ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು, ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅವುಗಳಲ್ಲಿ ಒಂದು ನೊಂದವರ ದಿನ ಎಂದು ಪ್ರತಿ ತಿಂಗಳಿನ ಮೂರನೇ ಭಾನುವಾರ ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆ ಹಾಗೂ ಪೊಲೀಸ್ ಅಧಿಕಾರಿಗಳ ಕಚೇರಿಯಲ್ಲಿ ನೊಂದವರ ದಿನ ಆಚರಿಸಲು ನಿರ್ಧರಿಸಲಾಗಿದೆ.
ಜನಸ್ನೇಹಿ ಪೊಲೀಸ್ ಎಂಬುದು ಕೇವಲ ಘೋಷಣೆಯಾಗಬಾರದು, ಅದು ವಾಸ್ತವ ಎಂಬುದನ್ನು ಸಾಬೀತುಪಡಿಸಲು ನೊಂದವರ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸರೆಂದರೆ ಮಾರು ದೂರ ಹೋಗುವ, ಏನೇ ಕಷ್ಟ ಬಂದರೂ ಪೊಲೀಸ್ ಠಾಣೆಗೆ ಹೋಗಬಾರದು ಎಂಬ ಮನಸ್ಥಿತಿ ಬದಲಾಗಬೇಕು, ಎಲ್ಲಾ ಪೊಲೀಸ್ ಠಾಣೆ ಹಾಗೂ ಅಧಿಕಾರಿಗಳ ಕಚೇರಿಗಳಲ್ಲಿ ಸಂತ್ರಸ್ತರ ಅಳಲನ್ನು ಆಲಿಸಿ ಅವರಿಗೆ ಧೈರ್ಯ ನೀಡುವ ಕಾರ್ಯವಾಗಬೇಕು. “ಪೊಲೀಸರು ಜನಸ್ನೇಹಿ ಯಾಗಿರಬೇಕು ಪೊಲೀಸರೆಂದರೆ ಮಾತನಾಡಲು ದೂರುನೀಡಲು, ಭಯ ಪಡಬೇಕಾಗಿಲ್ಲ ಯಾವುದಾದರೂ ದೂರು ನೀಡಿದ್ದರೆ ಪ್ರಕರಣ ದಾಖಲಾಗಿದ್ದರೆ ತನಿಖೆಯ ಬಗ್ಗೆ ವಿಚಾರಿಸಲು ಭಯ ಪಡಬೇಕಾಗಿಲ್ಲ, ಪೊಲೀಸರಿರುವುದೇ ಜನರ ರಕ್ಷಣೆಗೆ” ಎಂಬುದು ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಮಾತು.
ನೊಂದವರ ದಿನಾಚರಣೆ ಇಂದ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮುಕ್ತ ಸಂವಾದಕ್ಕೆ ವೇದಿಕೆಯಾಗಿದೆ,
ಈ ರೀತಿಯ ಚರ್ಚೆ ಇಂದ ಅಪರಾಧ ಪ್ರಕರಣಗಳ ತನಿಖೆಗೆ ಹಾಗೂ ನಿಯಂತ್ರಣಕ್ಕೆ ಪರೋಕ್ಷವಾಗಿ ಈ ಕಾರ್ಯಕ್ರಮ ನೆರವಾಗುತ್ತಿದೆ. ಕಳ್ಳತನ, ಜಮೀನು ವಿವಾದ, ಮತ್ತಿತರ ಸಣ್ಣ ಪುಟ್ಟ ಪ್ರಕರಣಗಳಿಗೆ ಸಂಬAಧಿಸದAತೆ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ನೀಡಲು ಪ್ರಯತ್ನ.
ಹಾಗೆಯೇ ಅತ್ಯಾಚಾರ, ದರೋಡೆ, ಲೈಂಗಿಕ ದೌರ್ಜನ್ಯ, ಕೊಲೆ, ಜಾತಿ ನಿಂದನೆ, ವರದಕ್ಷಿಣೆ ಸಾವು ಇಂತಹ ಪ್ರಕರಣಗಳ ಬಗೆಗಿನ ಚರ್ಚೆ ಹಾಗೂ ಪರಿಹಾರಕ್ಕೆ ಸಂಬAದಿಸಿದ ಚರ್ಚೆ ಅಹವಾಲು ಸ್ವೀಕಾರ ಸಭೆ ಎಸ್ ಪಿ ಹಾಗೂ ಡಿ ವೈ ಎಸ್ ಪಿ ನೇತೃತ್ವದಲ್ಲಿ ನಡೆಯುತ್ತದೆ.
ಸಾರ್ವಜನಿಕರು ಮತ್ತು ಸಂತ್ರಸ್ತರಿಗೆ ಜಾಮೀನು ಮೇಲೆ ಹೊರ ಬಂದ ವ್ಯಕ್ತಿಗಳಿಂದ ಅಥವಾ ಆರೋಪಿಯಿಂದ ಆರೋಪಿ ಕಡೆಯವರಿಂದ, ಏನಾದ್ರು ತೊಂದರೆ ಅಥವಾ ಬೆದರಿಕೆ ಏನಾದರೂ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದು, ಮಾಹಿತಿ ಪರಿಶೀಲನೆ ನಡೆಸಿ ಪೊಲೀಸರು ಕ್ರಮ ಕೈಗೊಳ್ಳಲು ಈ ಸಭೆಯಿಂದ ಅನುಕೂಲವಾಗುತ್ತದೆ.
ಹಲವು ಪ್ರಕರಣಗಳಲ್ಲಿ ಬಾಕಿ ಉಳಿದಿರುವ ಮತ್ತು ಇತ್ಯರ್ಥ ವಾಗದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ಹಾಗೂ ಸಂತ್ರಸ್ತರಿಗೆ ಸಮಾಧಾನ, ಸಾಂತ್ವನ ಮತ್ತು ಭರವಸೆ ತುಂಬುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಪೊಲೀಸ್ ಹಾಗೂ ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿರುವುದೇ ಸಾರ್ವಜನಿಕರ ಮಾನ ಪ್ರಾಣ ರಕ್ಷಣೆಗಾಗಿ ಎಂಬುದು ಮನವರಿಕೆಯಾಗಬೇಕು, ಪೊಲೀಸರು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಈ ವೇದಿಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.
ನೊಂದವರ ದಿನ…

Date: