ಹೈಗೌಂಡ್ಸ್ ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಲಿನ ಬೂತ್ ಮತ್ತು ಮನೆಯನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ನಗರದ ವಸಂತನಗರದ 3ನೇ ಕ್ಲಾಸ್‌ನಲ್ಲಿರುವ ಹಾಲಿನ ಬೂತ್ ಅಂಗಡಿಯ ಬೀಗ ಹೊಡೆದು ಕಳ್ಳತನ ಮಾಡಿ, ತಿಮ್ಮಯ್ಯ ರಸ್ತೆಯಲ್ಲಿರುವ ರೈಲ್ವೆ ಕ್ವಾರ್ಟಸ್‌ನ ಮನೆಯೊಂದರ ಬೀಗ ಒಡೆದು ಕಳ್ಳತನ ಮಾಡಿಕೊಂಡು ಆರೋಪಿಗಳು ಹೋಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ಆರೋಪಿ ಮತ್ತೂದ್ ಖಾನ್, ಫರಾಜ್ ಅಹ್ಮದ್ ಎಂಬುವವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗ ಡಿ ಸಿ ಪಿ ಶ್ರೀನಿವಾಸ್ ಗೌಡ ಮತ್ತು ಎಸಿಪಿ ಶೇಷಾದ್ರಿಪುರಂ ಮಾರ್ಗದರ್ಶನದಲ್ಲಿ ನಡೆಸಲಾಯ್ತು.. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಸ್ವಾಮಿ ಸಿ.ಬಿ. ರವರ ನೇತೃತ್ವದಲ್ಲಿ, ಪ್ರಕಾಶ್ ಜಿ.ಸಿ. ಪಿ.ಎಸ್.ಐ,. ಸಚಿನ್ ಹೆಚ್.ಪಿ ಪಿ.ಎಸ್.ಐ, ಕು. ಜಾಹೀದಾ ಪಿ.ಎಸ್.ಐ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿತರಿಂದ
ಸುಮಾರು ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು, ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಸ್ಕೂಟರ್ ಹಾಗೂ ಬೀಗ ಹೊಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್ ಅನ್ನು ಜಪ್ತಿ ಮಾಡಲಾಗಿದೆ.
ಹೈ ಗ್ರೌಂಡ್ ಪೊಲೀಸರ ಕಾರ್ಯಾಚರಣೆ
Date: