ಪಿರ್ಯಾದುದಾರರು ಕರಿಯನ ಪಾಳ್ಯದ ತಮ್ಮ ಮನೆಯ ಬೀಗ ಹಾಕಿಕೊಂಡು ಹೋಗಿ ಅದೇ ದಿನ ಸಂಜೆ ಸುಮಾರು 4-30 ಗಂಟೆಗೆ ವಾಪಸ್ಸು ಮನೆಗೆ ಒಂದು ನೋಡಲಾಗಿ ಯಾರೋ ಕಳ್ಳರು ತಮ್ಮ ಮನೆಯ ಸೀಟಿನ ಮೇಲ್ಯಾವಣಿಯನ್ನು ಹೊಡೆದು ಬೀರುವಿನಲ್ಲಿದ್ದ ಒಟ್ಟು 415 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಒಡವೆಗಳು ಮತ್ತು 20.000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಪೊಲೀಸ್ ಠಾಣೆ ಮೊ.ಸಂ.239/2022 ಕಲ,454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.
ಆರೋಪಿಯಾದ ಗುಣಶೇಖರ್ ಬಿನ್ ವೇಣುಗೋಪಾಲ್‌ನನ್ನ ದಸ್ತಗಿರಿ ಮಾಡಲಾಗಿ ಈತನ ವಶದಲ್ಲಿದ್ದ ಹಾಗೂ ಆರೋಪಿ ಚಿನ್ನದ ಅಂಗಡಿಯೊಂದರಲ್ಲಿ ಅಡವಿಟ್ಟಿದ್ದ ಒಟ್ಟು ಸುಮಾರು 20 ಲಕ್ಷ ರೂ ಬೆಲೆ ಬಾಳುವ ಒಟ್ಟು 415 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಒಡವೆಗಳು ಮತ್ತು 12 ಸಾವಿರ ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಕೃಷ್ಣಕಾಂತ್ ರವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ. ಪವನ್ ಎನ್ ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಜಿ.ಸಿದ್ದರಾಜು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರುಗಳಾದ ಶ್ರೀ.ವಿನಯ್ ಕೆಎಲ್, ಶ್ರೀ. ಶ್ರೀಕಾಂತ್ ಪಮಾರ್, ಉಮೇಶ್ ಎಂ.ಎನ್, ಸತೀಶ್ ಪಿ ಹಾಗೂ ಸಿಬ್ಬಂದಿಯವರಾದ ಶ್ರೀ. ಗೋವಿಂದರಾಜು ಹೆಚ್-7510, ಶ್ರೀ.ನರಸಿಂಹಮೂರ್ತಿ ಹೆಚ್.ಸಿ-8106, ಶ್ರೀ.ಸಾಗರ-ಹೆಚ್ ಸಿ-10287, ಶ್ರೀ. ಶ್ರೀನಿವಾಸ್ ಹೆಚ್ ಸಿ-10350, ಶ್ರೀ.ಶಿವು ಟಿಡಿ, ಹೆಚ್.ಸಿ-10101, ಶ್ರೀ ದಾವಲ್ ಸಾಬ್ ಪಿಸಿ 13895, ಶ್ರೀ.ಶರತ್ ಕುಮಾರ್ ಪಿಸಿ-19206 ಶ್ರೀ.ಸಿದ್ದಪ್ಪ ಪಿಸಿ-20361 ರವರುಗಳು ಆರೋಪಿಯನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ
Date: