ತಿಂಗಳಿಗೊಂದು ಕೊಲೆ , ವಾರಕ್ಕೊಂದು ಸುಲಿಗೆ , ಮಿಸ್ಸಿಂಗ್ ಕೇಸುಗಳು , ಹಿರಿಯ ಅಧಿಕಾರಿಗಳ ಒತ್ತಡ, ಕೋರ್ಟು ಕೆಲಸಗಳು , ಕಷ್ಟಪಟ್ಟು ಹಿಡಿದ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಅಪರಾಧಿಯೆಂದು ಮಾನ್ಯ ನ್ಯಾಯಾಧೀಶರಿಗೆ ಮನವರಿಕೆಮಾಡಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆ ಕೊಡಿಸಿ ಸುಸ್ತಾಗಿ ಠಾಣೆಗೆ ತೆರಳಿ ನೈಟ್ ರೌಂಡ್ಸುಗಳು , ಗಂಡ ಹೆಂಡಿರ ಕಲಹಗಳು , ಬೀದಿ ಹೊಡೆದಾಟಗಳು , ಕೆಳ ಸಿಬ್ಬಂದಿ ವರ್ಗದವರ ಡ್ಯೂಟಿ ರೋಲ್ ಕಾಲುಗಳು , ಅವರ ರಜೆಗಳ ಅಪ್ಲಿಕೇಶನ್ ಗಳು , ಬಂದೋಬಸ್ತ್ , ಸ್ಟಾಟಿಕ್ ಡ್ಯೂಟಿ , ರಾಜಕೀಯ ವ್ಯಕ್ತಿಗಳಿಗೆ ಪ್ರೊಟೆಕ್ಷನ್ನುಗಳು , ಅಬ್ಬಬ್ಬಾ ….ತಂದೆ ತಾಯಿ, ಒಡ ಹುಟ್ಟಿದವರು, ಕೊನೆಗೆ ಡ್ಯೂಟಿ ಮುಗಿಸಿ ಮನೆಗೆ ತೆರಳಿ ಕೈ ಹಿಡಿದ ಮಡದಿಯ ಸೊರಗಿದ ನಿದ್ದೆ ಕಣ್ಣಿನ ಮುಖದೊಳಗಿನ ಕಣ್ಣುಗಳನ್ನು ಎದರಿಸುವುದೇ ಒಂದು ಕಷ್ಟದ ಸಂಗತಿ , ಆಕೆಯ ಮಾನಸಿಕ , ದೈಹೀಕ ಇಷ್ಟ ಕಷ್ಟಗಳನ್ನು ಪೂರೈಸಲಾಗಲಿಲ್ಲವಲ್ಲ ? ಮಕ್ಕಳನ್ನು ಮುದ್ದಿಸಿ ಶಾಲೆಗೆ ಬಿಡಲಾಗಲಿಲ್ಲವಲ್ಲ ? ಎಂಬ ಮಾನಸಿಕ ತೊಳಲಾಟ , ಒಂದೇ ಎರಡೇ ? ಅಪರೂಪಕೊಮ್ಮೆ ಸ್ನೇಹಿತನ ಸಂಗಡಲೋ ಸ್ನೇಹಿತೆಯ ಸಂಗಡಲೋ , ಕುಟುಂಬ ಅಥವಾ ಕೊನೆ ಪಕ್ಷ ಹೆಂಡತಿಗೆ ಕರೆಮಾಡಲು ಫೋನ್ ಎತ್ತಿದರೆ ತಕ್ಷಣ ಅದೇ ವಾಕಿ ಶಬ್ದ , ಕಂಟ್ರೋಲ್ ಕಾಲಿಂಗ್ ವಾಕಿ .. ಕಂಟ್ರೋಲ್ ಕಾಲಿಂಗ್ ಚಾರ್ಲಿ… ವಿರಳಾತಿವಿರಳವಾಗಿ ಸಿಗುವ ಕೆಲವು ಸಿಬ್ಬಂದಿ ವರ್ಗದವರು ಆರೋಪಿಯ ಬಳಿ ವ್ಯವಹಾರ ಕುದುರಿಸಿ ಅಧಿಕಾರಿಯ ಹೆಸರಿನಲ್ಲಿ ವ್ಯಾಪಾರ ಮುಗಿಸಿ ಕೊನೆಗೆ ಲೋಕಾಯುಕ್ತದವರ ಬಳಿ ತಗಲಾಕಿಕೊಂಡಾಗ ನಿಷ್ಪಾಪಿ ಅಧಿಕಾರಿಯ ಹೆಸರು ಹೇಳಿ ತಪ್ಪಿಸಿಕೊಂಡು ಅದೇ ಅಧಿಕಾರಿಯನ್ನು ಸಸ್ಪೆಂಡ್ ಮಾಡಿಸಿರುವ ಪ್ರಕರಣಗಳು ಪ್ರತಿನಿತ್ಯ ನೋಡುತ್ತಿರುವೆವು , ತನ್ನದಲ್ಲದ ತಪ್ಪಿಗೆ ಸಸ್ಪೆಂಡ್ ಆಗಿ , ಪೊಲೀಸ್ ಕ್ವಾರ್ಟರ್ಸ್ ನಲ್ಲಿ ತಲೆಯೆತ್ತಿ ಓಡಾಡಲಾಗದೆ , ಹೆಂಡತಿ ಮಕ್ಕಳಿಗೆ ಮುಖ ತೋರಿಸಲಾಗದೆ , ಒಬ್ಬ ನಿಷ್ಠಾವಂತ ಅಧಿಕಾರಿಯಾಗಿ ದುಡಿದು ಅತ್ತ ಆತ್ಮಹತ್ಯೆಯನ್ನೂ ಮಾಡಿಕೊಳ್ಳಲಾರದೆ ಒಳಗೊಳಗೇ ಕೊರಗಿ ಎದೆ ಎದೆ ಬಡಿದುಕೊಂಡು ಹಾರ್ಟ್ ಫೇಲ್ ಆಗಿ ಪ್ರಾಣತೆತ್ತ ಅಧಿಕಾರಿಗಳು ಅನೇಕರು. ಅದೇನೇ ಇರಲಿ , ಜನ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಎಲ್ಲರ ನೆಚ್ಚಿನ ಇನ್ಸ್ಪೆಕ್ಟರ್ ಆಗಿದ್ದವರು ಇನ್ಸ್ಪೆಕ್ಟರ್ ನಂದೀಶ್ .ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ದಿವಂಗತ ಶಂಕರ್ ನಾಗ್ ಅವರ ಡೈಲಾಗ್ ಹೇಳಿದ್ದು ಇವತ್ತಿಗೂ ಎಲ್ಲರ ಕಣ್ಣ ಮುಂದಿದೆ , ನಿಜವಾಗಿಯೂ ಇಂತಹ ಅಧಿಕಾರಿಯನ್ನು ನಾವು ಕಳೆದುಕೊಂಡು ಬಿಟ್ಟೆವಾ ಎಂಬ ಪ್ರಶ್ನೆ ?ದಕ್ಷಾಧಿಕಾರಿ ಅಕಾಲಿಕ ಮರಣ ದಿಗ್ಬ್ರಮೆ ಗೊಳಿಸಿದೆ ಕೆ ಆರ್ ಪುರಂ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದಂತಹ ನಂದೀಶ್ ರವರ ರವರ ಆತ್ಮಕ್ಕೆ ಭಗವಂತನು ಶಾಂತಿ ದೊರಕಿಸಲಿ ಹಾಗೂ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ,ಧೈರ್ಯ ಭಗವಂತ ನೀಡಲಿ.