22.8 C
Bengaluru
Friday, September 29, 2023

ರೀಲ್ ಹೀರೋ” ಅಲ್ಲ “”ರಿಯಲ್ ಹೀರೋ”

Date:

ಇವರು ತೆರೆಮೇಲೆ ಬರುವ ಹೀರೋ ಅಲ್ಲ ರಿಯಲ್ ಲೈಫನಲ್ಲಿ ಹಲವರಿಗೆ ರಿಯಲ್ ಲೈಫ್ ಹೀರೋ ಆಗಿರುವಂತವರು. ಪೊಲೀಸ್ ಎಂದರೆ ಕಾನೂನು ಪಾಲಕರು ಕಾನೂನು ರಕ್ಷಕರು, ಎಂದೆಲ್ಲ ಬಿಂಬಿತವಾಗಿರುವ ಪೊಲೀಸ್ ಇಲಾಖೆ ಹೀಗೊಂದು ವಿನೂತನ ಪ್ರಯತ್ನ ದಿಂದ ಶಿಕ್ಷಣ ಕ್ರಾಂತಿ ಗೆ ನಾಂದಿ ಹಾಡಿದೆ.
ಸದ್ಯ ಬಂಡೆಪಾಳ್ಯ ಠಾಣೆಯ ಇನ್ಸ್ ಪೆಕ್ಟರ್ ಆಗಿರುವಂತ ಎಲ್. ವೈ ರಾಜೇಶ್ ರವರ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಹಾಗೂ ಪ್ರಶಂಸೆ ಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ತಾವು ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬಂತೆ ಮಾದರಿ ಪೊಲೀಸ್ ಎನಿಸಿಕೊಂಡಿದ್ದಾರೆ.


ಸಮಾಜಮುಖಿ ಪೊಲೀಸ್: ಮೂಲತಃ ಶಿಕ್ಷಕರ ಕುಟುಂಬದಿAದ ಬಂದAತಹರಾಜೇಶ್‌ರವರು ತಮ್ಮನ್ನು ಸುಸಂಕೃತರನ್ನಾಗಿಸಿದ ತಾಯಿಯವರ ಹಲವು ಮಾತುಗಳಿಂದ ಬಹಳಷ್ಟು ಪ್ರೇರೇಪಿತರಾದವರು. ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ ಬಹಳಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತಮನ್ನು ತಾವು ತೊಡಗಿಸಿ ಕೊಂಡವರು, ಅಪರಾಧಿಗಳ ಹಾಗೂ ಅಪರಾಧ ಹಿನ್ನಲೆ ಉಳ್ಳವರ ಬಂಧನಕಷ್ಟೇ ತಮ್ಮ ಅಧಿಕಾರವನ್ನು ಬಳಸಿಕೊಳ್ಳದೆ, ಅವರ ಮನಃಪರಿವರ್ತೆನೆಗಾಗಿ ಹಲವು ಕಾರ್ಯಕ್ರಮಗಳನ್ನು ಮಾನದಂಡಗಳನ್ನು ಕಾರ್ಯರೂಪಕ್ಕೆ ತಂದವರು. ಇವರ ಸಮಾಜಮುಖಿ ಕಾರ್ಯಗಳು ಹಾಗೂ ಇವರ ಕಾರ್ಯವೈಖರಿ ಎಲ್ಲವೂ ಪ್ರಶಂಸನೀಯವೇ ಆದರೆ ಅದರ ಬಗೆಗಿನ ಸವಿಸ್ತಾರ ವರದಿ ನೀಡಲು ಹೊರಟರೆ ಪುಟಗಟ್ಟಲೆ ಒಂದು ಪುಸ್ತಕವನ್ನೇ ಅದಕ್ಕಾಗಿ ಮೀಸಲಿಡಬೇಕಾಗುತ್ತದೆ,
ಕೇವಲ ವಿಡಂಬಡಣೆಗಾಗಿ ಈ ಮಾತನ್ನು ಬಳಸದೆ ಅವರ ಸಾಮಾಜಿಕ ಕಳಕಳಿಯನ್ನು ಮುಕ್ತ ಕಂಠದಿAದ ಶ್ಲಾಘಿಸಬೇಕಾಗಿದೆ. ಈಗ ಇವರನ್ನು ಶಿಕ್ಷಣ ಹರಿಕಾರ ಎನ್ನಬಹುದು. ಅದಕ್ಕೆ ಕಾರಣ ಮಕ್ಕಳ ಬಗ್ಗೆ ಇವರಿಗಿರುವ ನೈತಿಕ ಹಾಗೂ ಸಾಮಾಜಿಕ ಕಾಳಜಿ. ಮಕ್ಕಳು ಯಾವಾಗ ಶಿಕ್ಷಣದಿಂದ ವಂಚಿತರಾಗ್ತಾರೋ ಆಗ ಅವರು ಹೆಚ್ಚು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವ ಹೆಚ್ಚಿರುತ್ತದೆ ಎಂದು ತಮ್ಮ ತಾಯಿಯವರು ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡ ರಾಜೇಶ್‌ರವರು,
ಮೊದಲು ಚಿಂತಿಸಿದ್ದು ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾದ ಮಕ್ಕಳ ಭವಿಷ್ಯದ ಬಗ್ಗೆ. ಅನುತ್ತೀರ್ಣರಾದ ಮಕ್ಕಳು ಖಿನ್ನತೆಯಿಂದಲೋ, ಇನ್ನು ನಮಗೆ ಭವಿಷ್ಯವೇ ಇಲ್ಲ, ಎಲ್ಲ ಮುಗಿದೇಹೋಯ್ತು ಎಂಬಂತೆ ಚಿಂತೆಗೀಡಾಗಿ ಮುಂದೆ ಅಡಿ ಇಡಲೂ ಹೆದರಿ ತಮ್ಮ ಶಿಕ್ಷಣವನ್ನೇ ಕಡಿತ ಗೊಳಿಸಿ ಕೊಳ್ಳುವ ಸಂಭವವೇ ಹೆಚ್ಚು. ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಅವರು ಅನುತ್ತೀರ್ಣರಾಗಿರುವ ವಿಷಯಗಳ ಬಗ್ಗೆ ತರಬೇತಿ ನೀಡಲು ನಿರ್ಧರಿಸುತ್ತಾರೆ .ಅವರ ಭವಿಷ್ಯದ ಬಗ್ಗೆ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿ ಅವರು ಮತ್ತೆ ಪರೀಕ್ಷೆ ಎದುರಿಸುವಂತೆ ಅವರನ್ನು ಸನ್ನದ್ಧಗೊಳಿಸಲು ನಿರ್ಧರಿಸುತ್ತಾರೆ.
ಪ್ರತೀ ಪಠ್ಯ ವಿಷಯದಲ್ಲಿ ಪರಿಣಿತಿ ಪಡೆದಿರುವ ಶಿಕ್ಷಕರನ್ನು ಒಂದೆಡೆ ಸೇರಿಸಿ ಇಪ್ಪತ್ತೊಂದು ದಿನಗಳ ಕಾಲ ಆ ಮಕ್ಕಳಿಗೆ ಪಾಠ ಮತ್ತು ಕಲಿಕೆಯ ಕಾರ್ಯಾಗಾರ ನಡೆಸಿ, ಅವರನ್ನು ಪರೀಕ್ಷೆಗೆ ಸಿದ್ಧರನ್ನಾಗಿಸುತ್ತಾರೆ. ಇದಕ್ಕಾಗಿ ಹಲವು ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಮನವಿ ಮಾಡಿಕೊಂಡು ಪ್ರತಿ ಪಠ್ಯ ವಿಷಯಗಳಲ್ಲಿ ಪರಿಣಿತಿ ಪಡೆದಿರುವ ಶಿಕ್ಷಕರನ್ನು ಪಾಠ ಮಾಡಲು ಕಳಿಸಿಕೊಡುವಂತೆ ನಿವೇದಿಸಿಕೊಳ್ಳುತ್ತಾರೆ.
ಈ ಕಾರ್ಯಕ್ಕೆ ತಮ್ಮ ಸಹೋದ್ಯೋಗಿಗಳಾದ ಪಿಎಸ್‌ಐ ಮುಜಾಮಿಲ್ ಹಾಗೂ ಚಿಕ್ಕಯ್ಯರವರನ್ನು ಕೈಜೋಡಿಸುವಂತೆ ಹೇಳುತ್ತಾರೆ. ಮಕ್ಕಳನ್ನು ಒಟ್ಟು ಗೂಡಿಸುವುದರಿಂದ ಹಿಡಿದು ವೇಳಾ ಪಟ್ಟಿ ತಯಾರಿಸುವುದು ಮಕ್ಕಳ ಹಾಜರಾತಿ ನೋಡಿಕೊಳ್ಳುವುದು, ಮಕ್ಕಳ ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದು, ಶಿಕ್ಷಕರ ವೇಳಾಪಟ್ಟಿ ತಯಾರಿಸಿ ಅವರ ಸಮಯಕ್ಕೆ ಅನುವು ಮಾಡಿಕೊಡುವುದು ಹೀಗೆ ಅನೇಕ ಜವಾಬ್ದಾರಿಗಳನ್ನು ಹೊತ್ತು ಕಾರ್ಯಾಗಾರ ನಡೆಸಿ ಅದು ಯಶಸ್ವಿಯಾಗುವಂತೆ ನೋಡಿಕೊಳ್ಳುವಲ್ಲಿ ಇವರೆಲ್ಲರ ಶ್ರಮ ಅವಿಸ್ಮರಣೀಯ.
ಇವರ ಪರಿಶ್ರಮ, ಏಕಾಗ್ರತೆ ಅವರ ನಂಬಿಕೆ ಸುಳ್ಳಾಗುವುದಿಲ್ಲ ಪರೀಕ್ಷೆ ಪಡೆದಿದ್ದ ೯೦ ವಿದ್ಯಾರ್ಥಿಗಳ ಪೈಕಿ ೬೫ ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಮುಂದಿನ ಭವ್ಯ ಭವಿಷ್ಯಕ್ಕೆ ಕಾರಣರಾದ ಇನ್ಸ್ಪೆಕ್ಟರ್ ರಾಜೇಶ್‌ರವರ ಕಾರ್ಯ ವೈಖರಿಗೆ ತಲೆ ಭಾಗಿದ್ದಾರೆ. ಇದರಲ್ಲಿ ಗಮನಾರ್ಹ ವಿಷಯವೆಂದರೆ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ರಾಜೇಶ್‌ರವರ ಶಿಕ್ಷಣ ಕಾರ್ಯಾಗಾರದಲ್ಲಿ ಪಾಲ್ಗೊಂಡ ಹಲವು ವಿದ್ಯಾರ್ಥಿಗಳಲ್ಲಿ ಎಲ್ಲಾ ವಿಷಯಗಳಲ್ಲೂ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಇಂದು ನಾಲ್ಕೆöÊದು ವಿಷಯಗಳಲ್ಲಿ ಉತ್ತೀರ್ಣ ರಾಗಿರುವುದು ಬಹಳ ಸಂತಸ ತಂದಿದೆ ಎನ್ನುತ್ತಾರೆ.


ವಿದ್ಯಾರ್ಥಿಗಳ ಪೋಷಕರು ಮಾತನಾಡಿ : ಪೊಲೀಸ್ ನವರು ಕರೆ ಮಾಡಿ ನಮ್ಮ ಮಕ್ಕಳು ಅನುತ್ತೀರ್ಣ ರಾಗಿದ್ದು ಅವರಿಗೆ ಉಚಿತ ಮಾರ್ಗದರ್ಶನ ಮತ್ತು ಪಾಠ ಹೇಳಿಕೊಡುವುದಾಗಿ ತಿಳಿಸಿದಾಗ ನಿಜಕ್ಕೂನಮ್ಮಿಂದ ನಂಬಲೂ ಆಗಲಿಲ್ಲ ಆದರೆ ಈಗ ಇನ್ಸ್ಪೆಕ್ಟರ್‌ರವರ ಬಗ್ಗೆ ಹೆಮ್ಮೆ ಎನಿಸುತ್ತಿದೆ.


ಮತ್ತೊಬ್ಬ ವಿದ್ಯಾರ್ಥಿಯ ಪೋಷಕರು: ನಾವು ಬಹಳ ಕೆಳ ಮಧ್ಯಮ ವರ್ಗದವರಾಗಿದ್ದು ನಮಗೆ ದುಡಿಮೆಯೇ ಮೂಲ. ನಮ್ಮ ಮಗು ಅನುತ್ತೀರ್ಣನಾದ ಕೂಡಲೇ ನಾವು ಅವನನ್ನು ಎಲ್ಲಾದರೂ ಕೆಲಸಕ್ಕೆ ಸೇರಿಸೋಣ ಎಂದು ಯೋಚಿಸಿದ್ದೆವು ಆದರೆ ಇನ್ಸೆ÷್ಪಕ್ಟರ್ ರಾಜೇಶ್ ರವರ ಮಾತಿನಿಂದ ನಂಬಿಕೆ ಬಂದು ಪಾಠಕ್ಕೆ ಕಳುಹಿಸಿದೆವು, ಪಾಠದ ಜೊತೆಗೆ ಮಕ್ಕಳಿಗೆ ಊಟ ತಿಂಡಿಯ ವ್ಯವಸ್ಥೆಯನ್ನು ಇನ್ಸೆ÷್ಪಕ್ಟರ್ ನೋಡಿಕೊಂಡರು, ಇಂದು ನನ್ನ ಮಗ ಉತ್ತೀರ್ಣ ನಾಗಲು ಅವರೇ ಕಾರಣ.ನಮ್ಮ ಸೌಭಾಗ್ಯ ಎಂಬಂತೆ ಇವರು ನಮ್ಮ ಏರಿಯಾದ ಇನ್ಸೆ÷್ಪಕ್ಟರ್ ಆಗಿ ಬಂದು ನಮ್ಮ ಮಕ್ಕಳ ಭವಿಷ್ಯಕ್ಕೆ ಬೆಳಕಾಗಿದ್ದರೆ.
ಅಬ್ಬಾ ಇನ್ನೂ ಹತ್ತು ಹಲವು ಪ್ರಶಂಸೆ, ಹಾಗೂ ಶ್ಲಾಘನೆ ವ್ಯಕ್ತವಾಗುತ್ತಿದೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ಕಳಕಳಿಯ ವ್ಯಕ್ತಿತ್ವ ಹೊಂದಿದ್ದಾರೆ, ಹಾಗೆಯೆ ವ್ಯಕ್ತಿಗತವಾಗಿ ಕಾಳಜಿ ತೋರಿದ್ದಾರೆ ಹಾಗೂ ಅದಕ್ಕೆ ತಕ್ಕಂತೆ ಮೆಚ್ಚುಗೆ, ಪ್ರಶಂಸೆ ಹಾರೈಕೆ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ.
ಕಾರ್ಯಾಗಾರ ಆರಂಭಿಸಿದ ಸಮಯದ ಡಿ.ಸಿ.ಪಿ ಆಗಿದ್ದಂತಹ ಶ್ರೀನಾಥ್ ಮಹದೇವ್ ಜೋಶಿ ಹಾಗೂ ಎಂ ಎಲ್ ಎ ಸತೀಶರೆಡ್ಡಿ ಯವರು ಇವರ ಕಾರ್ಯಕ್ಕೆ ಸಂತಸ ವ್ಯಕ್ತ ಪಡಿಸಿ ಅವರ ಕಾರ್ಯದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡುವಂತೆ ನಡೆದುಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ಹೀರೋ ಆಗಿರುವ ಇನ್ಸ್ಪೆಕ್ಟರ್ ರಾಜೇಶ್‌ರವರೇ ನಿಮ್ಮ ಸಮಾಜಮುಖಿ ಕಾರ್ಯಗಳು ಅವಿರತವಾಗಿ ಸಾಗಲಿ,
ಹ್ಯಾಟ್ಸ್ ಆಫ್ ಟು ಯು ಇನ್ಸ್ಪೆಕ್ಟರ್

Latest Stories

LEAVE A REPLY

Please enter your comment!
Please enter your name here