ನಗರದ ಹೊರವಲಯದಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ದೋಚಿದ್ದ ಕಳ್ಳರ ಬೆನ್ನು ಹತ್ತಿದ ಮಾದನಾಯಕನಹಳ್ಳಿ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ದೇಶದ ಸಾರ್ವಭೌಮತ್ವ ಪಡೆದುಕೊಳ್ಳುತಿದ್ದ ಅಕ್ರಮ ಕ್ರಿಮಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ, ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ.ಅಧಿಕೃತ ಮಾಹಿತಿಗಳ ಪ್ರಕಾರ ಪ್ರಕರಣದಲ್ಲಿ ಬಾಂಗ್ಲಾದ ಸಯುಲ್ ಅಕೂನ್ @ ಶಾಹೀದ್ ಅಹಮದ್ ಆತನ ಮಗ ಹಾಗೂ ಸೈಯ್ಯದ್ ಅಲೀಮ್ ಬಂಧನವಾಗಿದೆ.ಇವ್ರ ಜೊತೆಗೆ ಸ್ಥಳೀಯವಾಗಿ ಆರೋಪಿಗಳಿಗೆ ಸಹಾಯ ಮಾಡ್ತಿದ್ದ ಸುಹೇಲ್ ಅಹಮದ್, ಮೊಹಮ್ಮದ್ ಇದಾಯತ್, ಅಮೀನ್ ಸೇಟಡ್, ಸಾಫ್ಟ್ ವೇರ್ ಇಂಜಿನಿಯರ್ ರಾಕೇಶ್ ಬಿಬಿಎಂಪಿ ಆಯಿಷಾ, ಮನ್ಸೂರ್ ಮತ್ತು ಇಸ್ತಿಯಾಕ್ ರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲವು ತಿಂಗಳಿನಿಂದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಜತೆಗೆ ೧೮ ಲಕ್ಷ ರೂಪಾಯಿಗಳ ಲೂಟಿ ಪ್ರಕರಣ ನಡೆದಿತ್ತು. ಈ ಪ್ರಕರಣ ತನಿಖೆ ವೇಳೆ ಅಕ್ರಮವಾಗಿ ದೇಶ ನುಸುಳಿದ್ದ ಬಾಂಗ್ಲಾದೇಶ ಪ್ರಜೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು.. ಇನ್ನೂ ಈ ಪ್ರಕರಣದ ಪ್ರಮುಖ ಆರೋಪಿ ಸೈದುಲ್ ಅಕೂನ್ ೨೦೧೧ ರಲ್ಲಿ ನಗರಕ್ಕೆ ಬಂದಿದ್ದು, ಬ್ಯುಸಿನೆಸ್ ಮಾಡಿಕೊಂಡಿದ್ದ.
ಪೊಲೀಸರು ತನಿಖೆ ನಡೆಸಿದಾಗ ಸುಮಾರು ೩೧ ಆಧಾರ್ ಪತ್ತೆಯಾಗಿದ್ದು. ೯೦ಕ್ಕೂ ಹೆಚ್ಚು ಆಧಾರ್ ಎನ್ರೋಲ್ ಪ್ರತಿಗಳು ಸಿಕ್ಕಿದ್ದು ಸದ್ಯ ಪೊಲೀಸರು ಈ ಆಧಾರ್ ಪಡೆದ ಬಾಂಗ್ಲಾ ಪ್ರಜೆಗಳ ಹುಡುಕಾಟ ನಡೆಸಿದ್ದಾರೆ. ಇನ್ನೂ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಕಾರ್ಯಕ್ಕೆ ಐಜಿಪಿ ಚಂದ್ರಶೇಖರ್, ಎಸ್ಪಿ ವಂಶಿಕೃಷ್ಣ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಇವರನ್ನು ದೇಶದಲ್ಲಿ ಅಂದ್ರೆ ಬೆಂಗಳೂರು ಗ್ರಾಮಾಂತರದಲ್ಲಿ ಹಾಗೇ ಬಿಟ್ಟರೇ ದೇಶದ ಭದ್ರತೆಗೆ ಹಾನಿಯುಂಟು ಮಾಡುವ ಸಂಭವವಿರುವುದರಿಂದ ಕಾನೂನಾತ್ಮಕವಾಗಿ ಕೋರ್ಟ್ ನಿಂದ ಆದೇಶ ಪಡೆದು ಸದ್ಯ ಆರು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಯಾಚೆಗೆ ಬಿಟ್ಟು ಬರುವಲ್ಲಿ ಮಾದ ನಾಯಕನಹಳ್ಳಿ ಪೊಲೀಸರ ಯಶಸ್ವಿಯಾಗಿದ್ದಾರೆ . ಸಣ್ಣ ಸುಳಿವು ಹಿಡಿದು ಭಾರಿ ಕ್ರಿಮಿಗಳಾದ ನುಸುಳುಕೋರರನ್ನು ಗಡಿಪಾರು ಮಾಡಿಸಿದ ಕೀರ್ತಿ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತವರ ತಂಡಕ್ಕೆ ಸಂದಿದೆ.
