28.7 C
Bengaluru
Tuesday, October 8, 2024

*ಮಾನವೀಯತೆ ಮೇರೆದ ತುಮಕೂರು ಎಸ್ಪಿ*

Date:


ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಅವರು ತಮ್ಮ ಕಾರ್ಯವೈಖರಿ ಇಂದಲೇ ಹೆಸರು ಮಾಡಿದವರು, ಈ ಹಿಂದೆ ತಮ್ಮ ವ್ಯಾಪ್ತಿಗೆ ಬರುವ ದಂಡಿನಶಿವರ ಠಾಣೆಯಲ್ಲಿ ದಾಖಲಾಗಿದ್ದ ಅಟ್ಟೆಂಪ್ಟ್ ಟು ಮರ್ಡರ್ ಕೇಸ್ ಒಂದರಲ್ಲಿ ಆರೋಪಿಗಳನ್ನು ಬಂಧಿಸಲು ಮೀನಾ ಮೇಷ ಎಣಿಸುತ್ತಿದ್ದ ಸಿಬ್ಬಂದಿಗಳಿಗೆ, ತಮ್ಮದೇ ಶೈಲಿಯಲ್ಲಿ ಚುರುಕು ಮುಟ್ಟಿಸಿದವರು ಈ ಖಡಕ್ ಅಧಿಕಾರಿ.


ದೂರುದಾರರು ಆರೋಪಿಗಳನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಕೇಳಲು ಹೋದರೆ ಆರೋಪಿಗಳನ್ನು ಹಿಡಿದು ತರಲು ನಮ್ಮ ಬಳಿ ಕಾರ್ ಇಲ್ಲ ಒಂದು ಕಾರಿನ ವ್ಯವಸ್ಥೆ ಮಾಡಿಕೊಂಡು ಬನ್ನಿ ಆರೋಪಿಗಳನ್ನು ಹಿಡಿದು ತರಲು ಹೋಗುತ್ತೇವೆ ಎಂದು ತಿಳಿಸುತ್ತಾರೆ.
ಇದೆ ವಿಚಾರವನ್ನು ದೂರುದಾರರು ಎಸ್ಪಿಯವರ ಗಮನಕ್ಕೆ ತರುತ್ತಾರೆ, ಕೂಡಲೇ ಎಸ್ಪಿಯವರು ತಮ್ಮ ಕಾರನ್ನು ಕೊಟ್ಟು ಪೊಲೀಸ್ ಠಾಣೆಗೆ ಕಳಿಸುತ್ತಾರೆ.ಠಾಣೆ ಮುಂದೆ ಎಸ್ಪಿ ಯವರ ಕಾರನ್ನು ಕಂಡ ಠಾಣೆಯ ಸಿಬ್ಬಂದಿ ಹೌಹಾರಿ ಬಿಡುತ್ತಾರೆ, ತಮ್ಮ ತಪ್ಪಿನ ಅರಿವನ್ನು ತಾವೇ ಮನಗೊಂಡು ಕೇವಲ ಒಂದು ದಿನದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತರುತ್ತಾರೆ ಹಾಗೂ ತಮ್ಮ ತಪ್ಪಿಗೆ ಎಸ್ಪಿ ಯವರ ಬಳಿ ಕ್ಷಮೆ ಯಾಚಿಸುತ್ತಾರೆ, ಹೀಗೆ ತಮ್ಮದೇ ಶೈಲಿಯಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯದ ಪಾಠ ಹೇಳಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.
ಆದರೆ ಇಂದು ಇವರು ಮತ್ತೆ ಸುದ್ದಿಯಲ್ಲಿರುವುದು ಇವರಲ್ಲಿರುವ ಮಾನವೀಯ ಗುಣಗಳಿಗೆ. ತುಮಕೂರಿನ ಕಳ್ಳಂ ಬೆಳ್ಳ ಸಮೀಪ ನಡೆದ ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ ೨೩ಜನ ಕೂಲಿ ಕಾರ್ಮಿಕರಲ್ಲಿ ೧೦ಜನ ಅಸುನೀಗಿದರೆ, ಇನ್ನುಳಿದ ಅನೇಕರು ಗಾಯಗೊಂಡಿದ್ದರು. ವಿಷÀಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ರವರು ಅಪಘಾತ ಸ್ಥಳದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಮತ್ತೆ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡಿದ್ದ ಮಗುವನ್ನು ಎತ್ತುಕೊಂಡು ಮಗುವನ್ನು ಉಪಚರಿಸಿದ ರೀತಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಪಘಾತದಲ್ಲಿ ಆ ಮಗುವಿನ ತಾಯಿಯೂ ಸಹ ಗಾಯಗೊಂಡಿದ್ದು ಮಗುವನ್ನು ಸಂತೈಸಲು ಅಸಹಾಯಕಳಾಗಿ ದ್ದರಿಂದ, ಸ್ವತಃ ಎಸ್ಪಿ ಯವರೇ ಮಗುವನ್ನು ಸಂತೈಸಿ ಮಗುವಿನ ತಾಯಿ ಎಚ್ಬರಗೊಳ್ಳುವವರೆಗೆ ಮಗುವನ್ನು ಎತ್ತಿಕೊಂಡೆ ಆಕೆಯ ಬೆಡ್ ಬಳಿ ಕಾದು ಕುಳಿತಿದ್ದರು.
ಮಗುವಿನ ಸಂಕಟ ಕಂಡು ಅವರು ಮರುಗಿದ ರೀತಿ, ನಾನೊಬ್ಬ ಅಧಿಕಾರಿ ಎಂಬುದನ್ನೇ ಮರೆತು ಅವರು ಮಗುವನ್ನು ಸಂತೈಸಿದ ಪರಿ, ಎಲ್ಲವೂ ಎಲ್ಲರ ಕಣ್ಣಲ್ಲಿ ಯೂ ಪ್ರಶಂಸೆ ಹಾಗು ಹೆಮ್ಮೆಯ ಅಧಿಕಾರಿಯ ಹೊಣೆಗಾರಿಕೆಯ ಬಗ್ಗೆ ಅಭಿನಂದನೆ ಸಲ್ಲಿಸುವಂತಿತ್ತು.

Latest Stories

LEAVE A REPLY

Please enter your comment!
Please enter your name here