23.8 C
Bengaluru
Thursday, February 22, 2024

*ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ*

Date:

ಕುಖ್ಯಾತ ದ್ವಿಚಕ್ಕ ವಾಹನ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು ಹದಿನೆಂಟು ಲಕ್ಷ ಮೌಲ್ಯದ ಹತ್ತು ದ್ವಿ-ಚಕ್ರ ವಾಹನಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗದೇ ಇರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದು , ಆರೋಪಿಗಳಾದ ಕೃತಿಕ್ ಹಾಗೂ ವಿಜಯ್ ದಸ್ತಗಿರಿ ಮಾಡಿ, ಆರೋಪಿಗಳ ಸ್ವ-ಇಚ್ಚಾ ಹೇಳಿಕೆ ಮೇರೆಗೆ ಬ್ಯಾಟರಾಯನಪುರ, ಚಂದ್ರಾಲೇಔಟ್, ವಿದೇಶ ನಗರ, ಕಾಟನ್‌ ಪೇಟೆ, ಕೆಂಗೇರಿ, ಯಲಹಂಕ, ಕಾಮಾಕ್ಷಿಪಾಳ್ಯ ಚಾಮರಾಜಪೇಟೆ, ಮಾಗಡಿ ರೋಡ್, ಕೆ.ಜಿ ನಗರ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಕಡೆಗಳಲ್ಲಿ ಸುಮಾರು 30 ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದು ತಿಳಿದು ಬಂದಿರುತ್ತವೆ.
ಆರೋಪಿಗಳ ಸ್ವ-ಇಚ್ಚಾ ಹೇಳಿಕೆ ಮೇರೆಗೆ ಬಾಕಿ ಉಳಿದಿದ್ದ ಹದಿನೇಳು ಠಾಣಾ ವ್ಯಾಪ್ತಿಯ ಪ್ರಕರಣಗಳು ಪತ್ತೆಯಾಗಿರುತ್ತವೆ.
ಉಳಿದ 13 ದ್ವಿ-ಚಕ್ರ ವಾಹನಗಳ ಪ್ರಕರಣಗಳಲ್ಲಿ ತನಿಖೆ ಪ್ರಗತಿಯಲ್ಲಿರುತ್ತದೆ. ಈ ಹಿಂದೆ ಎ2 ಆರೋಪಿ ವಿಜಯ್ ಆ ಕರಿಯಾ ಎಂಬಾತನ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಡಿ.ಸಿ.ಪಿ ಯವರಾದ ಮಾನ್ಯ ಶ್ರೀ ಲಕ್ಷ್ಮಣ ನಿಂಬರ್ಗಿ, ಐ.ಪಿ.ಎಸ್ ಸಾಹೇಬ ರವರ ಮಾರ್ಗದರ್ಶನದಲ್ಲಿ ಕೆಂಗೇರಿಗೇಟ್ ಉಪವಿಭಾಗದ ಎ.ಸಿ.ಪಿ. ಯವರಾದ ಶ್ರೀ. ಟಿ. ಕೋದಂಡರಾಮ್ ಸಾಹೇಬ ರವರ ನೇತೃತ್ವದಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ಜಿ.ಕೆ., ಪ್ರೊ ಪಿ.ಎಸ್.ಐ ರಾಹುಲ್ ರೆಡ್ಡಿ, ಪ್ರೊ ಪಿ.ಎಸ್.ಐ ಶ್ರೀಶೈಲ ಜುಲುಪಿ ಎ.ಎಸ್.ಐ ರಘು ಹಾಗೂ ಸಿಬ್ಬಂಧಿಯವರಾದ ಹೆಚ್.ಸಿ 2126 ಭಾನುಪ್ರಕಾಶ್, ಪಿ.ಸಿ 13883 ಮಹೇಶಪ್ಪ, ಪಿ.ಸಿ. 13889 ಬಸನಗೌಡ, ಪಿ.ಸಿ 15397 ಅವಿನಾಶ್ ಮಂಜರಗಿ, ಪಿ.ಸಿ 15769 ಮೊಗಲ್ಯ ನಾಯಕ್, ಪಿ.ಸಿ 15949 ಮಂಜುನಾಥ್ ಎಂ.ಆರ್, ಪಿ.ಸಿ 17960 ಅಣ್ಣಪ್ಪ ಕಿತ್ತೂರ್, ಪಿ.ಸಿ 19040 ಶಶಿಕುಮಾರ್, ಪಿ.ಸಿ 19462 ದೇವರಾಜು, ಪಿ.ಸಿ 20497 ರಾಜು ರಾಠೋಡ್ ಮತ್ತು ಪಿ.ಸಿ 15400 ಮಹಾದೇವ ರವರುಗಳು ಮೇಲ್ಕಂಡ ಆರೋಪಿಗಳಿಂದ 30 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Latest Stories

LEAVE A REPLY

Please enter your comment!
Please enter your name here