23.8 C
Bengaluru
Friday, September 29, 2023

*ಮಡಿವಾಳ ಪೊಲೀಸಕಾರ್ಯಾಚರಣೆ*

Date:


ಉಳ್ಳವರ ಮನೆಗಳಿಗೆ ಕನ್ನ, ಧಾರ್ಮಿಕ ಕೇಂದ್ರಗಳಿಗೆ ದಾನ
ಕುಖ್ಯಾತ ಮನೆಗಳ್ಳ ಜಾನ್ ಮೆಲ್ವಿನ್ ನನ್ನು ಮಡಿವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಈತ ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದಾನೆಂದು ತಿಳಿದು ಬಂದಿದೆ.
ಆರೋಪಿ ಆಸೆ ತೀರಿದ ಬಳಿಕ ಉಳಿದ ಹಣದಲ್ಲಿ ದಾನ ಧರ್ಮ ಮಾಡುವುದು,
ಚರ್ಚ್, ದೇವಾಲಯಗಳ ಹುಂಡಿಗೆ ಹಣ ಹಾಕುವುದು, ಇವನ ಕಾಯಕವಾಗಿತ್ತಂತೆ
ಬಂಧಿತನಿಂದ ಹನ್ನೊಂದು ಲಕ್ಷ ನಗದು, ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಮೊಬೈಲ್ ಫೋನ್ ಗಳ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಜಾನ್ ಮೆಲ್ವಿನ್ಈ ಹಿಂದೆ ಸುಮಾರು ಇಪ್ಪತ್ತೇಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದು ಬಂದಿದೆ
ಬೀಗ ಹಾಕಿರುವ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡು ಆರೋಪಿ ಕೃತ್ಯವೆಸಗುತ್ತಿದ್ದ ಎಂಬುದು ತಿಳಿದು ಬಂದಿದೆ.
ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳಿವೆ
ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ
ನಗರದ ಅತೀ ಹಳೆಯ ಕುಖ್ಯಾತ ಮನೆಗಳ್ಳರಲ್ಲಿ ಮೆಲ್ವಿನ್ ಕೂಡಾ ಒಬ್ಬ
ಪ್ರತೀ ಬಾರಿ‌ ಬಂಧನವಾದಾಗಲೂ ಹತ್ತರಿಂದ ಹದಿನೈದು ದಿನಗಳಲ್ಲೇ ಜಾಮೀನು ಪಡೆದು ಮತ್ತದೇ ಕಳ್ಳತನದ ಚಾಳಿ ಮುಂದುವರೆಸುತಿದ್ದ ಎಂಬುದು ತಿಳಿದು ಬಂದಿದೆ.
ಸದ್ಯ ಮಡಿವಾಳ ಠಾಣಾ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.

Latest Stories

LEAVE A REPLY

Please enter your comment!
Please enter your name here