಅನುಭವಿಸಿ ಸಾಧನೆಯ ಹಾದಿಯಲ್ಲಿ ಸಾಗಬೇಕೆಂಬ ಮಹದಾಸೆಯನ್ನು ಹೊತ್ತು ಬಹಳ ಕಷ್ಟ ಪಟ್ಟು ಓದಿ 2016ರ ಬ್ಯಾಚ್ ನ ಪಿಎಸ್ಐ ಆಗಿ ಆಯ್ಕೆ ಯಾದವರು.
ಭಿನ್ನ ರಲ್ಲಿ ವಿಭಿನ್ನ ಈ ನಮ್ಮ ಪಿಎಸ್ಐ :
ಹೇಗೆ ಇವರು ಎಲ್ಲರಿಗಿಂತ ಭಿನ್ನ ಎಂದು ಯೋಚಿಸುವುದಾದ್ರೆ ನಾವೆಲ್ಲರೂ ನಮ್ಮ ಹೆಸರಿನ ಮುಂದೆ ಸರ್ ನೇಮ್ ಎಂದು ನಮ್ಮ ತಂದೆಯವರ ಅಥವಾ ನಮ್ಮ ಕುಟುಂಬದ ಹೆಸರನ್ನು ಇಟ್ಟುಕೊಳ್ಳುವುದು ವಾಡಿಕೆ ಆದರೆ ಈ ನಮ್ಮ ವಿಭಿನ್ನರು ತಮ್ಮನ್ನು ಬಾಲ್ಯದಿಂದಲೂ ಬಹಳ ಕಷ್ಟ ಪಟ್ಟು ಸಾಕಿ ಸಲುಹಿದ್ದು ತಾಯಿಯೇ ,
ತಮ್ಮ ತಂದೆಯವರು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡಿದ್ದು ,ಸರಿಯಾಗಿ ಅವರ ಮುಖವನ್ನು ನೋಡಿರದ ಶಾಂತಪ್ಪ ನವರಿಗೆ ಸರ್ವಸ್ವ ವು ತಾಯಿಯೇ ಆದ್ದರಿಂದ ಅವರ ಹೆಸರಿನ ಮುಂದೆ ತಮ್ಮ ತಾಯಿಯ ಹೆಸರನ್ನು ಇಟ್ಟುಕೊಂಡಿದ್ದಾರೆ ಅವ್ರ ಪೂರ್ತಿ ಹೆಸರು ಶಾಂತಪ್ಪ ಜಡೆಯಮ್ಮನವರ್ .
ಇಂತಹ ವಿಭಿನ್ನ ಆಲೋಚನೆ ಹೊಂದಿರುವ ಈ ನಮ್ಮ ಪಿಎಸ್ಐ ನಮ್ಮ ಹೆಮ್ಮೆ
ಇಂದು ಇವರನ್ನು ಸಾಮಾಜಿಕ ಕಳಕಳಿಯ ರೂವಾರಿ ಎಂದು ಕರೆಯಲು ಕಾರಣವೂ ಇವರ ತಾಯಿಯೇ ಕಾರಣ , ಒಮ್ಮೆಮಗನನ್ನು ನೋಡಲು ಬೆಂಗಳೂರಿಗೆ ಬಂದಿದ್ದ ತಾಯಿಯನ್ನು ಬಸ್ ಹತ್ತಿಸಿ ಬರಲು ಗೊರಗುಂಟೆಪಾಳ್ಯ ಜಂಕ್ಷನ್ ಗೆ ಬಂದಿದ್ದ ಶಾಂತಪ್ಪ ನವರಿಗೆ ಎಷ್ಟು ಹೊತ್ತಾದ್ರೂ ಬಸ್ ಬರುವುದಿಲ್ಲ ಬಸ್ಗಾಗಿಕಾದು ಕಾದು ಸುಸ್ತಾದ ಶಾಂತಪ್ಪನವರ ತಾಯಿಯವರು ಜಲಭಾದೆ ಇಂದ ಪರಿತಪಿಸುವಂತಾಗುತ್ತದೆ.ಎಲ್ಲಿ ಹುಡುಕಿದರೂ ಟಾಯ್ಲೆಟ್ ವ್ಯವಸ್ಥೆ ಇರುವುದಿಲ್ಲ ಇದರಿಂದ ನೊಂದ ಅವರ ತಾಯಿಯವರು ಇದೆಂತ ಊರು ಅವ್ಯವಸ್ಥೆಯ ಆಗರ ಎಂದು ಬೈದು ಬೇಸರದಿಂದ ಹೊರಡುತ್ತಾರೆ .
ಇಂದೆಂದು ಇದರ ಬಗ್ಗೆ ಯೋಚಿಸದ ಶಾಂತಪ್ಪ ನವರ ಗಮನ ಸೆಳೆಯುತಾರೆ
ಪ್ರತಿದಿನ ಇಲ್ಲಿ ಟಾಯ್ಲೆಟ್ ಗಾಗಿ ಪರದಾಡುವ ಹೆಣ್ಣು ಮಕ್ಕಳ ತಾಯಂದಿರ ಶೋಚನೀಯ ಪರಿಸ್ಥಿತಿಯ ಬಗ್ಗೆ ಯೋಚಿಸಲು ಆರಂಭಿಸುತ್ತಾರೆ.ಪ್ರತಿನಿತ್ಯ ಸಾವಿರಾರು ಜನ ಸಂಚರಿಸುವ ಗೊರಗುಂಟೆಪಾಳ್ಯ ಜಂಕ್ಷನ್.
ರಾಜ್ಯದ ಉತ್ತರದ ಭಾಗದ ಕಡೆ ಪ್ರಯಾಣಿಸುವ ಸಾವಿರಾರು ಜನ.ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ

ನೂರು ದಿನಗಳ ನಿರಂತರ ಅಭಿಯಾನ ಮಾಡುತ್ತಾರೆ.

ಶೌಚಾಲಯಕ್ಕಾಗಿ ಪಿಎಸ್ಐ ನಿಂದ ನಿರಂತರ ಅಭಿಯಾನ.
ಟ್ವಿಟರ್ ನಲ್ಲಿ ಬರೋಬ್ಬರಿ ನೂರು ದಿನ ಅಭಿಯಾನ ನಡೆಸಿದ ಪಿಎಸ್ಐ ಶಾಂತಪ್ಪ.
ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ಸಾರ್ವಜನಿಕ ಶೌಚಾಲಯ ಬೇಕೆಂದು ಹೋರಾಟ ಮಾಡುತ್ತಾರೆ

ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಶುರು ಮಾಡುತಾರೆ ಆದರೆ ಇದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ
ಕೊನೆಗೆ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರು ಮಾಡಬೇಕಿದ್ದ ಕೆಲಸವನ್ನ ತಾವೇ ಮಾಡಿ ಪೂರೈಸಿದ ಪಿಎಸ್ಐ.
ನೂರು ದಿನಗಳ ಬಳಿಕ ತಾವೇ ಮೊಬೈಲ್ ಶೌಚಾಲಯ ನಿರ್ಮಿಸಲು ಮುಂದಾಗುತ್ತಾರೆ ಇದಕ್ಕಾಗಿ ಅವರು ಸ್ನೇಹಿತರಾದ ಚಕ್ರವರ್ತಿ ರಾಹುಲ್,ಯಶಸ್ ರವರ ಸಹಾಯ ಪಡೆದು ಭೂತಾನಇಂಟರ್ನ್ಯಾಷನಲ್ ಮೊಬೈಲ್ ಟಾಯ್ಲೆಟ್ ಕಂಪನಿ ಯನ್ನು ಸಂಪರ್ಕಿಸಿ ಮಾಸಿಕ 16000ರೂಪಾಯಿಗಳ ಒಪ್ಪಂದ ದಂತೆ ಮೊಬೈಲ್ ಟಾಯ್ಲೆಟ್ ಅನ್ನು ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ನಿರ್ಮಿಸುತಾರೆ ಸದ್ಯ ವಿಧಾನಸೌಧ ಭದ್ರತಾ ವಿಭಾಗದ ಪಿಎಸ್ಐ ಆಗಿರುವ ಶಾಂತಪ್ಪ ನವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪ್ರೇರಣೆಯಿಂದ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಿದ್ದಾಗಿ ತಿಳಿಸಿರುತಾರೆ
ದಿನಾಂಕ 16/06/2022ರಂದು ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಮೊಬೈಲ್ ಶೌಚಾಲಯ ವಾಹನ ನಿಲ್ಲಿಸಿದ ಪಿಎಸ್ಐ,ಅದರ ಉದ್ಘಾಟನೆಗೆ ಗಣ್ಯವ್ಯಕ್ತಿ ಗಳ ಮೊರೆ ಹೋಗದೆ ಎಲ್ಲರಿಂದ ನಗಣ್ಯ ರಾದ ಮಂಗಳಮುಖಿಯಾರಿಂದ ಶೌಚಾಲಯ ಉದ್ಘಾಟನೆ ಮಾಡಿಸುವ ಮುಖಾಂತರ ಅವರು ನಮ್ಮ ನಿಮ್ಮಂತೆ ಸಮಾಜಮುಖಿ ಗಳು ಎಂಬುದನ್ನು ಸಾರಿದ್ದಾರೆ.

ಹಗಲು ರಾತ್ರಿ ಬಸ್ ಗಳಿಗೆ ಕಾದು ನಿಂತಿರೋ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ ಪಿಎಸ್ಐ ಶಾಂತಪ್ಪಜಡೆಮ್ಮನವರ್.

ತಮ್ಮ ತಾಯಿ ಅನುಭವಿಸಿದ ತೊಂದರೆ ಬೇರೆಯವರು ಅನುಭವಿಸಬಾರದು ಅಂತ ದಿಟ್ಟ ಹೆಜ್ಜೆ ಇಟ್ಟು ಅದನ್ನು ಪೂರೈಸಿದ ಹೆಮ್ಮೆಯ ಛಲವಾದಿ ಶಾಂತಪ್ಪಜಡೆಮ್ಮನವರ್ .
ಸದ್ಯ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಭಿನ್ನರಲ್ಲಿ ವಿಭಿನ್ನ ಸಾಮಾಜಿಕ ಕಳಕಳಿಯ ಹರಿಕಾರ ಶಾಂತಪ್ಪ ಜಡೆಮ್ಮನವರಿಗೆ ನಮ್ಮ ತಂಡದಿಂದ ಹಾರ್ದಿಕ ಶುಭಾಶಯಗಳು ತಾವು ಕಂಡಂತಹ ಕನಸುಗಳೆಲ್ಲೆಲ್ಲವೂ ಸಾಕಾರವಾಗಲಿ ತಮ್ಮ ಈ ಸಾಮಾಜಿಕ ಕಳಕಳಿ ಹೀಗೆ ಮುಂದುವರೆಯಲಿ ನಿಮ್ಮಿಂದ ಇನ್ನಷ್ಟು ಮಂದಿ ಪ್ರೇರೇಪಿತರಾಗಿ ಸಮಾಜ ಸೇವೆಗೆ ಮುಂದಾಗಲಿ .
ಹಾಟ್ಸ್ ಆಫ್ ಟು ಕರ್ನಾಟಕ ಪೊಲೀಸ್

Latest Stories

LEAVE A REPLY

Please enter your comment!
Please enter your name here