ಹಸಿರು ಕಣ್ಮನ ಸೆಳೆಯುವುದರಲ್ಲಿ ಬೇರೆ ಮಾತಿಲ್ಲ . ಪೊಲೀಸ್ ಇಲಾಖೆ ಸದಾ ಅತ್ಯಂತ ಚಟುವಟಿಕೆ ಇಂದಿರುವ ಸದಾ ಹುರುಪಿನಿಂದ ಕೆಲಸ ಮಾಡುವ ಇಲಾಖೆ.
ದಿನದ ಇಪ್ಪತ್ನಾಲ್ಕು ಗಂಟೆ ಕಾರ್ಯ ನಿರ್ವಹಿಸುವ ಏಕೈಕ ಇಲಾಖೆ ಪೊಲೀಸ್ ಇಲಾಖೆ. ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯು ಹುರುಪಿನಿಂದ ಕೆಲಸ ಮಾಡಲು ಅವರು ತಮ್ಮನ್ನು ತಾವು ಸ್ವಪ್ರೇರಿತಗೊಂಡು ಕಾರ್ಯ ನಿರ್ವಹಿಸುವ ಅವಶ್ಯಕತೆ ಇದೆ. ಪೊಲೀಸರ ಕಾರ್ಯ ವೈಖರಿಯೇ ಕೆಲವೊಮ್ಮೆ ಅವರನ್ನು ಅತಿ ಹೆಚ್ಚು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ.
ಆದರೆ ಹಸಿರು ವಾತಾವರಣ ಕೆಲವೊಮ್ಮೆ ಮನಸ್ಸನ್ನು ಉಲ್ಲಸಿತ ಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಮನೆಗೊಂದು ಗಿಡ ನೀಡಿ ಹಸಿರನ್ನು ಉಳಿಸಿ ಎಂಬ ದ್ಯೇಯ ವಾಕ್ಯಗಳಂತೆ,ಪ್ರತಿ ಠಾಣೆಯಲ್ಲೂ ಗಿಡ ನೆಡುವ ಕಾರ್ಯಕ್ರಮಗಳು ಜಾರಿಯಲ್ಲಿವೆ. ಹಸಿರೇ ಉಸಿರು ಎಂಬ ದ್ಯೇಯ ವಾಕ್ಯಕ್ಕೆ ರಾಯಭಾರಿ ಎಂಬಂತೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ಕಾರ್ಯ ನಿರ್ವಹಿಸಿದ್ದಾರೆ.
ಪರಿಸರ ಸ್ನೇಹಿ ಪೊಲೀಸ್: ಪ್ರಸ್ತುತ ಮಹಾಲಕ್ಹ್ಮೀ ಲೇಔಟ್ ಠಾಣೆಯ ಇನ್ಸ್ಪೆಕ್ಟರ್ ರಾಜು.ಡಿ. ಎಲ್ ರವರು.
2007 ರ ಬ್ಯಾಚ್ನ ಅದಿಕಾರಿಯಾದಂತ ರಾಜುರವರು ಚಿತ್ರದುರ್ಗದ ಹಿರಿಯಬ್ಬೆ ಗ್ರಾಮದವರು.
ತಂದೆ ಧನಂಜಯ ಹಾಗೂ ತಾಯಿ ಲಕ್ಷ್ಮೀದೇವಿ ಯವರು ವ್ಯವಸಾಯದ ವೃತ್ತಿಯನ್ನು ಹೊಂದಿದ್ದರಿಂದ ಚಿಕ್ಕಂದಿನಿಂದಲೂ ಹಸಿರಿನ ನಡುವೆ ಬೆಳೆದ ಅಧಿಕಾರಿ.
ತಾವು ಕಾರ್ಯನಿರ್ವಹಿಸಿದ ಅಮೃತೂರ್ ಠಾಣೆಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಿಸಿದ ಖ್ಯಾತಿ ಇನ್ಸ್ಪೆಕ್ಟರ್ ರಾಜು ರವರಿಗೆ ಸಲ್ಲುತ್ತದೆ.
ಪೊಲೀಸರು ಸದಾ ಒತ್ತಡದ ಜೀವನ ಶೈಲಿ ಹಾಗೂ ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ ಅದನ್ನು