28.6 C
Bengaluru
Friday, October 4, 2024

ನನ್ನ ಗಾಡ್ ಫಾದರ್

Date:


ಪ್ರತಿಭಾವಂತ ಹೆಣ್ಣುಮಗಳ ಪಾಲಿನ ಗಾಡ್ ಫಾದರ್ ಆದವರು ಎ.ಸಿ.ಪಿ. ಸುಧೀರ್ ಹೆಗ್ಡೆಯವರು.
ಹೆಣ್ಣು ಮಗು ಅಂದ್ರೆ ಸಾಕು ತಂದೆ ತಾಯಿ ಮನಸಲ್ಲಿ ಆತಂಕ, ಸಂಬAಧಿಕರಲ್ಲಿ ಅದೇನೋ ಬೇಸರ ಅದೆಂತದೋ ನಿರ್ಲಕ್ಷö್ಯ, ಕಾಲ ಬದಲಾಗಿದೆ, ಮನಸ್ಥಿತಿ ಬದಲಾಗ್ತಿದೆ, ಎಲ್ಲವೂ ಸತ್ಯ ಬದಲಾಗಲೇಬೇಕು `ಬದಲಾವಣೆ ಜಗದ ನಿಯಮ'', ಆದರೆ ನಾವು ನಮ್ಮಿಂದ ಮಾತ್ರ ಬದಲಾವಣೆ ಸಾಧ್ಯ ಎಂಬ ದ್ಯೇಯ ಹೊಂದಿರುವವವರು, ಈ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿ. ಮೃದುಲಾ ಮೂಲತಹ ಗೌರಿ ಬಿದನೂರಿನ ನರಸಿಂಹ ಮೂರ್ತಿಯವರ ಮೊದಲನೆಯ ಮಗಳು. ನರಸಿಂಹ ಮೂರ್ತಿಯವರಿಗೆಮೂವರು ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳೇ ಹುಟ್ಟಿದ್ದಾರೆಂದು ಅವರೆಂದಿಗೂ ಬೇಸರಗೊಂಡವರಲ್ಲ ಆದರೆ ಅವರಿಗೆ ಆ ಮಕ್ಕಳನ್ನು ಸಾಕುವಷ್ಟು ವರಮಾನ ವಿಲ್ಲದಿದ್ದರೂ ಹೇಗೂ ಹೊಟ್ಟೆ ಬಟ್ಟೆಗೆ ಕಡಿಮೆ ಯಾಗದಂತೆ ಮಕ್ಕಳನ್ನು ಬೆಳೆಸಿದ್ದರು. ಮೂರೂ ಮಕ್ಕಳು ಬಹಳ ಬುದ್ದಿವಂತರೇ ವಿದ್ಯಾಬ್ಯಾಸದಲ್ಲೂ ಬಹಳ ಮುಂದು. ಮೃದುಲಾ ಹತ್ತನೇ ತರಗತಿಯಲ್ಲಿ ೯೩%ಪರ್ಸೆಂಟ್ ಪಡೆದು ತೇರ್ಗಡೆ ಯಾಗುತ್ತಾಳೆ. ಕುಟುಂಬದವರು ಬಹಳ ಸಂಭ್ರಮಿಸ್ತಾರೆ, ಆದರೆ ಮಗಳ ಆಸೆಯಂತೆ ಒಳ್ಳೆ ಕಾಲೇಜಿನಲ್ಲಿ ಮಗಳನ್ನು ಓದಿಸಲು ತಂದೆ ಅಶಕ್ತರಾಗಿರುತ್ತಾರೆ. ಆದರೆ ಮಗಳು ಓದುವ ಪಟ್ಟನ್ನು ಬಿಡುವುದಿಲ್ಲ, ಮಗಳ ಓದಿನ ಬಗೆಗಿನ ಅಭಿರುಚಿ ಕಂಡು ತಂದೆ ಸಾಲಕ್ಕಾಗಿ ಹಲವರ ಬಳಿ ಕೈ ಚಾಚುತ್ತಾರೆ. ಆದರೆ ಸಾಲ ನೀಡಲು ಯಾರೂ ಮುಂದೆ ಬರುವುದಿಲ್ಲ ಅದರಿಂದ ಏನೂ ಉಪಯೋಗವಾಗುವು ದಿಲ್ಲ. ಇದರಿಂದ ಬೇಸರಗೊಂಡ ನರಸಿಂಹಮೂರ್ತಿಯವರು ಮುಂದಿನ ವರ್ಷ ಹೇಗಾದರೂ ಹಣ ಹೊಂದಿಸಿ ಕಾಲೇಜ್‌ಗೆ ಅಡ್ಮಿಶನ್ ಮಾಡಿಸುತ್ತೇನೆ ಎಂದು ಮಗಳ ಬಳಿ ತಿಳಿಸುತ್ತಾರೆ. ಆದರೆ ಮೃದುಲಾ ತನ್ನ ಒಂದು ವರ್ಷದ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದು ದುಃಖಿಸಲು ಪ್ರಾರಂಭಿಸುತ್ತಾಳೆ. ಇದನ್ನೆಲ್ಲಾ ಕಂಡು ತೀವ್ರ ಚಿಂತೆಗೀಡಾದ ನರಸಿಂಹ ಮೂರ್ತಿ ಯವರ ಪರಿಸ್ಥಿತಿ ಕಂಡು ಪರಿಚಯದವರೊಬ್ಬರು ಈ ಗಾಡ್ ಫಾದರ್‌ನ ಬಳಿ ಸಹಾಯ ಕೇಳುವಂತೆಯೂ, ಅವರ ಬಳಿ ವಿದ್ಯಾಭ್ಯಾಸಕ್ಕಾಗಿ ಸಹಾಯ ಕೇಳಿದವರನ್ನೆಂದೂ. ಅವರು ಹಾಗೇ ಬರೀಕೈ ನಲ್ಲಿ ವಾಪಾಸ್ ಕಳಿಸುವುದಿಲ್ಲವೆಂದು ಹೇಳುತ್ತಾರೆ. ಅದರಂತೆ ನರಸಿಂಹ ಮೂರ್ತಿಯವರು ಆ ಗಾಡ್ ಫಾದರ್‌ನ ಹುಡುಕಿ ಬಂದಿದ್ದು ಬೆಂಗಳೂರಿನ. ಮಡಿವಾಳ ಎ ಸಿ ಪಿ ಆಫೀಸಿಗೆ. ನರಸಿಂಹ ಮೂರ್ತಿ: ವೃತ್ತಿಯಲ್ಲಿ ಶಿಕ್ಷಕನಾಗಿರುವ ನಾನು ಮೂರೂ ಮಕ್ಕಳು ಹೆಣ್ಣು ಮಕ್ಕಳೆಂದು ಎಂದು ದೃತಿಗೆಡಲಿಲ್ಲ ಆದರೆ ಮಗಳು ಎಸ್ ಎಸ್ ಎಲ್ ಸಿ ಯಲ್ಲಿ ೯೩% ಪಡೆದಳೆಂಬ ಸಂಭ್ರಮ ಬಹಳ ದಿನ ಉಳಿಯಲಿಲ್ಲ ಅವಳ ಇಚ್ಚೆಯಂತೆ ಕಾಲೇಜು ಸೇರಿಸಲಾಗಲಿಲ್ಲ ಎಂಬ ಕೊರಗು ತೀವ್ರವಾಗಿ ಕಾಡಿತ್ತು. ಪರಿಚಯದವರ ಮಾತಿನಂತೆ ಎ ಸಿ ಪಿ ಸಾಹೇಬರನ್ನು ಭೇಟಿಯಾಗಲು ಬಂದಾಗ ಖಂಡಿತವಾಗಿ ಸಹಾಯ ಮಾಡುತ್ತಾರೆಂಬ ಭರವಸೆ ಇರಲಿಲ್ಲ, ಮಗಳಿಗೆ ಈ ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ ಈ ವರ್ಷ ಬಿಟ್ಟು ಬಿಡು ಮುಂದಿನ ವರ್ಷ ಹಣ ಹೊಂದಿಸಿ ಕಾಲೇಜಿಗೆ ಸೇರಿಸುವೆ ಎಂದಿದ್ದೆ. ಆದರೆ ಅವಳ ರೋಧನ ಕಂಡು ಬಹಳ ಬೇಸರವಾಗುತ್ತಿತ್ತು. ಕಡೆಯ ಪ್ರಯತ್ನ ಎಂದು ಸಾಹೇಬರ ಬಳಿ ಬಂದಿದ್ವಿ, ಬಹಳ ಸೌಜನ್ಯಯುತವಾಗಿ ನಮ್ಮನ್ನು ಮಾತನಾಡಿಸಿದರು, ನಮ್ಮ ಕುಶಲೋಪಚಾರಿ ವಿಚಾರಿಸುತ್ತಾ ಮಗಳನ್ನು ಇನ್ನೂ ಚೆನ್ನಾಗಿ ಓದಬೇಕು, ಬೇರೆ ಯಾವುದೇ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬಾರದು, ಓದಿನ ಕಡೆ ಹೆಚ್ಚು ಗಮನ ಕೊಡಬೇಕು ಎಂದು ತಮ್ಮ ಸ್ವಂತ ಮಗಳನ್ನು ಮಾತನಾಡಿಸುವಂತೆ ಮಾತನಾಡಿಸುತ್ತಾ ಯಾವ ಕಾಲೇಜಿಗೆ ಸೇರಬಯಸುವೆಎಷ್ಟು ಕಾಲೇಜಿನ ಫೀ’ ಅಂತ ವಿಚಾರಿಸುತ್ತಲೇ ಕಾಲೇಜಿನ ಫೀ ಹಣವನ್ನು ತುಂಬಿದ ಚೆಕ್ಕನ್ನು ನಮ್ಮ ಮುಂದಿಟ್ಟರು.
ಪೊಲೀಸಿನವರೆಂದರೆ ಇಷ್ಟು ಸರಳ, ಜನಸ್ನೇಹಿ ಎಂದು ಖಂಡಿತವಾಗಿ ನಾವು ತಿಳಿದಿರಲಿಲ್ಲ. ನಮ್ಮೊಂದಿಗೆ ಅವರು ನಡೆದು ಕೊಂಡ ರೀತಿ ನಮಗೆ ನೀಡಿದ ಸಮಯ,ಕೇಳುವ ಮುಂಚೆಯೇ ನಮ್ಮ ಮುಜುಗರವನ್ನರಿತು ಅವರು ಮಾಡಿದ ಸಹಾಯ ಎಲ್ಲವೂ ಒಂದು ಕ್ಷಣ ನಮ್ಮಲ್ಲಿ ದಿಗ್ಬಾçಂತಿಯನ್ನುAಟು ಮಾಡಿತ್ತು .ಅಂದಿನಿAದ ನನ್ನ ಮಗಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿರುವ ಎಸಿಪಿ ಸಾಹೇಬರು, ನನ್ನ ಮಗಳ ಎರಡನೆಯ ವರ್ಷದ ಪಿ ಯು ಸಿ ಫೀಯನ್ನೂ ಸಹ ಅವರೇ ನೀಡಿ ನನ್ನ ಮಗಳನ್ನು ತಮ್ಮ ಮಗಳೆಂಬAತೆ ಓದಿಸುತ್ತಿದ್ದಾರೆ. ದ್ವಿತೀಯ ಪಿ ಯು ಸಿ ಯಲ್ಲಿ ನನ್ನ ಮಗಳು ೯೯% ಪಡೆದು ತೇರ್ಗಡೆಯಾಗಿದ್ದನ್ನು ಕಂಡು ಬಹಳ ಸಂಭ್ರಮಿಸಿದ್ದರು.
ಮುAದುವರೆದು ಮೊದಲನೆಯ ವರ್ಷದ ಬಿ.ಕಾಂಗೆ ಅಡ್ಮಿಶನ್ ಫೀ ಕಟ್ಟಿ ಬೆಂಗಳೂರಿನಲ್ಲೇ ಕಾಲೇಜಿಗೆ ಸೇರಿಸಿ ಓದಲು ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸರೆಂದರೆ ಸದಾ ದುಡ್ಡಿಗಾಗಿ ಕೆಲಸ ಮಾಡುವವರು, ಎಂದು ಸದಾ ಋಣಾತ್ಮಕ ಅಭಿಪ್ರಾಯ ಹೊಂದಿರುವವರಿಗೆ ಪೊಲೀಸರೂ ಸಮಾಜಮುಖಿಗಳು ಸ್ನೇಹಪರರು, ಎಂಬುದನ್ನು ಸಾರಿ ಹೇಳಿದ್ದಾರೆ ನಮ್ಮ ಎ ಸಿ ಪಿ ಸುದೀರ್ ಹೆಗ್ಡೆಯವರು.
ಮೃದುಲಾ ಹೇಳಿಕೆ: ಇಂದು ನಾನೇನಾದರೂ ಸಾಧಿಸಿದ್ದೇನೆ ಅಥವಾ ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದೇನೆ ಅಂದರೆ ಅದಕ್ಕೆ ಮೂಲ ಕಾರಣ ನನ್ನ ಈ ಗಾಡ್ ಫಾದರ್ ನನ್ನ ಪ್ರತಿಭೆ, ಆಸೆ ಕನಸು ಎಲ್ಲವೂ ಈ ನನ್ನ ಗಾಡ್ ಫಾದರ್ ಸಹಾಯ ಹಸ್ತ ಚಾಚದಿದ್ದರೆ ಎರಡು ವರ್ಷಗಳ ಕೆಳಗೇ ಮಣ್ಣಾಗಿ ಬಿಡುತಿತ್ತು. ನನ್ನ ಉಸಿರಿರುವರೆಗೂ ನಾನು ಇವರ ಋಣವನ್ನು ತೀರಿಸಲಾರೆ, ಎಂದಿಗೂ ನಾನು ಅವರಿಗೆ ಚಿರಋಣಿ. ಮೃದುಲಾಳ ಭವಿಷ್ಯದ ಭವ್ಯ ಬುನಾದಿಗೆ ಪ್ರೇರಕ ಹಾಗೂ ಪೂರಕ ಶಕ್ತಿ ಈ ಗಾಡ್ ಫಾದರ್ ಸುಧೀರ್ ಹೆಗ್ಡೆಯವರು.
ಎಸಿಪಿ ಸುದೀರ್ ಹೆಗಡೆಯವರು ಮೊದಲಿನಿಂದಲೂ ಜನಪರ ಕಾಳಜಿಯ ಗುಣ ಹೊಂದಿರುವAತ ಪೊಲೀಸ್ ಅಧಿಕಾರಿ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿAದ ಆಚರಿಸದೇ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಊಟಕ್ಕೆ ಒಂದು ಸಿಹಿ ಮಾಡುವುದಕಷ್ಟೇ ಸೀಮಿತ ಗೊಳಿಸಿ ಪ್ರತೀ ವರ್ಷವೂ ಹುಟ್ಟು ಹಬ್ಬದ ಖರ್ಚನ್ನು ಉಳಿತಾಯ ಮಾಡಿ ಇಂತಹ ಬಡ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಹಾಗೂ ಸಭೆ ಸಮಾರಂಭಗಳಲ್ಲಿ ನೀಡುವ ಶಾಲುಗಳನ್ನು ರಸ್ತೆಯಲ್ಲಿ ಚಳಿಯಲ್ಲಿ ಮಲಗಿರುವಂತ ನಿರ್ಗತಿಕರಿಗೆ ಸದ್ದಿಲ್ಲದೇ ಅವರನ್ನು ಎಚ್ಚರಿಸದೇ ನೈಟ್ ರೌಂಡ್ಸ್ನಲ್ಲಿರುವಾಗ ಅವರಿಗೆ ಹೊದಿಸಿ, ತಾವು ಮಾಡುತ್ತಿರುವ ಸಮಾಜಮುಖಿ ಕಾರ್ಯವನ್ನು ಸದ್ದು ಗದ್ದಲವಿಲ್ಲದೆ ನಿರ್ಲಿಪ್ತತೆಯಿಂದ ಮಾಡುತಿದ್ದರೆ. ತಮ್ಮಂತ ಜನಪರ ಕಾಳಜಿಯ ಅಧಿಕಾರಿಗಳು ಇಲಾಖೆಗೆ ಅತ್ಯವಶ್ಯಕ. ನಿಮ್ಮ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆಗಳು

Latest Stories

LEAVE A REPLY

Please enter your comment!
Please enter your name here