22.3 C
Bengaluru
Thursday, June 20, 2024

ಚಿಣ್ಣರ ಕನಸಿನ ಜಾದೂಗಾರ-ಡಿಸಿಪಿ ಸಿ.ಕೆ.ಬಾಬಾ.

Date:


ಐ ಪಿ ಎಸ್ ಅಂದ್ರೆ ಇಂಡಿಯನ್ ಪೊಲೀಸ್ ಸರ್ವಿಸ್. ಹೌದು ಜೀವನದಲ್ಲಿ ಐಪಿಎಸ್ ಆಗಲು ಯುಪಿ ಎಸ್ ಸಿ ಪರೀಕ್ಷೆ ಗಾಗಿ ತಯಾರಿ ನಡೆಸುತ್ತಿರುವವರು ಲಕ್ಷಂತಾರ ಮಂದಿ. ಪರೀಕ್ಷಾರ್ಥಿಗಳು ತಮ್ಮ ಜೀವನದ ಮಹತ್ವಾಕಾಂಕ್ಷೆಯ ಹುದ್ದೆಗೇರಲು ಕನಸು ಕಾಣುತ್ತಿರುತ್ತಾರೆ ಆದರೆ ಅದು ಅಷ್ಟು ಸುಲಭದ ಮಾತಲ್ಲ, ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಮಂದಿ ಭಗೀರಥ ಪ್ರಯತ್ನ ಮಾಡುತ್ತಿರುತ್ತಾರೆ.


ಈ ಅವಕಾಶಕ್ಕೆ ಸದಾ ಶ್ರದ್ದೆ ಹಾಗೂ ಪರೀಕ್ಷಾ ತಯಾರಿ ಅತ್ಯವಶ್ಯಕ. ಇಷ್ಟೆಲ್ಲಾ ಶ್ರಮದ ನಡುವೆ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ನಮ್ಮ ಹೆಮ್ಮೆಯ ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ.ಆಗ್ನೇಯ ವಿಭಾಗದ ಡಿಸಿಪಿ ಯಾಗಿರುವ ಸಿ .ಕೆ. ಬಾಬಾ ರವರು ಜೀವನ್ಮರಣದ ಹೋರಾಟ ನಡೆಸುತ್ತಿರುವ ಚಿಣ್ಣರ ಕನಸನ್ನು ನನಸು ಮಾಡಿರುವ ಜಾದೂಗಾರರಾಗಿದ್ದಾರೆ.
ಘಟನೆಯ ವಿವರ : ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯೂಕೇಮಿಯಾದಿಂದ ಬಳಲುತ್ತಿರುವ ಮಿಥಿಲೇಶ್ ಚಿಕ್ಕಂದಿನಿAದಲೂ ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದವ,ಸದ್ಯ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ. ಇವನ ಹಾಗೆ ತಲಸ್ಸೇಮಿಯಾದಿಂದ ಬಳಲುತ್ತಿರುವ ಮಹಮ್ಮದ್ ಸಲ್ಮಾನ್ ಕೂಡ ನಾರಾಯಣ ಹೃದಯಾಲಯ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಕೂಡ ಪೊಲೀಸ್ ಆಗುವ ಕನಸು ಹೊತ್ತಿದ್ದ. ಗುಣವಾಗದ ಖಾಯಿಲೆಗೆ ತುತ್ತಾಗಿರುವ ಈ ಪೋರರ ಕನಸುಗಳು ನನಸಾಗದೇ ಉಳಿದು ಬಿಡುತ್ತವೇನೋ ಎನಿಸಿ ಇವರ ಕನಸುಗಳ ಬಗ್ಗೆ ತಿಳಿದಿದ್ದ ಮೇಕ್ ಎ ವಿಶ್ ಇಂಡಿಯಾ ಫೌಂಡೇಶನ್‌ನವರು ಡಿಸಿಪಿ ಬಾಬಾ ರವರನ್ನು ಸಂಪರ್ಕಿಸಿ ಮಕ್ಕಳನ್ನು ಬಾಧಿಸುತ್ತಿರುವ ಖಾಯಿಲೆ ಹಾಗೂ ಮಕ್ಕಳ ಕನಸಿನ ಬಗ್ಗೆ ತಿಳಿಸುತ್ತಾರೆ.
ಖಾಕಿಯೊಳಗಿನ ಮಾನವೀಯತೆ ಆ ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗುತ್ತದೆ. ಒಂದು ದಿನದ ಮಟ್ಟಿಗೆ ಮಕ್ಕಳಿಗೆ ಪೊಲೀಸ್ ಉಡುಪು ಧರಿಸಿ ಪೊಲೀಸ್ ಆಫೀಸರ್ ಗೌರವ ಕೊಡಲು ಡಿಸಿಪಿ ನಿರ್ಧರಿಸುತ್ತಾರೆ, ಅದರಂತೆ ಮಕ್ಕಳನ್ನು ಸಮವಸ್ತçದಲ್ಲಿ ತಮ್ಮ ಕಚೇರಿಗೆ ಕರೆಸಿಕೊಂಡು,ತಮ್ಮ ಕುರ್ಚಿಯಲ್ಲಿ ಆ ಮಕ್ಕಳನ್ನು ಕೂರಿಸಿ,ಆ ಮಕ್ಕಳ ಮುಖದಲ್ಲಿ ಸಂತೋಷ ಮೂಡುವಂತೆ ಮಾಡಿದ್ದಾರೆ.ಕೋರಮಂಗಲ ಇನ್ಸ್ಪೆಕ್ಷರ್ ನಟರಾಜರನ್ನು ಕರೆದು ಮಕ್ಕಳಿಗೆ ಒಂದು ದಿನದ ಆಫೀಸರ್ ಗೌರವ ನೀಡುವಂತೆ ತಿಳಿಸಿದ್ದಾರೆ. ಮುಂದೆ ಬೆಳೆದು ದೊಡ್ಡವರಾಗಿ ಪೊಲೀಸರಾಗಬೇಕೆಂಬ ಕನಸನ್ನು ಜಾದೂವಿನಂತೆ ನನಸು ಮಾಡಿದ್ದಾರೆ.
ತಮ್ಮ ಎಲ್ಲಾ ಆಸೆಗಳನ್ನು ದೇವಲೋಕದಿಂದ ಬರುವ ಜಾದೂಗಾರನೊಬ್ಬ ಪೂರೈಸುವಂತೆ, ಖಾಕಿ ತೊಟ್ಟ ಈ ಜಾದೂಗಾರ ಮಕ್ಕಳ ಕನಸನ್ನು ಒಂದೇ ದಿನದಲ್ಲಿ ನನಸು ಮಾಡಿದ್ದಾರೆ. ಮಕ್ಕಳನ್ನು ಕರೆದುಕೊಂಡು ಹೋಗಿ ಇನ್ಸ್ಪೆಕ್ಟರ್ ಮಂಜುನಾಥ್‌ರವರು ಇಡೀ ಪೊಲೀಸ್ ಠಾಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೂ ಒಂದು ದಿನದ ಪೊಲೀಸ್ ಆಫೀಸರ್ ಗೌರವವನ್ನು ನೀಡಿ ಸತ್ಕರಿಸಿದ್ದಾರೆ, ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಯಾಗಿ ಪೊಲೀಸ್ ಸಮವಸ್ತç ತೊಟ್ಟು ಪೊಲೀಸ್ ಗೌರವ ಸ್ವೀಕರಿಸಿದ ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಸಂತೋಷ ತಾವು ಏನನ್ನೋ ಸಾದಿಸಿಬಿಟ್ಟೆವು ಎಂಬ ಸಂಭ್ರಮ ಮನೆ ಮಾಡಿತ್ತು .ಇದೆಲ್ಲವನ್ನು ಕಂಡ ಮಕ್ಕಳ ಪೋಷಕರ ಕಣ್ಣಲ್ಲಿ ಆನಂದಭಾಷ್ಪ.ಪೋಷಕರು ಬಾಬಾ ರವರ ಮಾನವೀಯತೆ,ಮಾತೃ ಹೃದಯದ ಸ್ಪಂದನೆ ಕಂಡು ಬಾಬಾರವರ ಕಾರ್ಯವನ್ನು ಮುಕ್ತ ಕಂಠದಿAದ ಹೊಗಳಿದ್ದಾರೆ.ಪುಟ್ಟ ಮಕ್ಕಳ ಬಹು ದೊಡ್ಡ ಆಸೆಯನ್ನು ಕನಸನ್ನು ನೆರವೇರಿಸಿದ ಎಲ್ಲಾ ಕ್ರೆಡಿಟ್ ನಮ್ಮ ಹೆಮ್ಮೆಯ ಐ ಪಿ ಎಸ್ ಅಧಿಕಾರಿ ಬಾಬಾ ರವರಿಗೆ ಸೇರಿದ್ದು .ಹಾಟ್ಸ್ ಆಫ್ ಟು ಯು ಸರ್.
ಮಕ್ಕಳನ್ನು ಮಾತಾಡಿಸಿದ ಬಾಬಾರವರು ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಯಾಕೆ ಎಂದು ಕೇಳಿದಾಗ ಮಕ್ಕಳು ಪೊಲೀಸ್ ಇಲಾಖೆ ಎಂದರೆ ಬಹಳ ಗೌರವ ಎಂತಲೂ ಇಲಾಖೆಗೆ ಸೇರಿದರೆ ಹಲವು ಕ್ರಿಮಿನಲ್ಸ್ಗಳನ್ನು ಪತ್ತೆ ಹಚ್ಚಿ, ಅವರ ಅಪರಾಧಗಳನ್ನು ತಡೆಗಟ್ಟಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಪೊಲೀಸ್ ಅಂದ್ರೆ ಕಾನೂನು ರಕ್ಷಕ ಮಾತ್ರವಲ್ಲ ಇವರಲ್ಲೂ ಮಾನವೀಯ ಮೌಲ್ಯಗಳುಳ್ಳ ಮನುಷ್ಯನಿದ್ದಾನೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಜಾದುವಿನಂತೆ ಚಿಣ್ಣರ ಕನಸನ್ನು ಸಾಕಾರಗೊಳಿಸಿದ್ದಾರೆ ಈ ನಮ್ಮ ಡಿಸಿಪಿಯವರ. ಈ ಕಾರ್ಯ ವೈಖರಿ ಇವರು ಕೈಗೊಂಡ ನಿರ್ಣಯ ಮತ್ತೊಮ್ಮೆ ಖಾಕಿಯೊ ಳಗಿನ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವಂತೆ ಮಾಡಿದೆ .

Latest Stories

LEAVE A REPLY

Please enter your comment!
Please enter your name here