ರೈಲುಗಳಲ್ಲಿ ಕಿಟಕಿ ಪಕ್ಕ ಇರುವ ಪ್ರಯಾಣಿಕರ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆ ರೈಲ್ವೆ ಪೊಲೀಸರು ಮನೋಜ್, ದರ್ಶನ್ ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮೆಮೂ ರೈಲು ಗಳಲ್ಲಿ ಹೊಂಚು ಹಾಕಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಿಟಕಿ ಪಕ್ಕ ಇರುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿಕೊಂಡು
ಕಿಟಕಿ ಒಳಗೆ ಕೈ ಹಾಕಿ ಪ್ರಯಾಣಿಕರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಆರೋಪಿಗಳು ಎಗರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಚೆನ್ನೈ- ಬೆಂಗಳೂರು ಮೇಲ್ ಎಕ್ಸ್‌ಪ್ರೆಸ್ ,
ತಿರುಪತಿ- ಚಾಮರಾಜನಗರ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರ ಸರ ಕಳ್ಳತನ ಮಾಡಿರುವುದಾಗಿ ಪ್ರಕರಣ ದಾಖಲಾಗಿತ್ತು.
ಡ್ರಗ್ಸ್ ಖರೀದಿಗಾಗಿ ಸರಗಳ್ಳತನವನ್ನೇ ಮೂಲ ಕಸುಬಾಗಿ ಆರೋಪಿಗಳು ಮಾಡುತ್ತಿದ್ದರು ಎನ್ನಲಾಗಿದೆ.
ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ,ರೈಲ್ಲಿನಲ್ಲಿ ಕಿಟಕಿ ಪಕ್ಕ ಕುಳಿತು ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
*ಬಂಗಾರ್ ಪೇಟೆ ರೈಲ್ವೆ ಪೊಲೀಸರ ಕಾರ್ಯಾಚರಣೆ *
Date: