28.7 C
Bengaluru
Tuesday, October 8, 2024

ಬೆಂಗಳೂರು ಪೊಲೀಸರ ಚಾಣಾಕ್ಷ ತನಿಖೆ

Date:


ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಾಂಗ್ಲಾ ದೇಶದ ಯುವತಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ, ಇದು ದೇಶ ವಿದೇಶಗಳಲ್ಲಿ ಬಹು ದೊಡ್ಡ ಸುದ್ದಿ ಮಾಡಿದ್ದ ಪ್ರಕರಣ.
ಈ ಪ್ರಕರಣವು ಒಂದಷ್ಟರ ಮಟ್ಟಿಗೆ ಹೇಳುವುದಾದರೆ, ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲವೇನೋ? ಇಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿಲ್ಲವೇನೋ?ಇ ಲ್ಲಿನ ಪೊಲೀಸರು ಕಾರ್ಯ ನಿರ್ವಹಿಸುತ್ತಿಲ್ಲ ವೇನೋ? ಎಂಬೆಲ್ಲ ಪ್ರಶ್ನೆಗಳು ಉದ್ಬವಿಸುವಂತೆ ಮಾಡಿದ್ದವು. ಆದರೆ ತದ ನಂತರ ಈ ಪ್ರಕರಣದ ತನಿಖಾ ಹಾದಿಯಾಗಲಿ ಆರೋಪಿಗಳಿಗೆ ಮುಂದೇನಾಯ್ತು ಇವೆಲ್ಲವೂ ಪ್ರಶ್ನಾದಾಯಕವಾಗಿಯೇ ಉಳಿದುಬಿಟ್ಟವು. ಈ ಪ್ರಕರಣದ ಇನ್ವೆಸ್ಟಿಗೇಷನ್ ಆಫೀಸರ್ ಆಗಿದ್ದವರು ನಿಂಗಪ್ಪ ಸಕ್ರಿಯವರು.


ವೃತ್ತಿ ನಿಷ್ಠೆ, ಹಾಗೂ ಪ್ರಕರಣ ಬಗೆಹರಿಸುವಲ್ಲಿ ಈ ಅಧಿಕಾರಿ ತೋರಿದ ಚಾಣಾಕ್ಷ ನಡೆ ಇಂದು ಸಂತ್ರಸ್ತೆಗೆ ನ್ಯಾಯ ದೊರಕುವಂತಾಗಿದೆ. ಡಿಸಿಪಿ ಶರಣಪ್ಪ ನವರ ಮಾರ್ಗದರ್ಶನದಲ್ಲಿ ಎಸಿಪಿ ನಿಂಗಪ್ಪ ಸಕ್ರಿಯವರ ನೇತೃತ್ವದಲ್ಲಿಹಾಗೂ ರಾಮಮೂರ್ತಿನಗರ ಠಾಣೆಯ ಇನ್ಸೆ÷್ಪಕ್ಟರ್ ಮೆಲ್ವಿನ್ ಫ್ರಾನ್ಸಿಸ್, ಹಾಗೂ ಇವರ ತಂಡ ಪ್ರಕರಣ ಸಂಬAಧ ಕಾರ್ಯಾಚರಣೆ ನಡೆಸಿ ಹದಿಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದ ಹದಿಮೂರು ಜನ ಬಾಂಗ್ಲಾ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ ಯಾಗುತ್ತಾರೆ. ಕೇವಲ ಮೂವತ್ತೊಂದು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದ ಕೀರ್ತಿ ಸಕ್ರಿಯ ಅಧಿಕಾರಿ ಸಕ್ರಿ ಅವರಿಗೆ ಸಲ್ಲುತ್ತದೆ. ಹೌದು ಕೇವಲ ಮೂವತ್ತೊಂದು ದಿನಗಳಲ್ಲಿ ತನಿಖೆ ಪೂರ್ಣ ಗೊಳಿಸಿ ಕೋರ್ಟ್ ಗೆ ಚಾರ್ಜಶೀಟ್ ಸಲ್ಲಿಸಿ, ಅರವತ್ತು ದಿನಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಘಟನೆ ನಡೆದ ಸಂದರ್ಭದ ಕಮಿಷನರ್ ಆಗಿದ್ದಂತಹ ಕಮಲ್ ಪಂತ್ ರವರು ಖುದ್ದು ಆರೋಪಿಗಳನ್ನು ವಿಚಾರಣೆ ನಡೆಸುತ್ತಾರೆ. ಈ ಪ್ರಕರಣದ ಎಫ್‌ಎಸ್ ಎಲ್ ರಿಪೋರ್ಟ್ ಒಂದು ವಾರದೊಳಗೆ ಅಧಿಕಾರಿಗಳ ಕೈ ಸೇರುತ್ತದೆ.
ಸಂತ್ರಸ್ತೆಯ ಪರಿಸ್ಥಿತಿ ಕಣ್ಣಾರೆ ಕಂಡ ಎಸಿಪಿ ಸಕ್ರಿಯವರು ಹಗಲಿರುಳೆನ್ನದೆ ಶ್ರಮಿಸಿ ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ನೋಡಿಕೊಳ್ಳುತ್ತಾರೆ. ಹಗಲಿರುಳೆನ್ನದೆ,ಸಮಯದ ಪರಿವೇ ಇಲ್ಲದೆ ನಡೆಸಿದ ರೋಚಕ ತನಿಖಾನ್ವೇಷಣೆಯ ಪರಿಣಾಮ ಹದಿಮೂರು ಜನರ ಪೈಕಿ ಏಳು ಜನರಿಗೆ ಜೀವಾವಧಿ ಶಿಕ್ಷೆ ಯಾಗುತ್ತದೆ.ಉಳಿದ ಆರು ಜನಕ್ಕೆ ತಲಾ ಹತ್ತು ವರ್ಷ ಶಿಕ್ಷೆ ವಿಧಿಸಿ ,ಮಾನ್ಯ ಘನ ನ್ಯಾಯಾಲಯ ಆದೇಶಿಸುತ್ತದೆ. ತೀರ್ಪು ಹಾಗೂ ತೀರ್ಪಿನ ಪ್ರಮಾಣ ಯಾವಾಗಲೂ ತನಿಖಾಧಿಕಾರಿಯ ತನಿಖೆಯ ಕಾರ್ಯವೈಖರಿ ಹಾಗೂ ತನಿಖಾ ವರದಿಯನ್ನು ಆಧರಿಸಿರುತ್ತದೆ. ನಿಂಗಪ್ಪ ಸಕ್ರಿಯವರ ತನಿಖಾ ವರದಿ ಎಷ್ಟು ಮಹತ್ವಪೂರ್ಣವಾಗಿತ್ತೆಂದರೆ ಕಾನೂನಿನ ಎಲ್ಲಾ ದೃಷ್ಟಿ ಕೋನದಲ್ಲೂ ಆರೋಪಿಗಳ ಅಪರಾಧವು ರುಜುವಾತಾಗುತ್ತದೆ.
ತನಿಖಾಧಿಕಾರಿಯ ತನಿಖಾವರದಿಯ ಕುರಿತು ವಕೀಲರಾದ ಆರ್ .ಪಿ ಚಂದ್ರಶೇಖರ್ ಮಾತನಾಡಿ ಒಂದು ಪ್ರಕರಣದ ತನಿಖೆಯನ್ನು ಕೇವಲ ಮೂವತ್ತೊಂದು ದಿನಗಳಲ್ಲಿ ಮುಗಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಕಾನೂನಿನಲ್ಲೇ ತನಿಖಾಧಿಕಾರಿಗೆ ೬೦ ದಿನಗಳ ಅವಕಾಶವನ್ನು ಕಾನೂನು ನೀಡಿದೆ. ಅದರರ್ಥ ಕಾನೂನಿಗೂ ತಿಳಿದಿದೆ ತನಿಖೆಯನ್ನು ಪೂರ್ಣ ಗೊಳಿಸಲು ಒಬ್ಬ ಅಧಿಕಾರಿಗೆ ಇಂತಿಷ್ಟೇ ಸಮಯ ಬೇಕೆಂದು ಆದರೆ ಈ ಪ್ರಕರಣದ ತನಿಖಾಧಿಕಾರಿಯು ಕೇವಲ ಮೂವತ್ತೊಂದು ದಿನಗಳಲ್ಲಿ ತನಿಖೆ ಪೂರ್ಣ ಗೊಳಿಸಿರುವುದು, ವೃತ್ತಿಯ ಹಾಗೂ ಪ್ರಕರಣದ ಬಗ್ಗೆ ಅವರಿಗಿದ್ದ ಆಸಕ್ತಿ ಅವರ ಶ್ರದ್ದೆಯನ್ನು ತಿಳಿಸುತ್ತದೆ. ಈ ತನಿಖೆ ಮೂವತ್ತೊಂದು ದಿನಗಳಲ್ಲಿ ಪೂರ್ಣ ವಾಗಬೇಕಾದರೆ ಈ ಅಧಿಕಾರಿ ಹಾಗೂ ತನಿಖಾಧಿಕಾರಿಯ ವರ್ಗ ದಿನದ ಹದಿಮೂರು ತಾಸಾದರು ಕೆಲಸ ಮಾಡಿರಲೇಬೇಕು ,ಅಷ್ಟೇ ಮುತುವರ್ಜಿಯನ್ನು ಈ ಅಧಿಕಾರಿ ವರ್ಗ ವಹಿಸಿರಲೇಬೇಕು.,
ಅಷ್ಟೇ ಅಲ್ಲದೆ ಆರೋಪಿಗಳಿಗೆ ಶಿಕ್ಷೆಯಾಗಲು ಆ ತನಿಖಾ ವರದಿಯೇ ಭದ್ರ ಬುನಾದಿ ಒಂದು ಮನೆ ಕಟ್ಟಲು ಅಡಿಪಾಯ ಎಷ್ಟು ಮುಖ್ಯವೋ ಹಾಗೆ ಒಂದು ಪ್ರಕರಣದಲ್ಲಿ ಆ ಪ್ರಕರಣದ ತನಿಖಾಧಿಕಾರಿಯ ತನಿಖಾ ವರದಿ ಅಡಿಪಾಯವಿದ್ದಂತೆ.ಈ ಪ್ರಕರಣದ ತೀವ್ರತೆ ಹಾಗೂ ತನಿಖಾಧಿಕಾರಿಯ ವಸ್ತು ನಿಷ್ಠ, ವೃತ್ತಿ ನಿಷ್ಠತೆಯನ್ನು ಪರಿಗಣಿಸಿದ ನ್ಯಾಯಾಲಯವು ಇವರಿಗೆ ಸಹಕರಿಸಿ ಕೇವಲ ಅರವತ್ತು ದಿನಗಳಲ್ಲಿ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ ಹಾಗೂ ತನಿಖಾಧಿಕಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಇಷ್ಟೆಲ್ಲದರ ನಡುವೆ ಸಂತ್ರಸ್ತೆ ಗೆ ನ್ಯಾಯ ದೊರಕಿಸಿ ಕೊಟ್ಟಿದ್ದಲ್ಲದೆ, ಸಂತ್ರಸ್ತೆ ಸುರಕ್ಷಿತವಾಗಿ ತನ್ನ ತವರು ಸೇರುವಂತೆ, ಹಾಗು ಆಕೆಯಲ್ಲಿ ಸುರಕ್ಷಿತ ಮನೋಭಾವ ಮೂಡುವಂತೆ ನಡೆದುಕೊಂಡವರು ಈ ನಮ್ಮ ಹೆಮ್ಮೆಯ ಪೊಲೀಸರು.ಎಲ್ಲೂ ಆರೋಪಿಗಳು ಕಾನೂನಿನ ಮುಷ್ಠಿ ಇಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ಎಸಿಪಿ ನಿಂಗಪ್ಪ ಸಕ್ರಿ ಇನ್ಸೆ÷್ಪಕ್ಟರ್ ಮೆಲ್ವಿನ್ ಫ್ರಾನ್ಸಿಸ್ ಹಾಗು ತಂಡದ ಪಾತ್ರ ಅಮೋಘ, ಅವಿಸ್ಮರಣೀಯ,

ಡಿಸಿಪಿ ಶರಣಪ್ಪ.


ವಕೀಲರಾದ ಗಂಗಾಧರ್ ಅಭಿಪ್ರಾಯ* ಇಂತಹ ಪ್ರಕರಣಗಳು, ಅಪರಾಧಗಳು ರಾಷ್ಟç ಮಟ್ಟದಲ್ಲಿ ಸುದ್ದಿ ಮಾಡಿದಾಗ, ಇದರಿಂದಾದ ಶಿಕ್ಷೆಯ ಪ್ರಮಾಣ ತನಿಖೆಯ ಹಾದಿ , ಕಾನೂನಿನ ಕೈ ಎಷ್ಟು ದೊಡ್ಡದಿದೆಹಾಗೂ ಕಾನೂನು ಆರೋಪಿಗಳು ಯಾವ ಬಿಲದಲ್ಲಿದ್ದರೂ ಆರೋಪಿಗಳನ್ನು ಅಪರಾಧಿ ಸ್ಥಾನಕ್ಕೆ ತಂದು ನಿಲ್ಲಿಸಿ ಶಿಕ್ಷೆ ನೀಡುತ್ತದೆ ಎಂಬುದೂ ಸಹ ಸುದ್ಫಿಯಾಗಬೇಕು,ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು,ಆಗ ಮಾತ್ರ ಕಾನೂನು ಕಾನೂನು ರಕ್ಷಕರ ಮೇಲೆ ಸಂವಿಧಾನದ ಮೇಲೆ ಗೌರವ ಹೆಚ್ಚಾಗಲು ಅಪರಾಧಿಗಳ ಎದೆಯಲ್ಲಿ ತಲ್ಲಣ ಉಂಟುಮಾಡಲು ಸಹಾಯಕ.

Latest Stories

LEAVE A REPLY

Please enter your comment!
Please enter your name here