ನೋವಿಲ್ಲದ ಗಡ್ಡೆಯ ಉದಾಸೀನದಿಂದ ಉಂಟಾಗಬಹುದಾದ ತೊಂದರೆಗಳು ಸಾವಿನಂಚಿಗೆ ಕರೆದೊಯ್ಯಬಹುದಾದ ಪರಿಸ್ಥಿತಿಗಳ ಬಗ್ಗೆ ಬಹಳ ವಿಸ್ತೃತವಾಗಿ ಡಾಕ್ಟರ್ ಸೌಮ್ಯ ಹೊಳ್ಳ ರವರು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದಾರೆ.
ಈ ಕ್ಯಾನ್ಸರ್ ಗಡ್ಡೆಗಳ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸ್ತನ ಕ್ಯಾನ್ಸರ್ ಕಂಡುಹಿಡಿಯುವ ವಿಧಾನಗಳಲ್ಲಿ ಸ್ತನ ಸ್ವಯಂ ಪರೀಕ್ಷೆಯು ಒಂದು.
ಸ್ತನದಲ್ಲಿ ಕಂಡುಬರುವ ಗಡ್ಡೆಗಳನ್ನು ಮಾತ್ರವಲ್ಲದೆ ಸ್ತನಗಳ ಆಕಾರದಲ್ಲಿನ ಬದಲಾವಣೆ, ಮೊಲೆ ತೊಟ್ಟುಗಳನ್ನು ಪರೀಕ್ಷಿಸುವುದು ಸಹ ಅತ್ಯಂತ ಮುಖ್ಯವಾದುದಾಗಿದೆ. ಎಲ್ಲಾ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳು ಅಲ್ಲದಿದ್ದರೂ ಸ್ತನ ತಜ್ಞ ರಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕ್ಲಿನಿಕಲ್ ಸ್ತನ ಪರೀಕ್ಷೆಯು ಸ್ತನ ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿಯುವಲ್ಲಿ ಪ್ರಮುಖವಾದದ್ದು. ಕ್ಲಿನಿಕಲ್ ಪರೀಕ್ಷೆಯಲ್ಲಿ ಯಾವುದೇ ಗಡ್ಡೆ ಪತ್ತೆಯಾದರೆ ಅದರ ಸ್ವರೂಪವನ್ನು ಪತ್ತೆ ಮಾಡುವುದಕ್ಕೆ ಅಲ್ಟಾçಸೌಂಡ್ ಮತ್ತು ಮ್ಯಾಮೋಗ್ರಾಮ್ ನ ಅಗತ್ಯವಿರುತ್ತದೆ .
ಯಾವುದೇ ವಯಸ್ಸಿನ ತಾರತಮ್ಯ ವಿಲ್ಲದೆ ಕಾಣಿಸಿಕೊಳ್ಳುವ ಈ ಸ್ತನ ಕ್ಯಾನ್ಸರ್ ಅನ್ನು ೨೦ ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಪ್ರತಿ ತಿಂಗಳು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು ಹಾಗೂ ಪ್ರತಿ ಮೂರೂ ವರ್ಷಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಕ್ಲಿನಿಕಲ್ ಸ್ತನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇನ್ನು ಬೇಸ್ಲೆöನ್ ಮ್ಯಾಮೋಗ್ರಾಮ್ ಎನ್ನುವುದು ಕಿರಿಯ ಹಾಗೂ ಪ್ರಥಮ ಹಂತದ ರೋಗ ಪತ್ತೆ ಹಚ್ಚುವ ಎಕ್ಸರೆ ಪರೀಕ್ಷೆ.
ಇನ್ನು ಒಂದೊಮ್ಮೆ ಅನುಮಾನಾಸ್ಪದ ಗಡ್ಡೆಗಳೇನಾದರೂ ಕಾಣಿಸಿ ಕೊಂಡಿದ್ದರೆ, ನಂತರ ರೋಗವನ್ನು ಪತ್ತೆ ಹಚ್ಚಲು ಹಾಗೂ ಅದನ್ನು ದೃಢೀಕರಿಸಲು ಸೈಟೊಲಾಜಿ ಅಥವಾ ಎಂಆರ್ ಐ ಮಾಡಬೇಕಾಗುತ್ತದೆ. ಕೆಲವು ವೇಳೆ ಎರಡನ್ನು ಮಾಡಬಹುದು.ನೀವು ಎಲ್ಲ ಪರೀಕ್ಷೆಗಳ ಫಲಿತಾಂಶದ ನಂತರ ನಿಮಗಿರುವ ಕ್ಯಾನ್ಸರ್‌ನ ಹಂತವನ್ನು ತಿಳಿದುಕೊಂಡು, ಚಿಕಿತ್ಸೆ ನೀಡಬೇಕಾಗುತ್ತದೆ. ಹಾಗೆಯೇ ಮಹಿಳೆಯ ಹಾರ್ಮೋನ್ ಸ್ಥಿತಿ, ಹೆಚ್ ಇ ಆರ್ ಸ್ಥಿತಿ, ವಯಸ್ಸು ಮತ್ತು ಬೆಳವಣಿಗೆ ಇವುಗಳು ಚಿಕಿತ್ಸೆ ಹಾಗೂ ಫಲಿತಾಂಶವನ್ನು ನಿರ್ಧರಿಸುತ್ತವೆ.
ಕ್ಯಾನ್ಸರ್‌ನ ಬೆಳವಣಿಗೆಯ ಹಂತ ೧ರಿಂದ ೪ಹಂತದವರೆಗೂ ಬದುಕುಳಿಯುವ ಪ್ರಮಾಣವು ಕ್ರಮವಾಗಿ ೯೯%, ೮೭%, ಇರುತ್ತದೆ ೪ನೇ ಹಂತದಲ್ಲಿ ೨೭%ಗೆ ಇಳಿಯುತ್ತದೆ ಶೀಘ್ರ ಹಾಗು ತ್ವರಿತ ತಪಾಸಣೆ ಚಿಕಿತ್ಸೆ ಮನೋಸ್ಥೆರ್ಯ ಕಾಯಿಲೆಯ ವಿರುದ್ಧ ಗೆಲುವಿಗೆ ಸೂಕ್ತ ಅಸ್ತçವಾಗಿರುತ್ತದೆ. ಸ್ತನ ಕ್ಯಾನ್ಸರ್ ಕುರಿತು ಪರಿಣಿತಿ ಹಾಗೂ ಪ್ರಖ್ಯಾತಿ ಹೊಂದಿರುವ ಡಾ|| ಸೌಮ್ಯ ಹೊಳ್ಳರವರ ಬಳಿ ಮುಂದಿನ ಸಂಚಿಕೆಯಲ್ಲಿ ಸರ್ಜರಿ, ಚಿಕಿತ್ಸೆ ವಿನೂತನ ಚಿಕಿತ್ಸಾ ವಿಧಾನಗಳು ಮತ್ತು ಹೊಳ್ಳ ಬ್ರೆಸ್ಟ್ ಸೆಂಟರ್ ನಲ್ಲಿ ದೊರೆಯುವ ಚಿಕಿತ್ಸಾ ಕ್ರಮ, ಆಸ್ಪತ್ರೆಯಲ್ಲಿನ ಅತ್ಯಾಧುನಿಕ ಶಸ್ತç ಚಿಕಿತ್ಸಕಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯೋಣ.
ನೋವಿಲ್ಲದ ಗಡ್ಡೆ -ಡಾ.ಸೌಮ್ಯ ಹೊಳ್ಳ ಅಮೂಲ್ಯ ಸಲಹೆ
Date: