23.8 C
Bengaluru
Friday, September 29, 2023

ಸಮಾಜಮುಖಿ ಸಾಧಕ -ಉದ್ಯಮಿ ಗೋವಿಂದ ಬಾಬು ಪೂಜಾರಿ

Date:

ಸಾಧನೆಗೆ ವಿದ್ಯೆ ಯಾವಾಗಲೂ ಅಡ್ಡಿಯಾಗದೆಂಬ ಮಾತಿದೆ ಅದರಂತೆ ಇಲ್ಲೊಬ್ಬ ಸಾಧಕ ತನ್ನ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಸಂಚಿಕೆಯ ಹೆಮ್ಮೆಯ ಛಲಗಾರ ಸಾಧಕ ಡಾ || ಗೋವಿಂದ ಬಾಬು ಪೂಜಾರಿ.
ಸಾಧನೆಗೆ ಪ್ರಮುಖವಾದದ್ದು ವಿದ್ಯೆ ಅದಕ್ಕಾಗಿ ಲಕ್ಷ ಲಕ್ಷ ಹಣ ಕಟ್ಟಿ ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕು, ಇಲ್ಲವೇ ಸರಕಾರಿ ಕೆಲಸವೇ ಬೇಕು, ಇಲ್ಲವೇ ಬಿಸಿನೆಸ್ ಆರಂಭಿಸಲು ಲಕ್ಷ ಲಕ್ಷ ಹಣ ಬೇಕು ಎಂಬುದು ಇಂದಿನ ಯುವ ಪೀಳಿಗೆಯ ದ್ಯೆಯೋಕ್ತಿ. ಆದರೆ ಈ ಸಾಧಕ ನನ್ನ ಸಾಧನೆಯ ಹಾದಿಗೆ ಇದಾವುದೂ ತೊಡಕಾಗಲಾರದು. ನನ್ನ ಗುರಿ ತಲುಪುತ್ತೇನೆಂಬ ಛಲವೊಂದೇ ಮಾರ್ಗ ಎಂಬ ದಿಟ್ಟ ಹೆಜ್ಜೆಯೊಂದಿಗೆ ಸಾಧನೆಯ ತುತ್ತ ತುದಿ ತಲುಪಿದವರು.
ನಿಜಕ್ಕೂ ಇವರ ಸಾಧನೆಯ ಕಥನ ಯುವ ಪೀಳಿಗೆಗೆ ಪ್ರೇರಕ. ಇವರೂ ಸಹ ಎಲ್ಲರಂತೆ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡೆ ಹುಟ್ಟಿರುವವವರು, ತಂದೆ ತಾತನ ಆಸ್ತಿಯನ್ನು ಇನ್ನಷ್ಟು ಬೆಳೆಸಿ ಸಾಧನೆಗೈದವರು ಎಂತಲೇ ಭಾವಿಸಿದ್ದೆವು.
ಭೇಟಿಯಾದಾಗ ತಿಳಿಯಿತು ಓದುವ ಹಂಬಲವಿದ್ದರೂ ಓದಲಾಗದೆ, ಪರಿಸ್ಥಿಯ ಒತ್ತಡಕ್ಕೆ ಸಿಲುಕಿ, ಕುಟುಂಬದ ಭಾರ ಹೊರಲೇ ಬೇಕಾದ ಸಂದರ್ಭದಲ್ಲಿ ಓದನ್ನು ಅರ್ಧಕ್ಕೆ ನಿಲ್ಲಿಸಿ, ಬಸ್ ಚಾರ್ಜ್ಗೆ ಹಣವಿಲ್ಲದೆ ಬರಿ ಗೈ ನಲ್ಲಿ, ಒಂದು ಎಣ್ಣೆ ಡಬ್ಬಿಯ ಮೇಲೆ ಕುಳಿತು ಬಾಂಬೆ ಸೇರಿದ ಹುಡುಗ ಇವತ್ತಿನ ಐದೂವರೆ ಸಾವಿರ ಜನಕ್ಕೆ ಕೆಲಸ ನೀಡಿರುವ ಚೆಫ್ ಟಾಕ್ ಕಂಪನಿಯ ಮಾಲೀಕ.
ಸಾಧಕನ ಪರಿಚಯ:ಬಹಳ ಸಣ್ಣ ವಯಸ್ಸಿಗೆ ಕುಟುಂಬದ ನೊಗ ಹೊತ್ತ ಗೋವಿಂದಬಾಬು ಪೂಜಾರಿಯವರು 1977 ರಲ್ಲಿ ಬಿಜೂರಿನ ಒಂದು ಕೃಷಿ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಗೋವಿಂದ ಬಾಬು ಪೂಜಾರಿಯವರು ಅತಿ ಸಣ್ಣ ವಯಸ್ಸು ಅಂದರೆ ಸುಮಾರು ಹದಿಮೂರು ವರ್ಷಕ್ಕೆ ತಮ್ಮ ವೃತ್ತಿ ಆರಂಭಿಸಿದವರು .
ಬರಿಗೈನಲ್ಲಿ ಬಾಂಬೆಗೆ ಹೋಗಿ ಒಂದು ಸಣ್ಣ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡ ಇವರು ತದ ನಂತರದಲ್ಲಿ ದೊಡ್ಡದೊಂದು ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಚೆಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಏನಾದರಾಗಲಿ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ಮಹದಾಸೆ ಹೊಂದಿದ್ದ ಇವರು ದುಡಿದ ಎಲ್ಲಾ ಹಣವನ್ನು ಒಟ್ಟುಗೂಡಿಸಿ ಒಂದು ಪ್ರಾವಿಷನ್ ವ್ಯಾಪಾರ ಶುರು ಮಾಡುತ್ತಾರೆ ಆದರೆ ಅದು ಕೈಗೂಡುವುದಿಲ್ಲ,ಎಲ್ಲಾ ಹಣವನ್ನು ಕಳೆದು ಕೊಳ್ಳುತ್ತಾರೆ.
ಆದರೆ ಇದರಿಂದ ಅವರೆಂದಿಗೂ ದೃತಿ ಗೆಡುವುದಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಫೀನಿಕ್ಸ್ ಪಕ್ಷಿಯಂತೆ ಚೆಫ್ ಟಾಕ್ ಎಂಬ ಹೋಟೆಲ್ ಉದ್ಯಮ ದೊಂದಿಗೆ ಹೊರ ಬರುತ್ತಾರೆ . 2008ರಲ್ಲಿ ಪ್ರಾರಂಭಿಸಿದ ಚೆಫ್ ಟಾಕ್ ಎಂಬ ಹೆಸರಿನೊಂದಿಗೆ ಹೊರ ಬಂದ ಈ ಉದ್ಯಮವು ಇವರನ್ನು ಯಶಸ್ಸಿನ ತುತ್ತ ತುದಿಗೆ ಕರೆದೊಯ್ಯುತ್ತದೆ.
ಇರುವವರಿಗೆಲ್ಲ ಕೊಡುವ ಮನಸಿದ್ದರೆ ಪ್ರಪಂಚದಲ್ಲಿ ಬೇಡುವವರೇ ಇರುತ್ತಿರಲಿಲ್ಲ ಎಂಬಂತೆ ಇಷ್ಟೆಲ್ಲಾ ಕಷ್ಟ ನಷ್ಟಗಳ ನಡುವೆ ಸಾಧನೆಯ ಹಾದಿ ಹಿಡಿದ ಈ ಸಾಧಕ ನನ್ನ ಸ್ವಂತಿಕೆಯಿಂದ ನಾನು ಸಂಪಾದಿಸಿದ ಹಣವನ್ನು ಇನ್ನಷ್ಟು ಮತ್ತಷ್ಟು ಕೂಡಿಡಬೇಕೆಂಬ ಜಿಜ್ಞಾಸೆಗೆ ಬೀಳದೆ, ನಾನು ಓದಲಾರದೆ ಕಷ್ಟ ಹಾಗೆ ಮತ್ಯಾರು ಕಷ್ಟ ಪಡಬಾರದೆಂಬ ಉದಾತ್ತ ಮನೋಭಾವ ಹೊಂದಿರುವವವರು.
ಸತತ ಪರಿಶ್ರಮ, ಬದ್ಧತೆ ಪ್ರಾಮಾಣಿಕತೆ ಇವೆಲ್ಲವನ್ನೂ ಮೈಗೂಡಿಸಿ ಕೊಂಡಿರುವುದರಿಂದಲೇ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ.
ಅಸಹಾಯಕರು ಮತ್ತು ಬಡವರಿಗೆ ನನ್ನ ಕೈಲಾದ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಕಟ್ಟಿ ಅದರ ಮುಖೆನ ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ, ಕಾಯಿಲೆಯಿಂದ ಬಳಲುತ್ತಿರುವ ಅನೇಕ ಬಡ ರೋಗಿಗಳ ಚಿಕಿತ್ಸೆಗಾಗಿ ಸದಾ ಸಿದ್ದ ಹಸ್ತರಾಗಿದ್ದರೆ,ಸೂರಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಅನೇಕರಿಗೆ ಇವರು ಬರೋಬ್ಬರಿ ಹತ್ತು ಲಕ್ಷ ಮೌಲ್ಯದ ಸುಸರ್ಜಿತ ಮನೆಗಳನ್ನು ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ ಇಪ್ಪತ್ತೈದಕ್ಕೂ ಅಧಿಕ ಮನೆಗಳು ನಿರ್ಮಾಣ ಹಂತದಲ್ಲಿವೆ.


ಇವರ ಸಮಾಜಮುಖಿ ಕಾರ್ಯಗಳಿಂದ ಇನ್ನಷ್ಟು ಮಂದಿ ಪ್ರೇರೇಪಿತರಾಗಿ ಸಮಾಜಮುಖಿಗಳಾಗಬೇಕು ಅಥವಾ ಇಂತಹ ಮನೋಭಾವ ಹೊಂದಿರುವ ಈ ಕೊಡುಗೈ ದಾನಿಯ ಕೈ ಯನ್ನು ಭಗವಂತ ಇನ್ನಷ್ಟು ಬಲಪಡಿಸಬೇಕು
ನಮ್ಮ ಪ್ರಹರಿಯ ಮೂಲ ಉದ್ದೇಶವೇ ಎಲೆ ಮರೆ ಕಾಯಿಯಂತೆ ಸಹಾಯ ಹಸ್ತ ಚಾಚಿರುವವರ ಸಮಾಜಮುಖಿ ಕಾರ್ಯಗಳ ಮೇಲೆ ಬೆಳಕು ಚೆಲ್ಲಬೇಕೆನ್ನುವುದು ಆದರೆ ಈ ಸಾಮಾಜಿಕ ಕಾರ್ಯಗಳನ್ನೇ ದಿನದ ಕಾಯಕದೊಂದಿಗೆ ಕೈಗೂಡಿಸಿಕೊಂಡಿರುವ ಈ ಸಾಧಕನ ಸಾಮಾಜಿಕ ಮೌಲ್ಯಗಳ ಕಾಯಕಗಳ ಪಟ್ಟಿಯೇ ದೊಡ್ಡದಿದೆ.
ಡಾ|| ಗೋವಿಂದ ಬಾಬು ಪೂಜಾರಿ ಯವರ ಎಲ್ಲಾ ಕಾರ್ಯಗಳು ಹೀಗೆ ಅವಿರತವಾಗಿ ಸಾಗಲಿ ಎಂದು ಹಾರೈಸೋಣ
all the very best sir

Latest Stories

LEAVE A REPLY

Please enter your comment!
Please enter your name here