ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳ ಮೂಲಕ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಮೈಕೋ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ ಐದು ಲಕ್ಷದ ಐವತ್ತು ಸಾವಿರ ಮೌಲ್ಯದ ಚಿನ್ನದ ಒಡವೆಗಳು ಮತ್ತು ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಒಂಟಿ ಮಹಿಳೆಯರು ವಾಸಿಸುವ ಮನೆಗಳಿಗೆ ಹೋಗಿ ತಾನು ಪರಿಚಯದವರ ರೀತಿಯಲ್ಲಿ ನಂಬಿಸಿ ಮಾತನಾಡುವುದು ಹಾಗೂ ಕೋರಿಯರ್ ಬಾಯ್ ಎಂದು ಹೇಳಿಕೊಳ್ಳುವುದು ಅಥವಾ ನಲ್ಲಿ ರಿಪೇರಿ ಕೆಲಸ ಮಾಡುವ ರೀತಿಯಲ್ಲಿ ಮತ್ತು ಇತರೆ ಯಾವುದಾದರೊಂದು ನೆಪಮಾಡಿಕೊಂಡು ಮನೆಯ ಒಳ ಪ್ರವೇಶಿಸಿ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ಅವರ ಚಿನ್ನದ ಸರವನ್ನು ಕಿತ್ತುಕೊಂಡು ಅಥವಾ ಮನೆಯ ಒಳಗಡೆ ಇರುವ ಮೊಬೈಲ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದನೆಂದು ತಿಳಿದು ಬಂದಿದೆ ಇದರಿಂದಾಗಿ ತಿಲಕನಗರ ಮತ್ತು ಕೋರಮಂಗಲ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಸರಗಳ್ಳತನ ಪ್ರಕರಣಗಳು ಹಾಗೂ ಬಸವನಗುಡಿ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಸದರಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆಗ್ನೆಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಸಿ.ಕೆ ಬಾಬ, ಐ.ಪಿ.ಎಸ್ ಮತ್ತು ಮೈಕೋಲೇಔಟ್ ಉಪ-ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರಾದ ಶ್ರೀ.ಎಂ.ಎನ್.ಕರಿಬಸವನಗೌಡ ರವರ ಮಾರ್ಗದರ್ಶನದಲ್ಲಿ ತಿಲಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಶಂಕರಾಚಾರ್,ಜಿ, ರವರ ನೇತೃತ್ವದಲ್ಲಿ ಪಿ.ಎಸ್.ಐ ರವರಾದ ಶ್ರೀ.ಪ್ರವೀಣ ಎಸ್. ಶ್ರೀ ಸದ್ದಾಂ ಹುಸೇನ್ ನಡಾಫ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ಶ್ರೀ. ಬಲರಾಮನಾಯಕ್ ಹೆಚ್.ಸಿ 6490, ಶ್ರೀ ಮಂಜುನಾಥ್ ವಸ್ತ್ರದ್ ಹೆಚ್.ಸಿ 10196 ಶ್ರೀ ವೀರಭದ್ರ ಹೆಚ್.ಸಿ. 10668, ಶ್ರೀ ರವಿ ಹೆಚ್.ಸಿ: 8768, ಶ್ರೀ ಕುಮಾರ್ ಎಂ. ಹೆಚ್.ಸಿ 7255, ಶ್ರೀ ಹಾಸಿಮಸಾಬ್ ಮಂಡಲ, ಹೆಚ್.ಸಿ 11239, ಶ್ರೀ ಧನಂಜಯ ಎನ್. ಪಿಸಿ 16041, ಶ್ರೀ ಸಂಕಪ್ಪ ಪಿಸಿ 18915, ಶ್ರೀ ಮೆಹಬೂಬ್ ಪಿಸಿ: 20017, ರವರುಗಳು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಉತ್ತಮ ಕಾರ್ಯವನ್ನು ಮಾನ್ಯ ಅಪರ ಪೊಲೀಸ್ ಆಯುಕ್ತರು, ಪೂರ್ವ ಹಾಗೂ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಪ್ರಶಂಸಿರುತ್ತಾರೆ.
*ತಿಲಕನಗರ ಪೊಲೀಸರ ಕಾರ್ಯಾಚರಣೆ*
Date: