ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಮಿಂಚುತ್ತಿದೆ ಹೃದಯ. ಇದೇನಿದು ಸಿಗ್ನಲ್ಗಳಲ್ಲಿ ಹೃದಯ ಅಂದ್ರ ಹೌದು ಟ್ರಾಫಿಕ್ ಪೊಲೀಸರು ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಹಾರ್ಟ್ ಅಟ್ಯಾಕ್ ನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಟ್ರಾಫಿಕ್ ಸಿಗ್ನಲ್ ಗಳಲ್ಲಿ ರೆಡ್ ಲೈಟ್ ಮೂಡುವ ಸ್ಥಳದಲ್ಲಿ ಹಾರ್ಟ್ ಸಿಂಬಲ್ನ ಕೆಂಪು ಬಣ್ಣದ ಹೃದಯದ ಚಿತ್ರವನ್ನು ಬೆಳಗಿಸುತ್ತಿದ್ದಾರೆ.
ನಗರದ ಹಲವು ಸಿಗ್ನಲ್ ಗಳಲ್ಲಿ ಹಾರ್ಟ್ ರೆಡ್ ಸಿಗ್ನಲ್.
ದಿಢೀರ್ ಅಂತ ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಬದಲಾಯಿಸಿದ ಪೊಲೀಸರು.
ಕೆಂಪು ದೀಪ ಇದ್ದ ಕಡೆ ಕಾಣುತ್ತಿದೆ ಹೃದಯ.
ಹೃದಯದ ಬಗ್ಗೆ ಅರಿವು ಮೂಡಿಸಲು ಮುಂದಾದ ಟ್ರಾಫಿಕ್ ಪೊಲೀಸರು.
ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ಹೃದಯದ ಬಗ್ಗೆ ಅರಿವು.
ಅದಕ್ಕಾಗಿ ನಗರದ ಸಿಗ್ನಲ್ ದೀಪಗಳನ್ನ ಬದಲಿಸಿದ ಪೊಲೀಸರು.
ವಿಶ್ವ ಹೃದಯ ದಿನದ ಸಲುವಾಗಿ ಹಾರ್ಟ್ ಶೇಪ್ ಸಿಗ್ನಲ್ ವ್ಯವಸ್ಥೆ.
ಇತ್ತೀಚಿಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು.
ಹೃದಯಾಘಾತ, ಹೃದಯ ಸಂಬಂಧಿ ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹೊಸ ಪ್ರಯತ್ನ.ಟ್ರಾಫಿಕ್ ಪೊಲೀಸರು ಮತ್ತು ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿ ಜಾಗೃತಿ ಕಾರ್ಯಕ್ರಮ.ನಗರದ 20 ಸಿಗ್ನಲ್ ಗಳಲ್ಲಿ ಕೆಂಪು ದೀಪದಲ್ಲಿ ಬೆಳಗುತ್ತಿರುವ ಹೃದಯ.
ಹಾರ್ಟ್ ಶೇಪ್ ನಲ್ಲಿ ಬೆಳಗುತ್ತಿದೆ ರೆಡ್ ಸಿಗ್ನಲ್.ಕೆಂಪು ದೀಪ ಬಂದಾಗ ನಿಲ್ಲಿ, ಇದು ಹೃದಯದ ಸಂದೇಶ ಎಂದು
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅರಿವು ಮೂಡಿಸುವ ಸಲುವಾಗಿ ಸಿಗ್ನಲ್ ಬದಲಿಸಿದ ಪೊಲೀಸರು.ಸಂಚಾರ ನಿಯಮಗಳ ಉಲ್ಲಂಘನೆಯಾಗದೆ ಸಿಗ್ನಲ್ ಬದಲಾವಣೆ.ಹಾರ್ಟ್ ಶೇಪ್ ಸಿಗ್ನಲ್ ನೋಡಿ ಜನ ಸ್ವಲ್ಪ ಎಚ್ಚರಿಕೆ ವಹಿಸಬೇಕು.
ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಗಮನ ವಹಿಸುವಂತೆ ಎಚ್ಚರಿಕೆ ವಹಿಸಲು ಈ ಕ್ರಮ.ಇನ್ನೂ ಹತ್ತು ದಿನ ನಗರದ ಕೆಲವು ಸಿಗ್ನಲ್ ಗಳಲ್ಲಿ ಕಾಣಲಿದೆ ಹೃದಯ.
ಪ್ರಮುಖ ಸಿಗ್ನಲ್ ಗಳಲ್ಲಿ ಮಿಂಚುತ್ತಿರುವ ಹೃದಯ.ಮಹಾತ್ಮಾ ಗಾಂಧಿ ಸರ್ಕಲ್, ಮಿನ್ಸ್ಕ್ ಸ್ಕ್ವೇರ್ ನಲ್ಲಿ ಹಾರ್ಟ್ ಶೇಪ್ ಸಿಗ್ನಲ್ ಸಿಸ್ಟಮ್.
ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವ ಜನಾಂಗ.
ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ಪತ್ರಕರ್ತ ಗುರುಲಿಂಗ ಸ್ವಾಮಿ, ಸಚಿವ ಉಮೇಶ್ ಕತ್ತಿ ಸೇರಿ ಹಲವಾರು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದರು
ಅದರಿಂದ ಯುವಕರಲ್ಲಿ ಅರಿವು ಮೂಡಿಸಲು ಹೊಸ ಹೆಜ್ಜೆ ಇಟ್ಟ ಟ್ರಾಫಿಕ್ ಪೊಲೀಸರು ಮತ್ತು ಮಣಿಪಾಲ್ ಆಸ್ಪತ್ರೆ.
ಟ್ರಾಫಿಕ್ ಪೊಲೀಸರ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ಶ್ಲಾಘನೀಯ ಹಾಗೂ ಅವಿಸ್ಮರಣೀಯ.
*ಬೆಂಗಳೂರು ಸಂಚಾರಿ ಪೊಲೀಸರ ವಿನೂತ ಮಿಂಚುತ್ತಿದೆ ಹೃದಯ*

Date: