ಪ್ರಸ್ತುತ ಕಾಲೇಜ್ ಒಂದರ ಲೆಕ್ಚರರ್ ಆಗಿರುವಂತ ಅಶ್ವಿನಿ ಯವರು ಬಟ್ಟೆ ಖರೀದಿಗಾಗಿ ಜಿ ಟಿ ಮಾಲ್‌ಗೆ ಹೋಗಿರುತ್ತಾರೆ. ಶಾಪಿಂಗ್ ಮುಗಿಸಿ ಮನೆಗೆ ಹೊರಡುವಾಗ ನೋಡಿಕೊಳ್ಳುತ್ತಾರೆ ಕೊರಳಲ್ಲಿದ್ದ ಮಾಂಗಲ್ಯ ಸರವೇ ನಾಪತ್ತೆ, ಒಂದು ಕ್ಷಣ ದಿಗ್ಬ್ರಾಂತರಾಗಿದ್ದ ಅಶ್ವಿನಿ ಇಡೀ ಮಾಲ್, ತಾವು ಓಡಾಡಿದ ಸ್ಥಳವೆಲ್ಲ ಕಿಂಚಿತ್ತೂ ಬಿಡದೆ ಹುಡುಕಾಡುತ್ತಾರೆ ಆದರೆ ಮಾಂಗಲ್ಯ ಸರದ ಸುಳಿವೇ ಸಿಗುವುದಿಲ್ಲ. ಮಾಲ್‌ನ ಸಿಬ್ಬಂದಿ ಹಾಗೂ ಮ್ಯಾನೇಜರ್ ಬಳಿ ನಂಬರ್ ಕೊಟ್ಟು ಸರ ಸಿಕ್ಕರೆ ಮಾಹಿತಿ ಕೊಡುವಂತೆ ತಿಳಿಸುತ್ತಾರೆ
ಆದರೆ ಒಂದು ವಾರವಾದರೂ ಸರದ ಸುಳಿವೂ ಸಿಗುವುದಿಲ್ಲ. ಹದಿನೈದು ದಿನಗಳ ನಂತರ ಮಾಲ್ ಸಿಬ್ಬಂದಿಯಿಂದ ಒಂದು ಕರೆ ಬರುತ್ತದೆ ನಿಮ್ಮ ಸರ ಸಿಕ್ಕಿದೆ ಬನ್ನಿ ಎಂದು. ಪ್ರತಿದಿನವೂ ಕರೆ ಮಾಡಿ ಮಾಲ್ ಸಿಬ್ಬಂದಿಗಳನ್ನು ಸರ ಸಿಕ್ಕಿತಾ ಎಂದು ಕೇಳುತ್ತಿದ್ದ ಅಶ್ವಿನಿಯವರಿಗೆ ಸರ ಸಿಕ್ಕಿದೆ ಎಂಬ ವಿಷಯ ಕೇಳಿ ಆಶ್ಚರ್ಯ ಹಾಗೂ ಸಂತೋಷ, ಮಾಲ್‌ಗೆ ಹೋಗಿ ನೋಡಲಾಗಿ ಅಂಜನ್‌ಕುಮಾರ್ ಎಂಬ ವ್ಯಕ್ತಿ ಸರವನ್ನು ಅಶ್ವಿನಿಯವರಿಗೆ ನೀಡುತ್ತಾರೆ. ಸಂತೋಷಗೊAಡ ಅಶ್ವಿನಿಯವರು ಅಂಜನ್ ಕುಮಾರ್ ರವರನ್ನು ನೀವು ಯಾರು ನಿಮಗೆ ಹೇಗೆ ಸರ ಸಿಕ್ಕಿತೆಂದು ಕೇಳಲಾಗಿ, ನಾನೊಬ್ಬ ಪೊಲೀಸ್. ನಾನು ನನ್ನ ಹೆಂಡತಿಯೊಡನೆ ಶಾಪಿಂಗ್‌ಗೆ ಬಂದಿದ್ದು ನನ್ನ ಹೆಂಡತಿ ಬಟ್ಟೆ ಟ್ರಯಲ್‌ಗೆಂದು ತೆಗೆದುಕೊಂಡ ಚೂಡಿದಾರ್‌ನಲ್ಲಿ ಈ ಸರ ಸಿಕ್ಕಿಹಾಕಿಕೊಂಡಿತ್ತು, ನಾನು ಅಂಗಡಿಯವರ ಬಳಿ ಇಲ್ಲಿ ಯಾರಾದರೂ ಸರವನ್ನು ಕಳೆದು ಕೊಂಡಿದ್ದೀರಾ? ಎಂದು ಕೇಳಲಾಗಿ ಹೌದು ಒಬ್ಬ ಮಹಿಳೆ ಕಳೆದ ಹದಿನೈದು ದಿನಗಳ ಹಿಂದೆ ಸರ ಕಳೆದುಕೊಂಡು ಇಲ್ಲೆಲ್ಲಾ ಹುಡುಕಾಡಿದ್ದರು ಬಹುಶ: ಬಟ್ಟೆ ಟ್ರಯಲ್ ಮಾಡುವಾಗ ಬಟ್ಟೆಯ ಜೊತೆ ಸರವು ಸಿಕ್ಕಿ ಹಾಕಿಕೊಂಡಿರಬೇಕು,
ನಮಗೆ ಸರ ನೀಡಿ ಅವರನ್ನು ಕರೆಸಿ ನಾವು ಅವರಿಗೆ ಸರ ವಾಪಾಸ್ ನೀಡುವುದಾಗಿ ತಿಳಿಸಿದರು ಆದರೆ ಅಂಗಡಿಯವರ ಮಾತನ್ನು ನಂಬದ ನಾನು ನನ್ನ ಮುಂದೆಯೇ ಸರ ಕಳೆದುಕೊಂಡವರನ್ನು ಕರೆಸಿ ನಾನೇ ಅವರ ಕೈಗೆ ಸರ ಕೊಡುವುದಾಗಿ ತಿಳಿಸಿ ನಿಮ್ಮನ್ನು ಇಲ್ಲಿಗೆ ಕರೆಸಿದೆ ಎಂದು ತಿಳಿಸುತ್ತಾರೆ. ಅಂಜನ್ ಕುಮಾರ್ ಒಬ್ಬ ಪೊಲೀಸ್ ಎಂದು ತಿಳಿದ ಅಶ್ವಿನಿಯವರು ಬಹಳ ಸಂತೋಷದಿAದ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಪ್ರಾಮಾಣಿಕತೆಯಿಂದ ಸರ ವಾಪಾಸ್ ನೀಡಿದ ಅಂಜನ್‌ಕುಮಾರ್‌ರವರು ಅರೋಗ್ಯ ಮಂತ್ರಿಗಳಾದ ಕೆ. ಸುಧಾಕರ್‌ರವರ ಗನ್ ಮ್ಯಾನ್ ಎಂದು ತಿಳಿದು ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಪೊಲೀಸ್ ಕಮಿಷನರ್‌ರವರಿಗೆ ಪತ್ರ ಬರೆದು ಅಂಜನ್ ಕುಮಾರ್‌ರವರ ಪ್ರಾಮಾಣಿಕತೆಯಿಂದ ಪೊಲೀಸ್ ಇಲಾಖೆಯ ಮೇಲಿದ್ದ ಗೌರವ ಇನ್ನಷ್ಟು ಅಧಿಕವಾಯಿತು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಪೊಲೀಸ್ ಎಂದು ಮತ್ತೊಮ್ಮೆ ರುಜುವಾತಾಯಿತು ಎಂದಿದ್ದಾರೆ.
ಅಶ್ವಿನಿಯವರು ತಮ್ಮ ಕಾಲೇಜಿಗೆ ಅಂಜನ್‌ಕುಮಾರ್‌ರವರನ್ನು ಕರೆಸಿ ಸನ್ಮಾನ ಮಾಡಲು ಬಯಸಿದರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಈ ಸೇವೆಯನ್ನು ಪ್ರಚಾರ ಮಾಡುವ ಉದ್ದೇಶವಿಲ್ಲವೆಂದು, ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ನಮ್ಮ ಸಾಹೇಬರಾದ ಸುಧಾಕರ್ ರವರ ಮೆಚ್ಚುಗೆ ಇಂದಲೇ ನಾನು ಬಹಳ ಸಂತೋಷಪಟ್ಟಿದ್ದೇನೆ ಮತ್ತು ಮತ್ತಷ್ಟು ಒಳ್ಳೆ ಕಾರ್ಯ ಮಾಡಲು ಪ್ರೇರೇಪಿತ ನಾಗಿದ್ದೇನೆ ಎಂದು ಅಂಜನ್ ಕುಮಾರ್ ತಿಳಿಸಿದ್ದಾರೆ. ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಅಂಜನ್ ಕುಮಾರ್‌ರವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮಾನ್ಯ ಅರೋಗ್ಯ ಸಚಿವರಾದ ಕೆ. ಸುಧಾಕರ್ ರವರು ತಮ್ಮ ಗನ್ ಮ್ಯಾನ್‌ರ ಪ್ರಾಮಣಿಕತೆಯ ಕೆಲಸ ಕಂಡು ಬಹಳಷ್ಟು ಖುಷಿ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಈ ಗನ್‌ಮ್ಯಾನ್
Date: