ಪ್ರತಿಯೊಬ್ಬ ಮನುಷ್ಯನು ಸಾಮಾಜಿಕ ಕಳಕಳಿ ಹೊಂದಿದ್ದರೆ, ಸಮಾಜ ಸುಧಾರಣೆ ಬಹು ಸಾಧಾರಣ ಕಾರ್ಯವಾಗಬಹುದು ಆದರೆ ಸಾಮಾಜಿಕ ಕಳಕಳಿಯೇ ಇಲ್ಲವಾದರೆ ಬದುಕು ದುಸ್ತರ ಆದರೆ ಇಲ್ಲಿಬ್ಬರು ಖಾಕಿಧಾರಿಗಳು ಸಾಮಾಜಿಕ ಕಳಕಳಿಯ ರೂವಾರಿಗಳಾಗಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಎಲ್ಲೆಡೆ ಕಾಣುವ ದಿನನಿತ್ಯದ ಘೋರ ದೃಶ್ಯ ಆದರೆ ಖಾಕಿ ತೊಟ್ಟಿರುವುದು ಕಾನೂನು ಸುವ್ಯವಸ್ಥೆಯ ಪರಿಪಾಲನೆಗೆ ಮಾತ್ರವಲ್ಲ ನಮಗೆ ಸಾಮಾಜಿಕ ಬದ್ಧತೆಯು ಉಂಟು ಎಂಬುದನ್ನು ಈ ಖಾಕಿ ತೊಟ್ಟ ಕಾನೂನು ಪರಿಪಾಲಕರು ಸಾಬೀತು ಪಡಿಸಿದ್ದಾರೆ.
ವಿಭಿನ್ನ ಸ್ಥಳಗಳಲ್ಲಿ ಪಿ ಎಸ್ ಐ ಜಗನಾಥ್ ಹಾಗೂ ಪಿ ಸಿ ನಾಗಪ್ಪ ದಿಂಡಿವಾಡ ರಸ್ತೆ ಗುಂಡಿ ಮುಚ್ಚಿಸಿ ಮಾನವೀಯತೆ ಮೆರೆದಿದ್ದಾರೆ
ಮಲೇಶ್ವರಂ ಸಂಚಾರಿ ಠಾಣೆ ಪಿಎಸ್ ಐ ಜಗನ್ನಾಥ್ ರಿಂದ ಗುಂಡಿ ಮುಚ್ಚಿಸುವ ಕಾರ್ಯ ನಡೆದಿದೆ ,ಓಕಳಿಪುರಂ ಸುತ್ತಮುತ್ತ ಗುಂಡಿ ಬಿದಿದ್ದವು.ಬಿಬಿಎಂಪಿಯವರಿಗೆ ಎಷ್ಟೇ ಹೇಳಿದ್ರೂ ಗುಂಡಿ ಮುಚ್ಚಿರಲಿಲ್ಲ.
ಹೀಗಾಗಿ ಮಲೇಶ್ವರಂ ಸಂಚಾರಿ ಠಾಣೆ ಪಿಎಸ್ ಐ ಜಗನ್ನಾಥ್ ಗುಂಡಿ ಮುಚ್ಚಿಸಿದ್ರು.
ತಾವೇ ಸ್ವತಃ ನಿಂತು ಸಿಮೆಂಟ್ ,ಜಲ್ಲಿ ತರಿಸಿ ಗುಂಡಿ ಮುಚ್ಚಿಸಿದ್ರು.ಇತ್ತಿಚ್ಚೆಗಷ್ಟೆ ಮಹಿಳೆ ಗುಂಡಿ ತಪ್ಪಿಸಲು ಹೋಗಿ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ರು.ಬೈಕ್ ಸವಾರರು ಆಯ ತಪ್ಪಿ ಬಿಳುವ ಹಿನ್ನಲೆ ಗುಂಡಿ ಮುಚ್ಚಿಸಿದ ಪಿಎಸ್ ಐ.
ಅದೇ ರೀತಿ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಜಂಕ್ಷನ್ ಬಳಿ ಶ್ರೀ. ನಾಗಪ್ಪ ದಿಂಡಿವಾಡ ಪಿಸಿ ರವರು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದೊಡ್ಡದಾಗಿ ಬಿದ್ದಿದ್ದ ಗುಂಡಿಯನ್ನು ತಮ್ಮ ಸ್ವಂತ ಪರಿಶ್ರಮದಿಂದ ಮುಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಇದು ನಮ್ಮ ಕೆಲಸವಲ್ಲ ನಾವೇಕೆ ಮಾಡಬೇಕು ಎಂಬೆಲ್ಲ ವಿತಂಡ ವಾದಕ್ಕೆ ಕಿವಿಗೊಡದೆ ಸುರಕ್ಷಿತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಕೂಡ ನಮ್ಮ ಜವಾಬ್ದಾರಿಗಳಲ್ಲಿ ಒಂದು ಎಂಬಂತೆ ಕಾರ್ಯ ನಿರ್ವಹಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಪಿ ಎಸ್ ಐ ಜಗನ್ನಾಥ್ ಹಾಗೂ ನಾಗಪ್ಪ ದಿಂಡಿ ವಾಡ ರವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.


