28.7 C
Bengaluru
Tuesday, October 8, 2024

ಖಾಕಿಯೊಳಗಿನ ಮಾತೃ ಹೃದಯಿ- ಈ ನಮ್ಮ ಇನ್ಸ್ ಪೆಕ್ಟರ್ ರೂಪ ಹಡಗಲಿ.

Date:


ನಮ್ಮ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿ ದಿನ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಎದುರಿಸುವ ಬಹು ಮುಖ್ಯ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಮಸ್ಯೆ. ದಿನೇಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಟ್ರಾಫಿಕ್ ಕಿರಿಕಿರಿಗೆ ಅತಿ ಮುಖ್ಯ ಕಾರಣ .ಆದರೆ ಈ ಟ್ರಾಫಿಕ್ ಸಮಸ್ಯೆ ನಡುವೆ ಟ್ರಾಫಿಕ್ ಪೊಲೀಸರನ್ನು ಕಂಡರೆ ಅಬ್ಬಾ ಮುಗಿದೇ ಹೋಯ್ತು, ಟ್ರಾಫಿಕ್ ಪೊಲೀಸರನ್ನು ಮನಸಿನಲ್ಲೇ ಶಪಿಸುತ್ತ ಅವರು ನಮ್ಮ ಬದ್ದ ವೈರಿಗಳೇ ಸರಿ ಎಂಬಂತೆ ನಡೆದುಕೊಳ್ಳುವುದು ಇದೆ. ಸ್ನೇಹಿತರೆ ಎಂದಾದರೂ ಅವರ ಕೆಲಸದ ಕಾರ್ಯ ವೈಕರಿಗಳ ಬಗ್ಗೆ ತಿಳಿದು ಕೊಂಡಿದ್ದೀರಾ? ಮನುಷ್ಯನ ಸಹಜ ಗುಣ ಗಳಲ್ಲಿ ಒಂದು ಆತನ ತಪುö್ಪಇದೆಂದು ಎತ್ತಿ ತೋರಿಸುವ ವ್ಯಕ್ತಿ ಆತನಿಗೆ ಇಷ್ಟವಾಗುವುದಿಲ್ಲ. ಆದರೆ ಈ ಟ್ರಾಫಿಕ್ ಇನ್ಸ್ಪೆಕ್ಟರ್ ಮಾಡಿರುವ ಕಾರ್ಯ ಎಲ್ಲೆಡೆ ಮುಚ್ಚುಗೆಗೆ ಪಾತ್ರವಾಗಿರುವಂತದ್ದು ಅನಾಥ ಮಕ್ಕಳ ಬಾಳಿಗೆ ಆಶಾಕಿರಣವಾದ ಟ್ರಾಫಿಕ್ ಪೊಲೀಸ್ ಇನ್ಸೆ÷್ಪಕ್ಟರ್ ರೂಪ ಹಡಗಲಿ.


ಘಟನೆಯ ವಿವರ : ಪ್ರಸ್ತುತ ರೂಪ ಹಡಗಲಿಯವರು ಬ್ಯಾಟರಾಯನಪುರ ಟ್ರಾಫಿಕ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಾಂಕ ೯/೦೫/೨೦೨೨ ರಂದು ಬೆಳಿಗ್ಗೆ ೯.೫೦ರ ಸುಮಾರಿಗೆ ನಾಗರಬಾವಿ ಸರ್ಕಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ, ದಂಪತಿಯ ಗಾಡಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ತೀವ್ರವಾಗಿ ಗಾಯಗೊಂಡಿರುತ್ತಾರೆ ಅವರನ್ನು ಇನ್ಸ್ಪೆಕ್ಟರ್ ರೂಪ ಅವರು ತಕ್ಷಣ ಹತ್ತಿರದ ಜಿ.ಎಂ ಆಸ್ಪತ್ರೆಗೆ ದಾಖಲು ಮಾಡುತ್ತಾರೆ, ತಡ ಮಾಡದೇ ಅವರ ಸಂಬಂಧಿಕರಿಗೆ ಕರೆ ಮಾಡುತ್ತಾರೆ, ಆದರೆ ಅಷ್ಟು ಬೇಗ ಯಾರು ಆಸ್ಪತ್ರೆಯ ಬಳಿ ಬಾರದ ಕಾರಣ ಚಿಕಿತ್ಸೆಗೆ ಹಣ ಕಟ್ಟದೆ ಚಿಕಿತ್ಸೆ ಶುರುವಾಗುವುದಿಲ್ಲ, ಇದನ್ನರಿತ ರೂಪ ಹಡಗಲಿಯವರು ಹಾಗೂ ಅವರ ಸಿಬ್ಬಂದಿ ಎಲ್ಲರೂ ತಮ್ಮ ಬಳಿ ಇದ್ದ ಹಣವನ್ನು ಒಟ್ಟು ಮಾಡಿ ೫೦,೦೦೦ರೂ ಗಳನ್ನು ಆಸ್ಪತ್ರೆಗೆ ಕಟ್ಟಿ ಚಿಕಿತ್ಸೆ ಕೊಡಿಸುತ್ತಾರೆ, ಆದರೆ ತೀವ್ರವಾಗಿ ಪೆಟ್ಟಾಗಿದ್ದ ಹೆಂಗಸು ಅಂದೇ ಮೃತಪಡುತ್ತಾಳೆ. ಎಷ್ಟೇ ಪ್ರಯತ್ನಪಟ್ಟರು ಆಕೆಯನ್ನು ಉಳಿಸಲಾಗಲಿಲ್ಲ ಎಂಬ ನೋವಲ್ಲೇ ಇನ್ಸ್ಪೆಕ್ಟರ್ ಹಿಂದಿರುಗುತ್ತಾರೆ.
ಇದಾದ ಕೆಲವು ದಿನಗಳ ನಂತರ ಅಂದರೆ ದಿನಾಂಕ ೧೪/೦೭/೨೦೨೨ರಂದು ಆಕೆಯ ಪತಿ ಯೋಗೇಂದ್ರ ಕೂಡ ಮೃತಪಡುತ್ತಾರೆ ವಿಷಯ ತಿಳಿದ ಡಿ.ಸಿ.ಪಿ. ಕುಲ್‌ದೀಪ್ ಜೈನ್‌ರವರು ಇನ್ಸ್ಪೆಕ್ಟರ್ ರೂಪಾರವರಿಗೆ ಆಸ್ಪತ್ರೆಗೆ ತೆರಳಿ ಮಕ್ಕಳಿಗೆ ಸಹಾಯ ಮಾಡುವಂತೆ ತಿಳಿಸುತ್ತಾರೆ. ತಕ್ಷಣ ಆಸ್ಪತ್ರೆಗೆ ಹೋಗಿ ನೋಡಲಾಗಿ ಎರಡು ಮುದ್ದಾದ ಹೆಣ್ಣು ಮಕ್ಕಳು ಅಂದು ಅನಾಥರಾಗಿರುತ್ತಾರೆ. ತಂದೆ ತಾಯಿಯನ್ನು ಅಪಘಾತದಲ್ಲಿ ಕಳೆದುಕೊಂಡು ದಿಕ್ಕೇ ತೋಚದೆ ನಿಂತಿರುತ್ತಾರೆ.
ಇನ್ಸ್ಪೆಕ್ಟರ್‌ರವರನ್ನು ಕಂಡ ಕೂಡಲೇ ಮಕ್ಕಳು ಹಾಗೂ ಅವರ ಸಂಬAಧಿಕರು ಆಸ್ಪತ್ರೆಯ ಬಿಲ್ ೭,೭೨,೦೦೦ (ಏಳು ಲಕ್ಷದ ಎಪ್ಪತ್ತೆರಡು ಸಾವಿರ)ಗಳಾಗಿದ್ದು ಅಷ್ಟು ಹಣ ಕಟ್ಟಲು ನಾವು ಅಶಕ್ತರೆಂದು ದಯಮಾಡಿ ನಮಗೆ ನೀವೇ ದಾರಿ ತೋರಿಸಬೇಕೆಂದು, ತಂದೆಯ ಅಂತ್ಯಸಂಸ್ಕಾರಕ್ಕೆ ದೇಹ ಕೊಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ,
ಟ್ರಾಫಿಕ್ ಪೊಲೀಸರೆಂದರೆ ದುಡ್ಡು ವಸೂಲಿಗಾಗಿಯೇ ನಿಂತಿರುತ್ತಾರೆ ಎಂದು ತಿಳಿದಿರುವವರಿಗೆ ಆದರ್ಶದಾಯಕ ವೆಂಬAತೆ ಇನ್ಸ್ಪೆಕ್ಟರ್ ರೂಪ ಹಡಗಲಿ ಆಸ್ಪತ್ರೆಯ ಮ್ಯಾನೇಜ್ಮೆಂಟ್ ಜೊತೆ ಮಾತನಾಡಿ ಮಕ್ಕಳ ಕುಟುಂಬದವರ ಪರಿಸ್ಥಿತಿಯ ಬಗ್ಗೆ ತಿಳಿಸಿ, ಬಿಲ್ ಅಮೌಂಟ್ ಅನ್ನು ಕಡಿಮೆ ಮಾಡುವಂತೆ ಕೇಳಿಕೊಳ್ಳುತ್ತಾರೆ, ಇನ್ಸ್ಪೆಕ್ಟರ್ ಮನವಿಗೆ ಸ್ಪಂದಿಸಿದ ಜಿ.ಎಂ ಆಸ್ಪತ್ರೆಯ ಆಡಳಿತ ವರ್ಗ ಕಡೇ ಪಕ್ಷ ಮೆಡಿಸಿನ್ ಅಮೌಂಟ್ ೭೫,೦೦೦ ಕಟ್ಟುವಂತೆ ಹೇಳುತ್ತಾರೆ, ಆದರೆ ಅದೂ ಸಹ ಮಕ್ಕಳ ಬಳಿ ಹಾಗೂ ಸಂಬಂಧಿಕರ ಬಳಿ ಇರುವುದಿಲ್ಲ ಮಕ್ಕಳ ಪರಿಸ್ಥಿತಿ ಕಂಡ ಇನ್ಸ್ಪೆಕ್ಟರ್ ರೂಪ ಹಡಗಲಿಯವರು ಆ ಹಣವನ್ನು ತಾವೇ ಪಾವತಿಸುವುದಾಗಿ ತಿಳಿಸುತ್ತಾರೆ. ಇನ್ಸ್ಪೆಕ್ಟರ್ ತಾವೇ ಹಣ ಪಾವತಿಸಲು ಮುಂದಾಗಿದ್ದನ್ನು ಕಂಡ ಆಸ್ಪತ್ರೆಯವರು ಇನ್ಸ್ಪೆಕ್ಟರ್‌ರವರ ಮಾನವೀಯ ಗುಣವನ್ನು ಮೆಚ್ಚಿ ಅಷ್ಟೂ ಹಣವನ್ನೂ ಬಿಟ್ಟುಕೊಟ್ಟು ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸುತ್ತಾರೆ. ಆಕ್ಸಿಡೆಂಟ್ ಆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸುವಲ್ಲಿಗೆ ಮಾತ್ರ ತಮ್ಮ ಕಾರ್ಯ ಮೀಸಲು ಎಂದು ಭಾವಿಸದೆ ಮಾತೃ ಹೃದಯಿಯಾಗಿ ಮಕ್ಕಳ ಮನವಿಗೆ ಮಿಡಿದ ಇನ್ಸ್ಪೆಕ್ಟರ್ ರೂಪ ಹಡಗಲಿಯವರ ಕಾರ್ಯಕ್ಕೆ ಮಕ್ಕಳು ಹಾಗೂ ಕುಟುಂಬದವರು ತಲೆಬಾಗಿದ್ದಾರೆ
ನಮ್ಮದೊಂದು ಸಲ್ಯೂಟ್

Latest Stories

LEAVE A REPLY

Please enter your comment!
Please enter your name here