ಶೋಕಿ, ಮೋಜು ಮತ್ತು ಮಸ್ತಿಗಾಗಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮನೆ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಕಳ್ಳರನ್ನು ಬಂಧಿಸುವಲ್ಲಿ ಕೆ ಆರ್ ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು ಆರುಲಕ್ಷದ ಇಪ್ಪತೈದು ಸಾವಿರ ರೂ ಬೆಲೆ ಬಾಳುವ ಒಟ್ಟು 102 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದ್ವಿ ಚಕ್ರ ವಾಹನ ಕಳ್ಳತನದ ಒಂದು ಕೇಸು ಸೇರಿದಂತೆ ಒಟ್ಟು ನಾಲ್ಕು ಕೇಸುಗಳ ಪತ್ತೆಯಾಗಿದೆ.
ಒಟ್ಟು 102 ಗ್ರಾಂ ಚಿನ್ನದ ವಡವೆಗಳನ್ನು ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣೆಯ ಒಂದು ದ್ವಿ ಚಕ್ರ ವಾಹನವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣಿಯು ಶ್ರೀ.ಗಿರೀಶ್.ಎಸ್ ಮಾನ್ಯ ಡಿ.ಸಿ.ಪಿ ಸಾಹೇಬರ ನಿರ್ದೇಶನದಲ್ಲಿ ಮತ್ತು ಶ್ರೀ.ಶಾಂತಮಲ್ಲಪ್ಪ, ಎ.ಸಿ.ಪಿ ಸಾಹೇಬರ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದಂತ ಶ್ರೀ.ನಂದೀಶ್, ಹೆಚ್.ಎಲ್, ಪೊಲೀಸ್ ಇನ್ಸಪೆಕ್ಟರ್, ಶ್ರೀ, ಪ್ರವೀಣ್.ಜಿ.ಎನ್, ಪಿ.ಎಸ್.ಐ, ಮತ್ತು ಸಿಬ್ಬಂದಿಗಳಾದ ಹೆಚ್.ಸಿ.ಗಳಾದ ಶ್ರೀ. ವೆಂಕಟರಾಜು, ಶ್ರೀ, ಆರೀಫ್ ಪಾಷ, ಶ್ರೀ ವೆಂಕಟೇಶ, ಶ್ರೀ ಆದಿನಾರಾಯಣ, ಎಸಿಗಳಾದ ಶ್ರೀ ಫೀರೋಜ್ ಅಹಮದ್, ಶ್ರೀ ಹನುಮಂತ ನಾಯಕ್, ಶ್ರೀ.ಸ್ಟಿಂಗ ರಾಯ, ಶ್ರೀ ಶಶಿಕುಮಾರ್ ಕಾಂಬ್ಳೆ, ಶ್ರೀ ಶಿವನ ಗೌಡ, ಶ್ರೀ ದೇವಪ್ಪ ರವರುಗಳಗೆ ಹಿರಿಯ ಅಧಿಕಾರಿಗಳು ಕಾರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.
*ಕೆ.ಆರ್.ಪುರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ*
Date: