28.7 C
Bengaluru
Tuesday, October 8, 2024

*ಖಾಕಿಯೊಳಗಿನ ಮಾತೃ ಹೃದಯಿ v/s ತಿರಸ್ಕೃತರು *

Date:

ಸಿಲಿಕಾನ್ ಸಿಟಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿಗರನ್ನೊಮ್ಮೆ ಬೆಚ್ಚಿ ಬೀಳಿಸಿತ್ತು. ತಾಯಿ ಪದಕ್ಕೆ ಆ ಸ್ಥಾನಕ್ಕೆ ಮತ್ತೊಂದು ಸಮಾನಾರ್ಥಕ ಸ್ಥಾನ ಮತ್ತೊಂದಿಲ್ಲ, ಪ್ರತಿಯೊಬ್ಬ ಹೆಣ್ಣು ಮಾತೃ ಹೃದಯಿ'' ಎಂತಲೂಕರುಣಾಮಯಿ” ಎಂತಲೂ ಅವಳ ಬಣ್ಣನೆಗೆ ನಿಂತರೆ ಪದಗಳ ಕೊರತೆ ಎಂತಲೂ, ತಾಯಿಗೆ ಅತಿದೊಡ್ಡ ಸ್ಥಾನವನ್ನು ತಲ ತಲಾಂತರಗಳಿಂದಲೂ ನೀಡಿದ್ದಾರೆ. ಅಂತಹ ತಾಯಿ ತಾನು ಹೆತ್ತ ಮಗುವನ್ನೇ ಕೊಲ್ಲುವ ಮನಸು ಮಾಡುತ್ತಾಳೆ ಎಂದರೆ ಅದು ನಂಬಲಸಾಧ್ಯವಾದ ಮಾತು. ಆದರೆ ಇಲ್ಲೊಬ್ಬ ತಾಯಿ ತಾನೆತ್ತ ಮಗುವನ್ನೇ ಕೊಲ್ಲುವ ಕಠೋರ ನಿರ್ಧಾರ ಕೈಗೊಂಡು ಮಗುವನ್ನು ಕೊಂದಿದ್ದಾಳೆ.
ಘಟನೆಯ ವಿವರ : ಬುದ್ದಿಮಾಂದ್ಯ ಮಗು ಎಂದು ,ತನ್ನ ಸ್ವಂತ ಮಗುವನ್ನು ತಾಯಿ
ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದಿದ್ದಾಳೆ. ಸ್ಥಳದಲ್ಲೇ ಐದು ವಷÀðದ ಕಂದಮ್ಮ ಮೃತಪಟ್ಟಿದೆ ಮಗು ಬುದ್ಧಿಮಾಂದ್ಯತೆ ಇಂದ ಬಳಲುತಿತ್ತು, ಇದರಿಂದ ಬೇಸತ್ತಿದ್ದ ತಾಯಿ ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು ಆದರೆ ಮಗುವನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅದರ ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು
ಆದರೆ ತಾಯಿ ಇದರಿಂದ ಅಸಮಾಧಾನ ಕೊಳ್ಳಗಾಗಿದ್ದಳು. ಹೇಗಾದರೂ ಸರಿಯೇ ಈ ಮಗು ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದು ಕೊನೆಗೂ ಮಹಡಿ ಮೇಲಿಂದ ಮಗುವನ್ನು ಎಸೆದು ಕೊಲೆ ಮಾಡಿದ್ದಾಳೆ. ಈ ಘಟನೆ ವಿವರಿಸುವ ಹಿಂದಿನ ಉದ್ದೇಶ ತಾಯಿ ಇಂತ ಕಠಿಣ ನಿರ್ಧಾರ ಏಕೆ ತೆಗೆದು ಕೊಂಡಳೋ ಆಕೆಯ ಪರಿಸ್ಥಿತಿಯೇನೋ, ಎಂತಹ ಪರಿಸ್ಥಿತಿಯಲ್ಲೂ ತಾಯಿ ಮಗುವನ್ನು ಕೊಲ್ಲುವ ನಿರ್ಧಾರ ಮಾಡುವುದಿಲ್ಲ ಆದರೆ ಈ ತಾಯಿಯ ನಡವಳಿಕೆ ಅನೇಕ ತಾಯಂದಿರ ಕೆಂಗಣ್ಣಿಗೆ ಗುರಿಯಾಗಿದೆ .ಆದರೆ ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಕ್ಕಳಲ್ಲದಿದ್ದರೂ ಮಾತೃ ಹೃದಯದ ಸ್ಪಂದನೆಯಿತ್ತು ಈ ಮಕ್ಕಳನ್ನು ಸಲಹಲು ಸಹಾಯ ಹಸ್ತ ಚಾಚಿದ್ದಾರೆ. ಖಾಕಿ ತೊಟ್ಟವರೆಲ್ಲ ಕಲ್ಲು ಮನಸ್ಸಿನವರು ಎಂಬ ಮಾತಿಗೆ ತದ್ವಿರುದ್ಧವಾಗಿ, ಈ ಖಾಕಿಯೊಳಗಿನ ಕರುಣಾಮಯಿ ಸ್ಪಂದಿಸಿದ್ದಾರೆ.
ಮಾತೃ ಹೃದಯಿ ಪೊಲೀಸ್ : ಪ್ರಸ್ತುತ ವಿವಿಐಪಿ ಭದ್ರತಾ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವಂತ ಕನಕಲಕ್ಷ್ಮಿ ಯವರು ಈ ಮಾತೃ ಸ್ಪಂದನೆಯ ಮಾತೃ ಹೃದಯಿ ಅಧಿಕಾರಿ.
ಕಮ್ಮನಹಳ್ಳಿಯಲ್ಲಿರುವಂತ ಹಿಸ್ ಪ್ಯಾರಡೈಸ್ ಫಾರ್ ದಿ ಡೆಸರ್ಟೆಡ್ ಚಾರಿಟೇಬಲ್ ಟ್ರಸ್ಟ್ ಈ ಸಂಸ್ಥೆ ಪೋಷಕರಿಗೆ ಹೆತ್ತವರಿಗೆ ಬೇಡವಾದಂತ ಬುದ್ದಿಮಾಂದ್ಯ ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿದೆ. ತಾವು ಜನ್ಮ ಕೊಟ್ಟ ಮಕ್ಕಳನ್ನು ತಾವೇ ಬೇಡವೆಂದು ದೂರ ನೂಕಿದಾಗ ಅಂತಹ ಮಕ್ಕಳಿಗೆ ಈ ಸಂಸ್ಥೆ ತನ್ನ ಸಹಾಯ ಹಸ್ತ ಚಾಚಿದೆ. ಈ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟೆರ್ ಮೋನಿಕಾರವರು ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಸಂಸ್ಥೆಗೆ ಇನ್ಸ್ಪೆಕ್ಟರ್ ಕನಕ ಲಕ್ಷ್ಮಿಯವರು ತಮ್ಮ ಸಂಬಳದ ಹಣದಲ್ಲಿ ಕೈಲಾದಷ್ಟು ಅಳಿಲು ಸೇವೆ ಮಾಡುತ್ತ ಬಂದಿರುತ್ತಾರೆ. ಆದರೆ ಈ ಸಹಾಯವನ್ನೂ ಸಹ ತಾವೇ ಮಾಡುತ್ತಿರುವುದಾಗಿ ಎಲ್ಲಿಯೂ ಹೇಳಿಕೊಳ್ಳದ ಇವರು ಪ್ರಚಾರ ಬಯಸದ ನಿಸ್ವಾರ್ಥ ಸೇವಾ ಜೀವಿ.
ಹೀಗೊಮ್ಮೆ ಇನ್ಸ್ಪೆಕ್ಟರ್ ರವರಿಗೆ ಆಶ್ರಮದಿಂದ ಕರೆ ಮಾಡಿ ಕುಸುಮ (ಹೆಸರು ಬದಲಿಸಲಾಗಿದೆ )ಹೆಸರಿನ ಸ್ಪೆಷಲ್ ಚೈಲ್ಡ್ ಮೃತ ಪಟ್ಟಿರುವುದಾಗಿ, ಅದರ ಅಂತಿಮ ಕಾರ್ಯಕ್ಕೆ ಬರಲು ಅದರ ಪೋಷÀಕರು ಒಪ್ಪುತ್ತಿಲ್ಲವೆಂದು, ಏನು ಮಾಡಲು ತಿಳಿಯುತ್ತಿಲ್ಲ ವೆಂದು ನೀವೇ ಬಂದು ಮುಂದೆ ನಿಂತು ಮಗುವಿನ ಅಂತ್ಯ ಸಂಸ್ಕಾರ ಮಾಡಬೇಕೆಂದು ಕೇಳಿಕೊಂಡಾಗ ಹಿಂದು ಮುಂದು ಯೋಚಿಸದ ಕನಕ ಲಕ್ಷ್ಮಿ ಯವರು ಮಗುವಿನ ಅಂತ್ಯ ಸಂಸ್ಕಾರದ ಖರ್ಚು ವೆಚ್ಚವನ್ನು ಭರಿಸುವ ಜೊತೆಗೆ ತಾವೇ ಮುಂದೆ ನಿಂತು ಕಾರ್ಯ ಮಾಡಲು ಮುಂದಾಗುತ್ತಾರೆ, ಹಾಗೆಯೇ ಏನಾದರಾಗಲಿ ಒಮ್ಮೆ ಬಂದು ಮಗುವಿನ ಮುಖ ನೋಡಿಕೊಂಡು ಹೋಗುವಂತೆ ಪೋಷಕರಲ್ಲಿ ಕೇಳಿಕೊಂಡು ಅವರ ಮನಃ ಪರಿವರ್ತಿಸಿ ಕಡೆಯ ಭಾರಿ ಮಗುವಿನ ಮುಖ ನೋಡಿಕೊಂಡು ಹೋಗಲು ಅವರನ್ನು ಕರೆಸುತ್ತಾರೆ. ಆದರೆ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮಗುವಿನ ಅಂತ್ಯ ಸಂಸ್ಕಾರಕ್ಕೆ ಹೋಗಿ ಅಂತಹ ಪುಣ್ಯ ಕಾರ್ಯವನ್ನು ಮಾಡಿ ಮುಗಿಸುತ್ತಾರೆ.
ಮಗು ಬುದ್ದಿಮಾಂದ್ಯ ಎಂದು ತಿಳಿದೊಡನೆ ಕೊಲ್ಲಲು ಬಯಸುವ, ತಾವೇ ಜನ್ಮ ಕೊಟ್ಟ ಮಗು ಬುದ್ದಿ ಮಾಂದ್ಯ ನೆಂಬ ಕಾರಣಕ್ಕೆ ಅದರ ಅಂತಿಮ ದರ್ಶನಕ್ಕೂ ಬರಲೊಪ್ಪದ ತಂದೆ ತಾಯಿಗಳ ಮದ್ಯೆ ಖಾಕಿ ತೊಟ್ಟರು ಅದರೊಳಗಿರುವ ಆದರ್ಶ ದಾಯಕ, ಕರುಣಾಮಯಿ, ಮಾತೃ ಹೃದಯಿ ಅಧಿಕಾರಿಯಾದ ಕನಕಲಕ್ಷ್ಮಿ ಯವರ ಕಾರ್ಯಕ್ಕೆ ಕೋಟಿ ಕೋಟಿ ವಂದನೆಗಳು.
ನಿಮ್ಮ ಈ ಸಮಾಜಮುಖಿ ಕಾರ್ಯ ಹಲವು ಪೊಲೀಸ್ ಅಧಿಕಾರಿಗಳಿಗೆ ಪ್ರೇರಕ. ನಿಮ್ಮಂತ ಅಧಿಕಾರಿಗಳನ್ನು ಪಡೆದ ನಾವೇ ಧನ್ಯರು.

Latest Stories

LEAVE A REPLY

Please enter your comment!
Please enter your name here