ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಕಾರ್ಯಕ್ರಮದಿಂದ ವಾಪಸ್ ಹೋಗುವಾಗ ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಗಾಯಗೊಂಡಿದ್ದರು, ಆಸ್ಪತ್ರೆಗೆ ತೆರಳಲು ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದರು.
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಾರ ಬಿ.ಸಿ. ನಾಗೇಶ್ ಅವರು ಬಾಲಕರ ಪರಿಸ್ಥಿತಿ ಕಂಡು ಮಮ್ಮಲ ಮರುಗಿದರು, ತಡ ಮಾಡದೇ ಕಾರಿನಿಂದ ಇಳಿದು ಗಾಯಾಳು ಬಾಲಕರನ್ನು ತಮ್ಮ ಭದ್ರತಾ ವಾಹನದಲ್ಲೇ ತ್ವರಿತವಾಗಿ ಆಸ್ಪತ್ರೆಗೆ ಸೇರಿಸಲು ಮುಂದಾದರು ಗಾಯಾಳು ಬಾಲಕರನ್ನು ಬೇಗ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು.ಆದರೆ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಬಂದ ಬಳಿಕ ಇಬ್ಬರು ಬಾಲಕರನ್ನು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಕಳುಹಿಸಿದರು. ನಾನು ಒಬ್ಬ ಮಂತ್ರಿ ಎಂಬ ಹಮ್ಮುಬಿಮ್ಮು ತೋರದೆ ಬಾಲಕರ ಪರಿಸ್ಥಿತಿಗೆ ಶೀಘ್ರ ಸ್ಪಂದನೆ ಇತ್ತು ಬಾಲಕರ ಜೀವ ಉಳಿಸುವಲ್ಲಿ ನೆರವಾಗಿದ್ದಾರೆ.
ಮಂತ್ರಿಗಳ ಕಾರ್ಯವೈಖರಿಗೆ ಸಾರ್ವಜನಿಕರ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಹಾಟ್ಸ್ ಆಫ್ ಟು ಯು ಸರ್
*ಮಾನವೀಯತೆ ಮೆರೆದ ಶಿಕ್ಷಣ ಸಚಿವರು*
Date: