ಸೋದರ ಸೋದರಿಯರ ನಡುವಿನ ಬಾಂಧವ್ಯದ ಮಹತ್ವ ಸಾರುವ ರಕ್ಷಾಬಂಧನ ಹಬ್ಬವನ್ನು ನಾಡಿನೆಲ್ಲೆಡ ಸಂಭ್ರಮದಿಂದ ಆಗಸ್ಟ್ ಹನ್ನೊಂದರಂದು ಆಚರಿಸಲಾಯಿತು.
ಸಹೋದರಿಯರು ತಮ್ಮ ಸಹೋದರರು ನಮ್ಮ ರಕ್ಷಣೆಯ ಹೊಣೆ ಹೊತ್ತವರು ಅವರ ಕೈಗೆ ಕಟ್ಟುವ ಈ ರಕ್ಷಾ ಬಂಧನವು ಅವರನ್ನು ಕಾಪಾಡುತ್ತದೆ ಎಂಬ ನಂಬಿಕೆಯ ಧ್ಯೋತಕ ಎನ್ನುತ್ತಾರೆ. ನಮ್ಮ ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸರು ಇಂದು ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಗಳಿಬ್ಬರು ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರಿಗೆ ಸಹೋದರತ್ವದ ಸಂಕೇತವಾಗಿ ರಾಖಿ ಕಟ್ಟಿದ್ದಾರೆ.
ಹಮ್ಮು ಬಿಮ್ಮು ತೋರದೆ ಎಲ್ಲರನ್ನು ಸಮಾನವಾಗಿ ಕಾಣುವ ನಮ್ಮ ಗೃಹ ಸಚಿವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು ಮಹಿಳಾ ಕಾನ್ಸ್ಟೇಬಲ್ ಗಳಿಂದ ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸಿದ್ದಲ್ಲದೆ ಎಲ್ಲರಿಗೂ ರಕ್ಷಾಬಂಧನದ ಶುಭ ಕೋರಿದ್ದಾರೆ.
