ಗಾಂಧೀಜಿಯವರು ಮೊದಲು ಮಕ್ಕಳಿಗೆ ನವೀನ ಶಿಕ್ಷಣದ ಬಗ್ಗೆ ಅರಿವು ಹಾಗೂ ಜ್ಞಾನವನ್ನು ತುಂಬಿದವರು. ಗಾಂಧೀಜಿಯವರ ನವೀನ ಶಿಕ್ಷಣದಲ್ಲಿ ಮಡಿಕೆ ಮಾಡುವುದು,ಬಟ್ಟೆ ನೇಯುವುದು ,ಎಣ್ಣೆ ತೆಗೆಯುವುದು,ಕೃಷಿ ಸಂಬಂಧಿತ ಚಟುವಟಿಕೆ ಹೀಗೆ ಹತ್ತು ಹಲವು ಕೈ ಕೆಲಸಗಳನ್ನು ಶಿಕ್ಷಣದ ಪಠ್ಯ ಕ್ರಮದ ಜೊತೆ ಜೊತೆಗೆ ಪರಿಚಯಿಸಿ,ಮಕ್ಕಳು ಅದರಿಂದ ಪ್ರತಿಯೊಂದು ವಿಚಾರಗಳ ತಳಹದಿಯ ಮಾಹಿತಿ ಹೊಂದಿರ ಬೇಕೆಂಬ ಮಹದಾಸೆಯನ್ನು ಹೊಂದಿದ್ದವರು. ಗಾಂಧೀಜಿಯವರ ನವೀನ ಶಿಕ್ಷಣದ ಪ್ರೇರಕರೂಪಿಯಾಗಿರುವ ಎಸಿಪಿ ಕರಿಬಸವನಗೌಡರ್ ರವರು. ವಿನೂತನ ಬದಲಾವಣೆಗೆ ನಿರ್ಮಾತೃವಾಗಿದ್ದಾರೆ. ಹೌದು ಪೊಲೀಸರು ತಮ್ಮ ಕಾರ್ಯಹಸ್ತವನ್ನು ಕೇವಲ ಕಾನೂನು ಪಾಲನೆಗಷ್ಟೇ ಸೀಮಿತಗೊಳಿಸದೇ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ವಿನೂತನವಾಗಿ ಚಿಂತಿಸಿದ್ದಾರೆ..
ಶಿಗ್ಗಾವಿಯ ಉತ್ತಮ್ ಪ್ರೈಮರಿ ಶಾಲೆಯ ಮಾಲೀಕರೊಂದಿಗೆ ಮಾತನಾಡುತ್ತ, ಅವರ ಶಿಕ್ಷಣ ಸಂಸ್ಥೆಯ ಮತ್ತು ಮಕ್ಕಳ ಬಗ್ಗೆ ವಿಚಾರಿಸುತ್ತ, ಮಕ್ಕಳಿಗೆ ಚಿಕ್ಕಂದಿನ ವಿದ್ಯಾಬ್ಯಾಸದಲ್ಲೇ ಪ್ರಸ್ತುತ ವಿದ್ಯಮಾನಗಳ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ನಮಗೆ ಅನ್ನ ನೀಡುವ ರೈತನ ಮತ್ತು ಕೃಷಿಯ ಬಗೆಗಿನ ಮಾಹಿತಿ ಮಕ್ಕಳಿಗೆ ಶಿಕ್ಷಣದ ಒಂದು ಭಾಗವಾಗಿ ದೊರೆಯುವಂತಾಗಬೇಕು, ಪದವಿ ಸ್ನಾತಕೋತ್ತರಗಳ ಜೊತೆ ಜೊತೆಗೆ ಕೃಷಿಯ ಮಾಹಿತಿ ಶಿಕ್ಷಣದ ಒಂದು ಭಾಗವಾಗಿ ಲಭಿಸುವಂತಾಗಬೇಕು, ದೇಶದ ಭವಿಷ್ಯದ ಮಕ್ಕಳು ದೇಶದ ಬೆನ್ನೆಲುಬು ರೈತ ಎಂಬುದನ್ನು ಅರಿಯಬೇಕು, ನಮಗೆ ದೊರೆಯುವ ಆಹಾರ, ಅದರ ಪೂರೈಕೆ, ಅದನ್ನು ಹೇಗೆ ಬೆಳೆಯುತ್ತಾರೆ, ಎಂಬುದರ ಸಂಪೂರ್ಣ ಮಾಹಿತಿ ಶಿಕ್ಷಣದ ಒಂದು ಭಾಗವಾಗಿ ಮಕ್ಕಳಿಗೆ ದೊರೆತರೆ ಅವರ ಬುದ್ಧಿ ವಿಕಸನ, ವ್ಯಕ್ತಿ ವಿಕಸನಕ್ಕೆ ಅದು ಸಹಕಾರಿ ಎಂದು ತಿಳಿಸುತ್ತಾರೆ. ಅದರಂತೆ ಶಿಗ್ಗಾವಿಯ ಉತ್ಸವ ಪ್ರೆöÊಮರಿ ಶಾಲೆಯ ಸಂಸ್ಥಾಪಕರಾದ ದಶನೂರರವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯದ ಜೊತೆ ಮಕ್ಕಳಿಗೆ ಕೃಷಿ ಯನ್ನು ಒಂದು ಬೋಧನಾ ಪಠ್ಯವಾಗಿ ಕಲಿಸಿ ಚಿಂತಿಸಿ ಕಲಿಸಲಾರಂಭಿಸುತ್ತಾರೆ. ಅವರೇ ಹೇಳುವಂತೆ ಮಕ್ಕಳಿಗೆ ಕೃಷಿಯ ಬಗೆಗಿನ ಸಣ್ಣ ಪ್ರಮಾಣದ ಜ್ಞಾನವು ಇರಲಿಲ್ಲ ನಾವು ಪಠ್ಯದ ಜೊತೆಗೆ ಕೃಷಿಯನ್ನು ಒಂದು ವಿಷಯವಾಗಿ ಸೇರಿಸಿದ್ದೇವೆ ಮಕ್ಕಳು ಬಹಳ ಆಸಕ್ತಿ ಹಾಗೂ ಕುತೂಹಲದಿಂದ ವಿಷಯವನ್ನು ಕಲಿಯಲು ಉತ್ಸುಕÀರಾಗಿದ್ದರೆ. ಬೋಧನೆಯ ಜೊತೆಗೆ ಎಸಿಪಿ ಸರ್ ಹೇಳಿದಂತೆ ವಾರಕ್ಕೆ ಒಂದು ಭಾರಿ ಹೊಲ ಗದ್ದೆ ತೋಟಗಳಿಗೆ ಕರೆದು ಕೊಂಡು ಹೋಗಿ ಮಕ್ಕಳ ಕೈನಲ್ಲಿ ಕೃಷಿ ಕೆಲಸ ಕೂಡ ಮಾಡಿಸಿದ್ದೇವೆ ಇದು ಬಹಳ ಪರಿಣಾಮ ಕಾರಿಯಾಗಿದೆ ಮತ್ತು ಮಕ್ಕ÷್ಕಳು ಸ್ವಇಚ್ಛೆಯಿಂದ ಕಲಿಯಲು ಉತ್ಸುಕರಾಗಿದ್ದಾರೆ. ನೇಗಿಲು, ಗುದ್ದಲಿ ಹಾರೆ ಇವುಗಳ ಕನಿಷ್ಠ ಪರಿಚಯವೂ ಇರದ ಮಕ್ಕಳು ಎಷ್ಟು ತಿಂಗಳಿಗೆ ತರಕಾರಿ ಪಸಲು ಬರುತ್ತದೆ, ತರಕಾರಿ ಹೂವು ಹಣ್ಣು ಹೇಗೆ ಬೆಳೆಯುತ್ತಾರೆ ಇತ್ಯಾದಿ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುತಿದ್ದರೆ. ಬೋಧನೇತರ ಪಠ್ಯವಾಗಿ ಐದನೇ ತರಗತಿಯ ಮಕ್ಕಳಿಂದ ನಾವು ಈ ಕೃಷಿ ವಿಷಯವನ್ನು ಕಲಿಸುತ್ತಿದ್ದೇವೆ ಮಕ್ಕಳು ಬಹಳ ಉತ್ಸಾಹದಿಂದಲೇ ಕಲಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಪೊಲೀಸ್ ಆಫೀಸರ್ ಆಗಿದ್ದು ಕೊಂಡು ಮಕ್ಕಳ ಶಿಕ್ಷಣದ ವಿಷಯದಲ್ಲಿ ಇಷ್ಟೊಂದು ಆಸಕ್ತಿ ಕಾಳಜಿ ಹೊಂದಿರುವ ಎಸಿಪಿ ಕರಿಬಸವನಗೌಡ ಅವರ ಸಲಹೆ ನಮಗೆ ಬಹಳ ಉಪಯುಕ್ತವಾಗಿದೆ ಅದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ.