ಎಂದಿನಂತೆ ತಮ್ಮ ಬಿಡುವಿಲ್ಲ ಸಮಯದಲ್ಲೂ ಬಹಳ ಲವ ಲವಿಕೆ ಇಂದಲೇ ತಮ್ಮ ದಿನಚರಿ ಪ್ರಾರಂಭಿಸುವ ಈ ಕಾಮನ್ ಮ್ಯಾನ್ ನಮ್ಮ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ. ಜನತಾ ದರ್ಶನ ಮುಕಾಂತರ ಜನರ ಅಹವಾಲು ಸ್ವೀಕರಿಸಿ ಅದಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಗಳು ಯೋಗ ದಿನಾಚರಣೆಯ ನಂತರ ನೇರವಾಗಿ ಬೆಂಗಳೂರಿಗೆ ಆಗಮಿಸಿ ತಮ್ಮ ಧಣಿವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮೊದಲು ತಮಗಾಗಿ ತಮ್ಮ ಮನೆ ಬಳಿ ಬಂದು ಅಹವಾಲು ನೀಡಲು ಕಾದು ಕುಳಿತ ಜನರ ಬಳಿ ಬರುತ್ತಾರೆ,ಸ್ವಲ್ಪವೂ ಬೇಸರಿಸದೆ ಅವರ ಅಹವಾಲಿಗೆ ಧನಿ ಯಾಗುತ್ತಾರೆ .
ಕೇವಲ ಎರಡು ಗಂಟೆಗಳ ಕಾಲಾವಧಿಯಲ್ಲಿ ಜನತಾ ದರ್ಶನದಲ್ಲಿ ಮಹಿಳೆಯ ಮನವಿಗೆ ಸ್ಪಂದಿಸುತ್ತಾರೆ .
ಕುಮಾರಿ ಕೃಷ್ಣವೇಣಿ ಎಂಬ ಮಗು ದೃಷ್ಟಿ ದೋಷ ಮತ್ತು ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುತದೆ .
ಕೃಷ್ಣವೇಣಿ ಎಂಬ ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದು ಡಾಕ್ಟರ್ ಹೇಳಿರುತ್ತಾರೆ.
ಅಷ್ಟೊಂದು ಹಣ ವಿಲ್ಲದ ಮಗುವಿನ ತಾಯಿ ಬೇರೆ ದಾರಿ ಕಾಣದೆ ನೇರ ಮುಖ್ಯ ಮಂತ್ರಿಗಳ ಭೇಟಿಗೆ ಧಾವಿಸುತ್ತಾರೆ,
“ಮಗುವಿನ ಚಿಕಿತ್ಸೆಗೆ ನೆರವು ನೀಡಿ ಪುಣ್ಯಕಟ್ಟಿಕೊಳ್ಳಿ “ಎಂದು ಮುಖ್ಯಮಂತ್ರಿಗಳನ್ನು ಮಗುವಿನ ತಾಯಿ ಕೇಳಿಕೊಳ್ಳುತ್ತಾರೆ ,ತನ್ನ ಮಗುವಿಗೆ ಬಂದಿರುವ ದುಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾರೆ.
ಅನಾರೋಗ್ಯಕ್ಕೆ ತುತ್ತಾದ ಮಗುವಿನ ಪರಿಸ್ಥಿತಿ ಕಂಡು ತಾಯಿ ಹೃದಯದ ಕಾಮನ್ ಮ್ಯಾನ್ ನ ಮನ ಕರಗುತ್ತದೆ.
ತಾಯಿ ಮನಕೆ ಭರವಸೆಯ ಹಸ್ತ ಚಾಚುತ್ತಾರೆ
ಮಗುವಿನ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ
ಕ್ಷಣ ಮಾತ್ರದಲ್ಲಿ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಮಗುವಿನ ತಾಯಿಗೆಸಿಎಂ ಭರವಸೆ ನೀಡುತ್ತಾರೆ.
ಭರವಸೆ ನೀಡಿದ ಎರಡು ಗಂಟೆ ಒಳಗಾಗಿ ಮುಖ್ಯಮಂತ್ರಿಗಳು ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿ
ಸಂಬಂಧಪಟ್ಟ ಆಸ್ಪತ್ರೆಗೆ ಪತ್ರ ಬರೆಯುವಂತೆ ಸೂಚಿಸಿದರು
ಆ ಪ್ರಕಾರ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಪತ್ರ ಬರೆಯಲಾಯ್ತು
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಾಗುವುದು
ಮಗುವಿಗೆ ಸಂಪೂರ್ಣವಾದ ಚಿಕಿತ್ಸೆ ನೀಡಿದ ನಂತರ ಸರ್ಕಾರಕ್ಕೆಬಿಲ್ ಗಳನ್ನು ಸಲ್ಲಿಸುವಂತೆ ಪತ್ರದಲ್ಲಿ ಎಸ್ಡಿಎಂ ಆಸ್ಪತ್ರೆಗೆ ಸೂಚಿಸಲಾಗಿದೆ
ನಿಜಕ್ಕೂ ಇದೊಂದು ಮಾನವೀಯ ಕಾರ್ಯ
ಕೇವಲ ಎರಡು ಗಂಟೆ ಗಳ ಅವಧಿಯಲ್ಲಿ ಇಡೀ ಸಮಸ್ಯೇಗೆ ಪರಿಹಾರ ನೀಡುವುದು ಸರಳ ವಿಷಯವಲ್ಲ.
ಸರ್ಕಾರ ವನ್ನು ಹುಡುಕಿ ಕೊಂಡು ಜನರು ಸರ್ಕಾರದ ಬಳಿ ಬರಬಾರದು ಸರ್ಕಾರವೇ ಜನಗಳನ್ನು ಹುಡುಕಿ ಕೊಂಡು ಹೋಗುವಂತಾಗ ಬೇಕು ಎಂಬ ದ್ಯೆಯೊದೇಶವನ್ನು ಹೊಂದಿರುವ , ಸಿಎಂ ಎಂದರೆ ಚೀಫ್ ಮಿನಿಸ್ಟರ್ ಅಲ್ಲ ನಾನೊಬ್ಬ ಕಾಮನ್ ಮ್ಯಾನ್ ಎಂದು ಘೋಷಿಸಿ ಕೊಂಡಿರುವ ಈ ಕಾಮನ್ ಮ್ಯಾನ್ ಇಂದ ಮಾತ್ರ ಸಾಧ್ಯ.
ಈ ನಮ್ಮ ಕಾಮನ್ ಮ್ಯಾನ್ರ ಎಲ್ಲ ದ್ಯೇಯೋದ್ಧೇಶಗಳು ಈಡೇರಲಿ ಇನ್ನಷ್ಟು ತಾಯಂದಿರ ,ಬಡ ಜನರ ಪಾಲಿಗೆ ಇವರು ಬೆಳಕಾಗಲಿ ಎಂದು ಆಶಿಸುತ್ತಾ ಗುಡ್ luck ಕಾಮನ್ ಮ್ಯಾನ್
ಮಗುವಿಗೆ ಚಿಕಿತ್ಸೆ ಕೊಡಿಸಲು ಅಸಾಧ್ಯ
ಹೀಗಾಗಿ ನೆರವು ನೀಡಿ ಎಂದು ಕೇಳಿದ ಮಹಿಳೆಗೆ ಮುಖ್ಯಮಂತ್ರಿಗಳು ಆಸರೆಯಾಗಿದ್ದಾರೆ
ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳ ಮಾತು ಕೆಲವೇ ಗಂಟೆಗಳಲ್ಲಿ ಅಧಿಕೃತ ಭರವಸೆಯಾಗಿದೆ
ಮುಖ್ಯಮಂತ್ರಿಗಳ ಈ ಸ್ಪಂದನೆಗೆ ಮಗುವಿನ ತಾಯಿ ಪಡಿಸಿದ್ದಾಳೆ