ಇಂದು ರಾಜ್ಯದಾದ್ಯಂತ ದಿ. ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಡಾಕ್ಯುಮೆಂಟರಿ ಸಿನೆಮಾ ಬಿಡುಗಡೆಗೊಂಡಿದೆ. ಅಪ್ಪು ಅವರ ಲಕ್ಷಾಂತರ ಅಭಿಮಾನಿಗಳು ಟಾಕೀಸ್ ತೆರಳಿ ಡಾಕ್ಯುಮೆಂಟರಿ ವೀಕ್ಷಿಸಿದ್ದಾರೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಪ್ಪು ಅಭಿಮಾನಿಗಳು ಒಂದು ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿರಸಿಯ ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿ ಅವರ ಗರ್ಭಿಣಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಸತ್ತು ಸೋಂಕಾಗಿತ್ತು. ಮೃತ ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವಿಗೀಡಾಗಿದ್ರು. ಮಹಿಳೆಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಖಾಸಗಿ ಆಸ್ಪತ್ರೆಯವರು 24,000ರೂ. ಚಾರ್ಜ್ ಮಾಡಿದ್ದರು. ಆದರೆ, ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ಪರಶುರಾಮ ಛಲವಾದಿ, ತನ್ನ ನೋವನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜತೆ ತೋಡಿಕೊಂಡಿದ್ದರು. ವಿಷಯ ತಿಳಿದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ ತಮ್ಮಲ್ಲೇ 100ರೂ.- 200ರೂ.ನಂತೆ ಕಲೆಕ್ಷನ್ ಮಾಡಿ ಚಿತ್ರಮಂದಿರ ದಿನಗೂಲಿ ನೌಕರನ ಪತ್ನಿಯ ಮೃತದೇಹ ತರಲು ಖಾಸಗಿ ಆಸ್ಪತ್ರೆಗೆ ಹಣ ಪಾವತಿಸಿದ್ದಾರೆ. ಅಪ್ಪು ಅಭಿಮಾನಿ ಬಳಗದ ವಿನಂತಿ ಮೇರೆಗೆ ವೆಚ್ಚ ಖಡಿತಗೊಳಿಸಿದ ಖಾಸಗಿ ಆಸ್ಪತ್ರೆ, ಬಳಿಕ ಮೃತದೇಹ ಬಿಟ್ಟುಕೊಟ್ಟಿದೆ. ನಂತರ ಅಪ್ಪು ಅಭಿಮಾನಿಗಳು ಪರಶುರಾಮ ಅವರ ಮನೆಯವರೆಗೆ ವನಜಾ ಅವದ ಮೃತದೇಹ ತಂದುಕೊಟ್ಟಿದ್ದಾರೆ. ಈ ಮೂಲಕ ಅಪ್ಪು ಅವರು ನಡೆದ ದಾರಿಯಲ್ಲೇ ಶಿರಸಿಯ ಅಪ್ಪು ಅಭಿಮಾನಿಗಳು ಸಾಗುವ ಮೂಲಕ ಮಾದರಿಯಾಗಿದ್ದಾರೆ.
ಮಾನವೀಯ ಮೌಲ್ಯಗಳುಳ್ಳ ಅಪ್ಪು ಅಭಿಮಾನಿಗಳು.
Date: