ಗಣೇಶ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದ್ದರೆ, ನಮ್ಮ ಪೊಲೀಸ್ ಇಲಾಖೆಯಲ್ಲಿ ಸಡಗರಕಿಂತ ಹೆಚ್ಚಾಗಿ ಸಾರ್ವಜನಿಕರ ಹಿತ ರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆಯ ಜವಾಬ್ದಾರಿಯ ಹೊಣೆ ಈ ನಮ್ಮ ಆರಕ್ಷಕರದ್ದು.
ಪ್ರತಿಯೊಂದು ಮನೆ ಮನೆಗಳಲ್ಲಿ ಮಾತ್ರವಲ್ಲ , ಬೀದಿ ಬೀದಿಗಳಲ್ಲಿ ಗಣೇಶ ಕೂಡಿಸುವ ಪ್ರತೀತಿ ನಮ್ಮಲ್ಲಿ ಹೆಚ್ಚು.
ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದೇನೋ ಸರಿ ಆದರೆ ಇದೇ ಸಮಯವನ್ನು ತಮ್ಮ ದುಶ್ಕ್ರುತ್ಯ ಗಳಿಗೆ ಬಳಸಿಕೊಳ್ಳುವ ಅಪರಾಧಿಕ ಮನಸುಗಳದ್ದೇ ದೊಡ್ಡ ಸಮಸ್ಯೆ.
ಈ ಅಪರಾಧಿಕ ಮನಸ್ಸುಗಳ ವಿರುದ್ಧ ಕೆಲಸ ಮಾಡುವ ಆರಕ್ಷಕರು ಗಣೇಶ ಹಬ್ಬವನ್ನು ಆಚರಿಸುವುದೇ ಸಾರ್ವಜನಿಕರ ರಕ್ಷಣಾ ಕಾರ್ಯದಲ್ಲಿ. ನಮ್ಮ ನಿಮ್ಮಂತೆ ಕುಟುಂಬ ದೊಟ್ಟಿಗೆ ಹಬ್ಬ ಆಚರಿಸುವ ಅದೃಷ್ಟ ವಂತರಲ್ಲ ಆರಕ್ಷಕರು. ಅವರು ಹಬ್ಬ ಆಚರಿಸುವುದೇ ನಮ್ಮ ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿಯೊತ್ತು.
ಆದರೆ ಈ ಆರಕ್ಷಕ ಬಂದೋಬಸ್ತ್ ಜವಾಬ್ದಾರಿಯನ್ನೇ ವಿಭಿನ್ನವಾಗಿ ನೆರವೇರಿಸಿ, ಭಾವೈಕ್ಯತೆಯ ಸಾರವನ್ನೇ ಸಾರುವ ಮುಕೇನ ಬಂದೋಬಸ್ತ್ ಕಾರ್ಯವನ್ನೇ ಅತ್ಯಂತ ಸರಳವಾಗಿಸಿದ್ದಾರೆ .
ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಬಂಡೆಪಾಳ್ಯದಲ್ಲಿ ಅತ್ಯಂತ ವಿಜೃಂಭಣೆ ಹಾಗೆ ಅಷ್ಟೇ ಶಾಂತಿಯುತವಾಗಿ ಗಣೇಶ ಹಬ್ಬದ ಆಚರಣೆ ನೆರವೇರಿದೆ ಅದಕ್ಕೆ ಮೂಲ ಕಾರಣ ಸದ್ಯ ಬಂಡೆಪಾಳ್ಯ ಇನ್ಸ್ಪೆಕ್ಟರ್ ಎಲ್. ವೈ. ರಾಜೇಶ್ ರವರು.
ತಮ್ಮ ಸಮಾಜಮುಖಿ ಕಾರ್ಯಗಳು ,ವಿಭಿನ್ನ ಚಿಂತನೆ ಗಳಿಂದಲೇ ಪ್ರಖ್ಯಾತಿ ಯನ್ನು ಪಡೆದಿರುವ ಇನ್ಸ್ಪೆಕ್ಟರ್ ಕಾನೂನು ಸುವ್ಯವಸ್ಥೆಯ ಪರಿಪಾಲನೆಯಲ್ಲೂ ಎತ್ತಿದ ಕೈ.
ಗಣೇಶ ಹಬ್ಬದ ಬಂದೋಬಸ್ತ್ ಕಾರ್ಯವನ್ನು ವಿಭಿನ್ನವಾಗಿಯೇ ಪಾಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ .
ಸೂಕ್ಷ್ಮ ಪ್ರದೇಶವಾದ ಬಂಡೆಪಾಳ್ಯದಲ್ಲಿ ಗಣೇಶ ಹಬ್ಬ ಆಚರಣೆಗೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಧರ್ಮದ ಮುಖಂಡರನ್ನು ಒಮ್ಮತಕ್ಕೆ ತೆಗೆದುಕೊಂಡು ಎಲ್ಲರೂ ಸೇರಿ ಹಬ್ಬ ಆಚರಿಸೋಣವೆಂದು ಎಲ್ಲರನ್ನು ಒಂದಾಗಿಸಿ ಭಾವೈಕ್ಯತೆಯ ಗಣೇಶ ಹಬ್ಬವನ್ನು ಆಚರಿಸಿದ ಕೀರ್ತಿ ಈ ನಮ್ಮ ಇನ್ಸ್ಪೆಕ್ಟರ್ ರಾಜೇಶ್ ರವರಿಗೆ ಸೇರಿದ್ದು.
ಈ ಭಾವೈಕ್ಯತೆಯ ಗಣೇಶೋತ್ಸವದಲ್ಲಿ ಮುಸ್ಲಿಂ ಮುಖಂಡರಾದ ಚಾಂದ್ ಬಿ, ಕ್ರೈಸ್ತ ಫಾದರ್ ಸೆಲ್ವಂ, ಇಲ್ಲಿನ ಜನಪ್ರಿಯ ಶಾಸಕರಾದ ಸತೀಶ್ ರೆಡ್ಡಿ ಪಾಲ್ಗೊಂಡು ಸರ್ವಧರ್ಮ ಸಹಿಷ್ಣುಗಳು ಭಾರತೀಯರು ಎಂದು ಸಾರಿದ್ದಾರೆ.
ಹಬ್ಬ ಹರಿದಿನಗಳ ಆಚರಣೆಯ ಉದ್ದೇಶವೇ ಎಲ್ಲರೂ ಒಟ್ಟಾಗಿ ಸಂತೋಷದಿಂದ ಹಬ್ಬವನ್ನು ಸಂಭ್ರಮಿಸುವ ಉದ್ದೇಶದಿಂದ ಆದರೆ ಜಾತಿ ಜಾತಿಗಳ ಧರ್ಮ ಧರ್ಮಗಳ ದಳ್ಳುರಿಗೆ ಹಬ್ಬಗಳ ಆಚರಣೆಯ ಸಂಭ್ರಮಕ್ಕೆ ಕಾರ್ಮೋಡ ಕವಿಯಾದಂತೆ ಸರ್ವಧರ್ಮ ಸಮನ್ವಯಿ ಗಣಪನ ಆರಾಧನೆಗೆ ಪ್ರೇರಕ ಹಾಗೂ ಪೂರಕ ಶಕ್ತಿ ಭಾವೈಕ್ಯತೆಯ ರೂವಾರಿ ಇನ್ಸ್ಪೆಕ್ಟರ್ ರಾಜೇಶ್.