19.1 C
Bengaluru
Saturday, February 8, 2025

*ಕೊಲೆ ಬೇಧಿಸಿದ ಪೊಲೀಸ್ ರಾಂಬೊ*

Date:


ದೀಪಾವಳಿ‌ ದಿನ ಸೋಮವಾರ ದಿನಾಂಕ 24 ರಂದು ಈರಪ್ಪ ಸೂರಪ್ಪನವರ್ರನ್ನು ಕೊಲೆ ಮಾಡಲಾಗಿತ್ತು .ಆರೋಪಿಗಳು ಈರಪ್ಪನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಶಿರಹಟ್ಟಿ ಪೊಲೀಸರು, ಹೊಸಳ್ಳಿ ಗ್ರಾಮದ ಮಾರ್ಕಂಡ ಬಂಡಿವಡ್ಡರ್, ಮಲ್ಲೇಶ್ ಬಂಡಿವಡ್ಡರ್, ಹುಚ್ಚಪ್ಪ ಬಂಡಿವಡ್ಡರ್, ದೇವಕ್ಕ ಎಂಬುವವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿ ಈರಪ್ಪ ಸೂರಪ್ಪನವರ್ ಮುಂಡರಗಿ ತಾಲೂಕಿನ ಡಂಬಳ ಮೂಲದವರಾಗಿದ್ದು, ಹೊಸಳ್ಳಿಯಲ್ಲಿ ಮೋಟರ್ ವೈಡಿಂಗ್ ಕೆಲಸ ಮಾಡ್ಕೊಂಡಿದ್ದರು .ಕಳೆದ 20 ವರ್ಷದಿಂದ ಹೊಸಳ್ಳಿ ಗ್ರಾಮದಲ್ಲೇ ಉದ್ಯೋಗ ಮಾಡ್ಕೊಂಡು ವಾಸವಿದ್ದ ಈರಪ್ಪನಿಗೆ ಅದೇ ಗ್ರಾಮದ ದೇವಕ್ಕ ಅನ್ನೋರ ಜೊತೆ ಸಲುಗೆ ಬೆಳದಿತ್ತು.. ದೇವಕ್ಕ ಅವರಿಂದ ದೂರ ಇರುವಂತೆ ಸಹೋದರ ಮಾರ್ಕಂಡ, ಈರಪ್ಪನಿಗೆ ಹೇಳಿದ್ದ.. ಇದೇ ವಿಷಯವಾಗಿ ದಿನಾಂಕ 24 ನೇ ತಾರೀಕು ಬೆಳಿಗ್ಗೆ ಮಾರ್ಕಂಡ, ಈರಪ್ಪ ಮಧ್ಯ ಜಗಳ ನಡೆದಿತ್ತು, ಆ ಕ್ಷಣಕ್ಕೆ ಸುಮ್ಮನಾಗಿದ್ದ ಮಾರ್ಕಂಡ, ಸಂಜೆ ವೈಡಿಂಗ್ ಶೆಡ್ ಬಳಿ ಮಲಗಿದ್ದ ಈರಪ್ಪನ ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ ಕೊಲೆ ಮಾಡಿದ್ದ.ಮಾರ್ಕಂಡನಿಗೆ ಮಲ್ಲೇಶ, ಹುಚ್ಚಪ್ಪ ಎಂಬುವವರು ಸಾಥ್ ನೀಡಿದ್ರು.
ಆದರೆ ಕೊಲೆ ನಡೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯ ಹಿಂದಿರುವುದು ಪೊಲೀಸ್ ರಾಂಬೊ
ಅರೇ ಯಾರಿದು ಪೊಲೀಸ್ ರಾಂಬೊ ಅಂದ್ರ ಅದು ಬೇರೆ ಯಾರು ಅಲ್ಲ ಪೊಲೀಸ್ ಡಾಗ್ ರಾಂಬೊ.
ಶ್ವಾನ ದಳದ ರಾಂಬೊ ವನ್ನು ಕರೆತಂದು ಸ್ಥಳದ ಪರಿಶೀಲನೆ ನಡೆಸಲಾಯ್ತು.. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈರಪ್ಪ ಸುತ್ತ ರೌಂಡ್ ಹೊಡೆದಿದ್ದ ರಾಂಬೋ ರಕ್ತದ ಕಲೆ ಹಾಗೂ ಬಟ್ಟೆಯ ವಾಸನೆ ಹಿಡಿದು ಆರೋಪಿಗಳ ಮನೆ ಬಳಿ ಹೋಗಿ ನಿಂತಿತ್ತು ಅಲ್ಲಿಂದ ಆರೋಪಿ ಮಾರ್ಕಂಡ ಹಾಗೂ ತಂಡದ ಹುಡುಕಾಟದಲ್ಲಿ ಪೊಲೀಸರು ನಿರತರಾದ್ರು.ಕೇವಲ 24 ಗಂಟೆಯಲ್ಲಿ‌ ಆರೋಪಿಗಳನ್ನ ಪತ್ತೆಹಚ್ಚಲಾಯ್ತು ಆರೋಪಿಗಳ ಪತ್ತೆಯಲ್ಲಿ ರ‌್ಯಾಂಬೊ ಪ್ರಮುಖ ಪಾತ್ರ ವಹಿಸಿದ್ದು ವ್ಯಾಪಾಕ ಪ್ರಶಂಸೆಗೆ ಪಾತ್ರವಾಗಿದೆ.
ಕೊಲೆ ಮಾಡಿ ನಂತ್ರ ಶಿರಹಟ್ಟಿ ಪ್ಯಾಪ್ತಿಯ ಕಪ್ಪತ ಗುಡ್ಡದ ಅರಣ್ಯದಲ್ಲಿ ಮಾರ್ಕಂಡ, ಮಲ್ಲೇಶ್, ಹುಚ್ಚಪ್ಪ, ದೇವಕ್ಕ ತಲೆ ಮರೆಸಿಕೊಂಡಿದ್ರು.. ರ‌್ಯಾಂಬೊ ನೀಡಿದ ಸುಳಿವಿನೊಂದಿಗೆ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನ ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.. ಪ್ರಕರಣದ ತನಿಖೆಗೆ ಸಹಾಯವಾದ ಪೊಲೀಸ್ ಶ್ವಾನ ರ‌್ಯಾಂಬೊ ಕೆಲಸಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಯೋಧನಂತೆ ಕಾರ್ಯ ನಿರ್ವಹಿಸುತ್ತಿರುವ ಶ್ವಾನ ದಳದ ರಾಂಬೊ ಕಾರ್ಯವೈಖರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

Latest Stories

LEAVE A REPLY

Please enter your comment!
Please enter your name here