ಡ್ರಗ್ಸ್ ಹಾಗು ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುವುದೇ ಕಸುಬನ್ನಾಗಿಸಿಕೊಂಡಿದ್ದ ಕಳ್ಳರು ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳನ್ನೇ ಇವರ ಮುಖ್ಯ ಟಾರ್ಗೆಟ್ಅನ್ನಾಗಿ ಮಾಡಿಕೊಂಡಿದ್ದರು.
ಒಂದು ಬಾರಿ ನಶೆ ಏರಿಸಿಕೊಂಡು ರಸ್ತೆಗಿಳಿದರೆ ಮುಗೀತು ಈ ನಟೋರಿಯಸ್ ಕ್ರಿಮಿನಲ್ ಗಳಾದ ಅಣ್ಣ ತಮ್ಮಂದಿರು ಕಳ್ಳತನ ಮಾಡಿಯೇ ಮುಗಿಸುತ್ತಿದ್ದರು.
ಗುಣಶೇಖರ@ಗುಣ@ಕೊರಂಗು ಹಾಗು ಅಜಿತ್ ಇಬ್ಬರು ಅಣ್ಣ ತಮ್ಮಂದಿರು. ಇವರ ಜೊತೆ ಸೇರಿಕೊಂಡಿದ್ದವನೇ ಮುತ್ತು. ಈ ಮೂವರು ಸೇರಿಕೊಂಡು ಸ್ಕೆಚ್ ಹಾಕಿದ್ರೆ ಆ ಮನೆಯಲ್ಲಿ ಕಳ್ಳತನ ಫಿಕ್ಸ್ . ಹೀಗೆ ಹದಿಮೂರಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಆರೋಪಿಗಳಿಂದ 49 ಲಕ್ಷ ಮೌಲ್ಯದ 1.1 ಕೇಜಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಇವರು ಮೂಲತಃ ತಮಿಳುನಾಡಿನವರು. ಕದ್ದ ಚಿನ್ನಾಭರಣವನ್ನ ವಿಲೇವಾರಿ ಮಾಡ್ತಿದ್ದಿದ್ದೂ ಕೂಡ ತಮಿಳುನಾಡಿನಲ್ಲೇ.
ಈ ಅಣ್ತಮ್ಮಂದಿರಲ್ಲಿ ತಮ್ಮನಾಗಿರುವ ಗುಣಶೇಖರ ನಟೋರಿಯಸ್ ಕ್ರಿಮಿನಲ್ .. ಚಿಕ್ಕವಯಸ್ಸಿನಲ್ಲಿ ಎಲ್ಲಾರೂ ಪೆನ್ನು ಪೇಪರ್ ಹಿಡಿದ್ರೆ ಈತ ಕಳ್ಳತನ ಮಾಡಲು ರಾಡ್ ಹಿಡಿದು ಓಡಾಡುತ್ತಿದ್ದ. ಕಳ್ಳತನ ವಿಚಾರವಾಗಿ ಈ ಹಿಂದೆ ಬಾಲಾಪರಾಧಿಯಾಗಿ ರಿಮ್ಯಾಂಡ್ ಹೋಂಗೆ ಕೂಡ ಸೇರಿದ್ದ. ಸುಲಭವಾಗಿ ದುಡ್ಡು ಸಿಗುತ್ತೆ ಎಂದು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಈತ ಜೊತೆಗೆ ತನ್ನ ಅಣ್ಣ ಅಜಿತ್ ಹಾಗು ಮುತ್ತು ಎಂಬಾತನನ್ನ ಜೊತೆಗೆ ಸೇರಿಸಿಕೊಂಡಿದ್ದ. ಮೂವರೂ ಕೂಡ ಮಾದಕ ವ್ಯಸನಿಗಳು. ಮಾದಕ ದ್ರವ್ಯ ಹಾಗೂ ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದರು. ಇನ್ನು ಇವರು ಮುಖ್ಯವಾಗಿ ಟಾರ್ಗೆ್ಟ್ ಮಾಡ್ತಿದ್ದಿದ್ದೇ ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳನ್ನ . ಫ್ಯಾಷನ್ ಎಂದು ಬಾಲ್ಕನಿಗೆ ಗ್ಲಾಸ್ ಅಳವಡಿಸುವ ಫ್ಲಾಟ್ ಗಳಿಗೆ ನುಗ್ಗಿ ದೋಚುವುದೇ ಇವರ ಕೆಲಸ . ಇನ್ನು ಮುತ್ತು ಎಂಬಾತ ಹಗಲಿನಲ್ಲಿ ಮನೆಗಳನ್ನ ಗುರುತಿಸುತ್ತಿದ್ದ. ನಂತರ ರಾತ್ರಿ ವೇಳೆ ಮೂವರು ಫ್ಲಾಟ್ ಗಳ ಬಾಲ್ಕನಿಯ ಸ್ಲೈಡಿಂಗ್ ಡೋರ್ ಮೂಲಕ ಒಳಗೆ ಹೋಗಿ ಕಳ್ಳತನ ಮಾಡ್ತಿದ್ರು. ಬೀಗ ಹಾಕಿದ ಮನೆಗಳಿಗೆ ರಾಡ್ ಹಾಕಿ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ರು ಇನ್ನು ಐಷಾರಾಮಿ ಜೀವನಕ್ಕೆ ಅಲ್ಲದೆ ತಮಿಳುನಾಡಿನ ಕೋಳಿ ಅಂಕಕ್ಕೂ ಹಣ ಕಟ್ಟುತ್ತಿದ್ರು . ಇನ್ನು ಮೊಬೈಲ್ ವಾಟ್ಸಪ್ ಮುಖಾಂತರವೇ ಇವರು ಮಾತನಾಡಿಕೊಂಡು ಕೃತ್ಯವನ್ನ ಎಸಗುತ್ತಿದ್ರು ಎನ್ನಲಾಗಿದೆ .
ಸದ್ಯ ಆರೋಪಿಗಳ ಮೇಲೆ ಕೊತ್ತನೂರು ಠಾಣೆಯಲ್ಲೂ ಕೂಡ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿದೆ . ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
