ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ ಬೃಹತ್ ಪ್ರಮಾಣದ ಎಂಡಿಎಂಎ ಜಪ್ತಿ ಮಾಡಿದ್ದಾರೆ.
ಅಶೋಕನಗರ, ಕಬ್ಬನ್ ಪಾರ್ಕ್ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ 1 ಕೆ.ಜೆ.87 ಗ್ರಾಂ ಎಂಡಿಎಂಎ ,1ಕೆ.ಜೆ.100 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ವಿದೇಶಿ ಪ್ರಜೆಗಳಿಂದ ಬರೋಬ್ಬರಿ ಮಾದಕ ಸಹಿತ 1 ಕೋಟಿ 9 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಸುಡಾನ್,ಯೆಮನ್,ನೈಜೀರಿಯಾ,ಚಾಡ್, ಕೇರಳಾ ಮೂಲದ 11 ಆರೋಪಿಗಳ ಬಂಧನವಾಗಿದೆ.
ಮೊಹಮ್ಮದ್ ಹರೂನ್, ಮೊಹಮ್ಮದ್ ಒರುವಿಲ್, ಮೊಹಮ್ಮದ್ ಇಲಿಯಾಸ್ ಅಬ್ಧುರ್ ಅಬು, ಅಹಮದ್ ಮೊಹಮ್ಮದ್ ಮೂಸಾ, ಮಾನ್ಶನ್ಶೀದ್, ಮೊಹಮ್ಮದ್ ಬಿಲಾಲ್ ,ಜಾನ್ ಪೌಲ್, ಜೋಸೆಫ್ ಬೆಂಜಮಿನ್ ಹಾಗೂ ಇಸ್ಮಾಯಿಲ್ ಬಂಧಿತರು.
ವಿವಿಧ ಕಾರಣಗಳಿಗಾಗಿ ವೀಸಾ ಪಡೆದು ಆರೋಪಿಗಳು ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲಾತಿಗಳನ್ನ ಬಳಸಿ ವಾಸವಿದ್ದರು.ಬಂಧಿತರಿಂದ ಗಾಂಜಾ, ಎಂಡಿಎಂಎ, 2 ಕಾರುಗಳು, ಮೊಬೈಲ್ ಫೋನ್ಸ್, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹಾಗೂ ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರ ಮಾರ್ಗದರ್ಶನದಲ್ಲಿ ,ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಚೈತನ್ಯ ಹಾಗೂ ಅಶೋಕ್ ನಗರ ಇನ್ಸ್ ಪೆಕ್ಟರ್ ಶ್ರೀಕಾಂತ್ ,ಪಿಎಸ್ ಐ ಅಶ್ವಿನಿ ಹಾಗೂ ಇತರೆ ಅಪರಾಧ ವಿಭಾಗ ಸಿಬ್ಬಂದಿ ಭಾಗಿಯಾಗಿದ್ದರು..