23.8 C
Bengaluru
Thursday, February 22, 2024

ಖಾಕಿಯೊಳಗಿನ ಮಾನವೀಯತೆ -ಈ ನಮ್ಮ ಪಿಎಸ್ ಐ ಅನಿತಾ ಲಕ್ಷ್ಮೀ

Date:


ಪೊಲೀಸರನ್ನು ಕಂಡರೆ ಹೆದರುವ, ಅವರನ್ನು ಪರಕೀಯರಂತೆ ಕಾಣುವ ಸಂಸ್ಕೃತಿ ಬೆಳೆಸಿಕೊಂಡಿರುವವರಿಗೆ ನಾವೂ ಮನುಷ್ಯರೇ ನಮಗೂ ಮಾನವೀಯತೆ ಇದೆ . ನಿಮ್ಮಂತೆ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಹಾಗೂ ಹೃದಯವಿದೆ ಎಂಬುದನ್ನು ನಮ್ಮ ಹಲವು ಪೊಲೀಸರು ತಮ್ಮ ಕಾರ್ಯ ವೈಖರಿಯ ಮುಕಾಂತರ ದೃಢ ಪಡಿಸಿದ್ದಾರೆ.ಮತ್ತೊಮ್ಮೆ ಅದನ್ನು ಸಾಬೀತು ಪಡಿಸಿದವರು ಪ್ರಸ್ತುತ ಚಂದ್ರಾ ಲೇ ಔಟ್ ಪಿಎಸ್‌ಐ ಆಗಿರುವಂತ ಅನಿತಾ ಲಕ್ಷ್ಮೀ
ಘಟನೆಯ ವಿವರ : ಗಸ್ತಿನಲ್ಲಿದ್ದ ಪಿಎಸ್‌ಐ ರವರು ಚಂದ್ರಾ ಲೇ-ಔಟ್ ನ ಗ್ಯಾರೇಜ್ ಒಂದರ ಬಳಿ ಗುಂಪು ಗುಡಿದ್ದ ಜನರ ಗುಂಪನ್ನು ಕಂಡು ಅಲ್ಲಿಗೆ ಹೋಗಿ ನೋಡಲು. ಸುಮಾರು ೨೫ವರ್ಷದ ಯುವಕನೊಬ್ಬ ಉಸಿರಾಡಲು ಕಷ್ಟ ಪಡುತ್ತಾ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುತ್ತಾನೆ. ಅಲ್ಲಿದ್ದ ಗುಂಪನ್ನು ದೂರ ಕಳಿಸಿ ಯುವಕನಿಗೆ ಉಸಿರಾಡಲು ಗಾಳಿಯಾಡುವಂತೆ ಅನುವು ಮಾಡಿ ಕೊಡುತ್ತಾರೆ, ಆದರೆ ಯುವಕನಲ್ಲಿ ಯಾವುದೇ ಚೇತರಿಕೆ ಕಾಣದಿದ್ದಾಗ, ತಡಮಾಡದೆ ಆಟೋದಲ್ಲಿ ಯುವಕನನ್ನು ಸ್ಥಳೀಯ ಸಾಗರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಚಿಕಿತ್ಸೆ ಕೊಡಿಸುತ್ತಾರೆ . ಆಸ್ಪತ್ರೆಗೆ ಬಂದ ಯುವಕನ ಸಂಬAದಿಕರು ಹಲವು ವರ್ಷಗಳಿಂದ ಯುವಕ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಸರಿಯಾದ ಚಿಕಿತ್ಸೆ ಹಾಗೂ ಔಷಧಿಗಳ ಕೊರತೆ ಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಗಿಯೂ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತಂದಿದ್ದರಿAದ ಯುವಕನಿಗೆ ಚಿಕಿತ್ಸೆ ಸಾಧ್ಯವಾಯಿತೆಂದು ತಿಳಿಸಿದ್ದಾರೆ. ಯುವಕ ಪ್ರಜ್ಞೆ ತಪ್ಪಿದ್ದರಿಂದ ಸ್ಥಳೀಯರು ಆತನ ಕೈಗೆ ಕಬ್ಬಿಣ ನೀಡಿ ಚೇತರಿಕೆಗಾಗಿ ಕಾಯುತ್ತ ಕುಳಿತಿದ್ದರು ಆದರೆ ಹಾಗೆ ಕುಳಿತಿದ್ದಾರೆ ಯುವಕ ಉಳಿಯುತ್ತಿರಲಿಲ್ಲ.
ಅನಿತಾ ಲಕ್ಷಿ÷್ಮಯವರ ಸಮಯಪ್ರಜ್ಞೆ ಹಾಗೂ ಮಾನವೀಯ ಗುಣಗಳು ಯುವಕನ ಪ್ರಾಣ ಉಳಿಸಿದೆ.  ಯುವಕ ಇಮ್ರಾನ್ ಹಲವು ವರ್ಷಗಳಿಂದ ಯಾವುದೇ ಮಾತ್ರೆ ಔಷದಿ ಗಳನ್ನೂ ತೆಗೆದು ಕೊಳ್ಳದೆ ಕುಡಿತದ ದಾಸ ನಾಗಿದ್ದು, ಪಿಡ್ಸ್ ಕಾಯಿಲೆ ಅತಿಯಾಗಲು ಕರಣವಾಗಿತ್ತು ಎನ್ನಲಾಗಿದೆ. ಇಮ್ರಾನ್ ಗೆ ಚಿಕಿತ್ಸೆ ಮುಗಿದು ಆತ ಎಚ್ಚರವಾಗುವವರೆಗೂ ಆತನ ಜೊತೆಗಿದ್ದು ಆತನಿಗೆ ಬೇಕಾದ ಮೆಡಿಸಿನ್ ಕೊಡಿಸಿ, ಮತ್ತೆ ಕುಡಿತದ ಚಟಕ್ಕೆ ಬಿದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂದು ಬುದ್ದಿ ಮಾತು ಹೇಳಿ ಅವನ ಮನೆಯವರನ್ನು ಕರೆಸಿ ಅವನನ್ನು ಕಲಿಸಿಕೊಡುವವರೆಗೆ ಪೂರ್ತಿ ಖರ್ಚು  ವೆಚ್ಚವನ್ನು ತಮ್ಮ ಸ್ವಂತ  ಹಣದಲ್ಲಿ ಭರಿಸಿರುತ್ತಾರೆ,
ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಮಾನವ ಸಹಜ ಗುಣ ,ಮಾನವೀಯತೆಯ ಮೌಲ್ಯವನ್ನು ಪಾಲನೆ ಮಾಡಿರುವ ಪಿಎಸ್‌ಐ ಅನಿತಾಲಕ್ಷ್ಮೀ ಯವರ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕರ ಮಾನ ಪ್ರಾಣ ರಕ್ಷಣೆಯ ಜೊತೆಗೆ ಮಾನವೀಯ ಕಾರ್ಯಗಳಿಗೂ ಪೊಲೀಸ್ ಸದಾ ಸಿದ್ಧಹಸ್ತರು ಎಂದು ಸಾರಿದ್ದಾರೆ.

Latest Stories

LEAVE A REPLY

Please enter your comment!
Please enter your name here