ಪ್ರತಿನಿತ್ಯ ವಾಹನ ಸವಾರರು ಎದುರಿಸುವ ಸವಾಲುಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಅತ್ಯಂತ ಮಹತ್ವದ್ದು .
ಪ್ರತಿನಿತ್ಯ ರಸ್ತೆ ಗುಂಡಿಯಿಂದ ಸಾವಿಗೀಡಾದ , ಕೈಕಾಲು ಮುರುದು ಕೊಂಡ ಒಂದು ಪ್ರಕರಣವಾದರೂ ವರದಿಯಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.
ರಸ್ತೆ ಗುಂಡಿ ಮುಚ್ಚಿಸಿ ಎಂದು ಅಭಿಯಾನವನ್ನೇ ಮಾಡಿ , ಅತ್ತು ಕರೆದು ಗೋಗರೆದರು ಅದರ ಬಗ್ಗೆ ಗಮನ ಹರಿಸುವವರು ವಿರಳ .
ಆದರೆ ಕಗ್ಗಲೀಪುರ ಠಾಣೆಯ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇದಾರ್ ಹಾಗು ಸಿಬ್ಬಂದಿ ಸಾರ್ವಜನಿಕ ಹಿತಾಸಕ್ತಿಯ ಹೊಣೆ ಹೊತ್ತ ನಮಗೆ ಸಾರ್ವಜನಿಕರ ರಸ್ತೆ ಸುರಕ್ಷತೆಯ ಜವಾಬ್ದಾರಿಯು ನಮ್ಮ ಮೇಲಿದೆ ಎಂದು.
ಪ್ರತಿನಿತ್ಯ ವಾಹನ ಸವಾರರು ಎದುರಿಸುವ ಸಮಸ್ಯೆಯನ್ನು ಅರಿತು ಯಾವುದೇ ಆದೇಶ ಮನವಿ ಬರುವುದಕ್ಕೆ ಕಾಯದೆ ನಮ್ಮ ಕಾಯಕದ ನಡುವೆ ಗುಂಡಿ ಮುಚ್ಚುವುದು ನಮ್ಮ ಕಾರ್ಯವೇ ಎಂದು , ಲಾಠಿ ಹಿಡಿಯುವ ಕೈ ಗುದ್ದಲಿ ಕೂಡ ಹಿಡಿಯಬಲ್ಲದು ಎಂದು ರಾಮಪ್ಪನವರ ಮುಂದಾಳತ್ವದಲ್ಲಿ ಸಿಬ್ಬಂದಿಗಳಾದ ಗಿರೀಶ್,
ಯಂಕೋಬ , ಸುನಿಲ್,ಸುಖದೇವ್ , ಮಡಿಯಪ್ಪ ನವರು ಗುದ್ದಲಿ ಹಿಡಿದು ರಸ್ತೆಗಿಳಿದು ಗುಂಡಿ ಮುಚ್ಚಲು ಮುಂದಾಗಿದ್ದಾರೆ.
ಕಗ್ಗಲೀಪುರ ಠಾಣಾ ವ್ಯಾಪ್ತಿಯ ಸೋಮನಹಳ್ಳಿ ಎಡಿಫೈ ಶಾಲಾ ಬಳಿಯಲ್ಲಿ ದೊಡ್ಡದೊಂದು ರಸ್ತೆ ಗುಂಡಿ ಏರ್ಪಟ್ಟು ಪ್ರತಿನಿತ್ಯ ಐದು ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
ಪ್ರತಿನಿತ್ಯ ವಾಹನ ಸವಾರರ ಕಷ್ಟ ಕಣ್ಣಾರೆ ಕಂಡ ಪೊಲೀಸರು ಗುಂಡಿ ಮುಚ್ಚಲು ಸ್ವಪ್ರೇರಿತರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹಾಗಂತ ಇದು ಮೊದಲೇನಲ್ಲ ಕಳೆದ ತಿಂಗಳೂ ಕೂಡ ಆ ಭಾಗದ ಬೇರೆ ಕಡೆ ಉಂಟಾಗಿದ್ದ ರಸ್ತೆ ಗುಂಡಿಗಳನ್ನು ಮುಚ್ಚಲು ಗುದ್ದಲಿ ಹಿಡಿದು ನಿಂತಿದ್ದು ಇದೆ ಕಗ್ಗಲೀಪುರ ಪೊಲೀಸ್ ಸಿಬ್ಬಂದಿಯೇ .
ಕೇಳಿ ಕೇಳಿ ಮನವಿ ,ನಿವೇದನ ಎಲ್ಲಾ ಮಾಡಿ ಬೃಹತ್ ಪ್ರತಿಭಟನೆ, ದೂರು ಇವೆಲ್ಲದರ ತರುವಾಯ ಕೆಲಸ ಕಾರ್ಯ ಮಾಡಿಸಿಕೊಂಡ ಸಾರ್ವಜನಿಕರು ಯಾವುದೇ ನಿವೇದನೆಗಳಿಲ್ಲದೆ ಕಾರ್ಯ ರೂಪಕ್ಕೆ ಬರುತ್ತಿರುವ , ಪೊಲೀಸರ ನೈತಿಕ ಬೆಂಬಲ , ಈ ಪೊಲೀಸರ ಜನಪರ ಕಾಳಜಿಗೆ. ಮಾರು ಹೋಗಿದ್ದಾರೆ .
ಸಾರ್ವಜನಿಕರು ಮಾದರಿ ಪೊಲೀಸರ ಈ ಕಾರ್ಯ ಕಂಡು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ.
*ಮನಸಿದ್ದರೆ ಮಾರ್ಗ *