ಬೆಂಗಳೂರಿನಲ್ಲಿ ಫರ್ನಿಚರ್ ಇಂಡಸ್ಟ್ರೀಸ್ ವ್ಯವಹಾರ ನಡೆಸುತ್ತಿದ್ದ ಬ್ಯುಸಿನೆಸ್ ಮ್ಯಾನ್ ವಿಕಾಸ್ ಬೋರ ನನ್ನ ಆರೋಪಿಗಳು ಕಿಡ್ನಾಪ್ ಮಾಡಿ,ವಿಕಾಸ್ ತಂದೆ ಮಹೇಂದ್ರ ಕುಮಾರ್ ಗೆ ಕರೆ ಮಾಡಿ ನಿಮ್ಮ ಮಗನನ್ನ ಕಿಡ್ನಾಪ್ ಮಾಡಿದ್ದೇವೆ.ಒಂದು ಕೋಟಿ ಹಣ ಹಾಗೂ ಹದಿನೈದು ಕೆಜಿ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ವಿಜಯನಗರ ಠಾಣೆಗೆ ಮಹೇಂದ್ರ ಕುಮಾರ್ದೂರು ನೀಡಿದ್ದರು.
ಕೂಡಲೇ ಆರೋಪಿಗಳ ಪತ್ತೆಗೆ ಸ್ಪೆಷಲ್ ತಂಡ ರಚಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬಗರಿ ಯವರು
ವಿಜಯನಗರ, ಮಾಗಡಿ ರೋಡ್, ಕಾಮಾಕ್ಷಿ ಪಾಳ್ಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ಕಾರ್ಯ ಪ್ರವೃತ್ತರಾದರು.
ಕೇವಲ ಹನ್ನೆರಡು ಗಂಟೆಗಳಲ್ಲಿ ಆರೋಪಿಗಳ ಹೆಡೆ ಮುರಿ ಕಟ್ಟಿ ಕಿಡ್ನಾಪ್ ಆಗಿದ್ದ ವಿಕಾಸ್ ಬೋರನನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಈ ತಂಡ ಯಶಸ್ವಿಯಾಗಿದೆ.
ಆನಂದ್ ಮತ್ತು ಅರ್ಜಿತ್ ಎಂಬ ಇಬ್ಬರು ಆರೋಪಿಗಳು ತನ್ವೀರ್ ಎಂಬಾತನಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.
ಹಣ ಕಲೆಕ್ಟ್ ಮಾಡೋಕೆ ಆನಂದ್ ಮತ್ತು ತನ್ವೀರ್ ತಂಡದ ಅಜ್ಗರ್ ಬಂದಿದ್ರು, ಈ ವೇಳೆ ಇಬ್ಬರನ್ನೂ ಅರೆಸ್ಟ್ ಮಾಡಿರುವ ಪೊಲೀಸರು, ಉಳಿದ ಆರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಆರೋಪಿಗಳಿಂದ ಕಿಡ್ನಾಪ್ ಮಾಡಿದ್ದ ಕಾರು ,ಒಂದು ಮೊಬೈಲ್ ಫೋನ್ ನನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀ ಲಕ್ಷ್ಮಣ್ ನಿಂಬರ್ಗಿ ಉಪ ಪೊಲೀಸ್ ಆಯುಕ್ತರ ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ರವಿ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಸಂತೋಷಕುಮಾರ್.ಡಿ ಪೊಲೀಸ್ ಇನ್ಸ್ಪೆಕ್ಟರ್ ವಿಜಯನಗರ ಠಾಣೆ, ಹಾಗೂ ಸಿಬ್ಬಂದಿ ,ಲೋಹಿತ್ ಪೊಲೀಸ್ ಇನ್ಸ್ಪೆಕ್ಟರ್ ಕಾಮಾಕ್ಷಿಪಾಳ್ಯ ಠಾಣೆ ಹಾಗೂ ಸಿಬ್ಬಂದಿ, ರಾಜು.ಎಮ್ .ಎಸ್ ಪೊಲೀಸ್ ಇನ್ಸ್ಪೆಕ್ಟರ್ ಮಾಗಡಿ ರಸ್ತೆ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿ ನೇತೃತ್ವದ ತಂಡ ಅಪಹರಣವಾದ ಕೇವಲ ಹನ್ನೆರಡು ಗಂಟೆಗಳೊಳಗಾಗಿ ರಾಕೆಟ್ ವೇಗದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಿಡ್ನ್ಯಾಪ್ ಪ್ರಕರಣವನ್ನು ಸುಖಾಂತ್ಯ ಗೊಳಿಸಿದ್ದಾರೆ.
