ಪೊಲೀಸರೆಂದರೆ ಶಿಸ್ತು ಹಾಗೂ ಒರಟಾದ ದ್ವನಿಗಷ್ಟೇ ಹೆಸರುವಾಸಿ ಅಂತಹ ಪೊಲೀಸರನ್ನೇ ಕಂಡಿರುವುದು ಎಂದಿರಾ ನಿಮ್ಮ ಈ ಕಟು ಧೋರಣೆಗೆ ವಿರೋಧವೆಂಬಂತೆ ಇಲ್ಲೊಬ್ಬರು ಅಧಿಕಾರಿ ಕಲಾದೇವಿಯ ಸುಪುತ್ರನೆನಿಸಿಕೊಂಡಿದ್ದಾರೆ.
ಜಾನಪದ ಗೀತ ರಚನೆಕಾರರು ಹಾಗೂ ಗಾಯಕರು ಆಗಿರುವಂತ ಪೊಲೀಸ್ ಅಧಿಕಾರಿಜ್ಯೋತಿರ್ಲಿಂಗಚಂದ್ರಾಮಹೊನ
ಪ್ರಸ್ತುತ ಸಿಸಿಬಿ ಇನ್ಸ್ಪೆಕ್ಟರ್ ಆಗಿರುವಂತ ಜ್ಯೋತಿರ್ಲಿಂಗ ಹೊನಕಟ್ಟಿ ಯವರು ಬಾಲ್ಯದಿಂದಲೇ ಕಲೆಯನ್ನು ರಕ್ತಗತವಾಗಿಸಿಕೊಂಡಿದ್ದವರು.
ತಂದೆ ಜಾನಪದ ಶ್ರೀಕೃಷ್ಣ ಪಾರಿಜಾತ ಬಯಲಾಟ ಕಲಾವಿದರಾಗಿದ್ದರು, ತಂದೆಯೊಡನೆ ಬಯಲಾಟ ಕಾರ್ಯಕ್ರಮಕ್ಕೆ ಹಾಡಲು ಹೋಗುತಿದ್ದ ಜ್ಯೋತಿರ್ಲಿಂಗರವರು ಕಲೆಯನ್ನು ಆರಾಧಿಸ ತೊಡಗುತ್ತಾರೆ. ಜಾನಪದ ಕಲೆಯೇ ಇಂದು ನನ್ನನ್ನು ಪೊಲೀಸ್ ಇಲಾಖೆಗೆ ಸೇರಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನುತ್ತಾರೆ.
ಎನ್ ಸಿ ಸಿ ಯಲ್ಲಿ ಜಾನಪದ ಹಾಡುಗಳನ್ನು ಹಾಡಲು ಅವಕಾಶ ಪಡೆದುಕೊಂಡಿದ್ದರಿಂದ ಇಲಾಖೆಯಲ್ಲಿ ಕೆಲಸ ಸಿಗುವಂತಾಯಿತು ಎನ್ನುತ್ತಾರೆ. ಕಲಾರಾಧಕರನ್ನು ಕಲಾದೇವಿ ಎಂದು ಕೈ ಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆ.
ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಎಂ ಎ ಮಾಡಿರುವ ಜ್ಯೋತಿರ್ಲಿಂಗ ರವರು ಜಾನಪದ ಬುತ್ತಿ, ಅಪ್ಪ ಹಾಡಿದ ಹಾಡುಗಳು , ಗೋ ಉಳಿದರೆ ನಾವು ಉಳಿದೆವು ಇನ್ನು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ , ಅನೇಕ ರೇಡಿಯೋ ವಾಹಿನಿಗಳಲ್ಲಿ ಭಾಗವಹಿಸಿದ ಹಿರಿಮೆ ಇವರದು.
ಮಾನ್ಯ ಮುಖ್ಯಮಂತ್ರಿಗಳ 2010ನೇ ಸಾಲಿನ ಬಂಗಾರದ ಪದಕ , ಕನಕ ಪ್ರಶಸ್ತಿ , ಸಿರಿಗನ್ನಡ ಕರ್ನಾಟಕ ಭೂಷಣ ಪ್ರಶಸ್ತಿ ,ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಇನ್ನು ಮುಂತಾದವು ಇವರ ಕಲೆಗೆ ಸಂದ ಗೌರವ.
ಖಾಕಿ ತೊಟ್ಟ ಮಾತ್ರಕ್ಕೆ ಕಲಾ ವಂಚಿತರಾಗದೆ ಕಲಾದೇವಿಯ ಸೇವೆಗು ಸಮಯ ನೀಡಿ ಕಲಾದೇವಿಯನ್ನು ಆರಾಧಿಸುತ್ತಿರುವ ಇವರ ಅಮೋಘ ಕಾರ್ಯ ಅವಿರತವಾಗಿ ಸಾಗಲಿ.
ಖಾಕಿಯೊಳಗಿನ ಕಲಾವಿದನ ಸಾಧನೆಯ ಹೆಮ್ಮೆಯ ಹೆಗ್ಗುರುತು.



