ನಕಲಿ ದಾಖಲೆಗಳನ್ನ ಬಳಸಿಕೊಂಡು ಪಾಸ್ ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಸೆರೆ.
ನಕಲಿ ಮಾರ್ಕ್ಸ್ ಕಾರ್ಡ್, ನಕಲಿ ಟಿಸಿ, ನಕಲಿ ಛಾಪಾ ಕಾಗದ, ನಕಲಿ ಆಧಾರ್ ಕಾರ್ಡ್ ಬಳಕೆ.ಎಲ್ಲಾ ನಕಲಿ ದಾಖಲೆಗಳ ಮೂಲಕ ಅಸಲಿ ಪಾಸ್ ಪೋರ್ಟ್ಗಳನ್ನು ಮಾಡಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಸವನಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಂದು ಪಾಸ್ ಪೋರ್ಟ್ ತಯಾರಿಗೆ 45 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಬಸವನಗುಡಿ ಪೊಲೀಸರಿಂದ ಒಟ್ಟು ಎಂಟು ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಇತ್ತೀಚಿಗೆ ಇವರುಗಳು ಮಾಡಿಸಿಕೊಟ್ಟ ಪಾಸ್ ಪೋರ್ಟ್ ಬಳಸಿಕೊಂಡು ಒಬ್ಬ ಕಳ್ಳ ವಿದೇಶಕ್ಕೆ ಹಾರಿದ್ದರ ಬಗ್ಗೆ ಮಾಹಿತಿ ದೊರಕಿದೆ.
ಈ ಪ್ರಕರಣದ ತನಿಖೆ ವೇಳೆ ನಕಲಿ ದಾಖಲಾತಿಗಳನ್ನು ಬಳಸಿಕೊಂಡು ಪಾಸ್ ಪೋರ್ಟ್ ಮಾಡಿಸಿಕೊಡುವ ಜಾಲ ಬೆಳಕಿಗೆ ಬಂದಿದೆ.
ಆರೋಪಿಗಳು ತಾವೇ ಮಾರ್ಕ್ಸ್ ಕಾರ್ಡ್ ಹಾಗೂ ಟಿಸಿ ಸಿದ್ದಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ.ಆಧಾರ್ ಕಾರ್ಡ್ ನಲ್ಲಿರುವ ಪೋಟೊಗಳನ್ನು ಎಡಿಟ್ ಮಾಡಿ ನಕಲಿ ಕಾರ್ಡ್ಗಳನ್ನು ಮಾಡುತಿದ್ದರು ಎನ್ನಲಾಗಿದೆ.
ಭಾರತ, ಶ್ರೀಲಂಕಾ ದೇಶದ ಪಾಸ್ ಪೋರ್ಟ್ ಪಡೆದಿರುವ ಆರೋಪಿಗಳು.
ಪರಿಶೀಲನೆ ವೇಳೆ ಅಸಲಿ ದಾಖಲೆಗಳಂತೆ ಸೃಷ್ಟಿಸಿ ವಂಚನೆ.
ಆರೋಪಿಗಳಿಂದ ನಕಲಿ ಟಿಸಿ, ನಕಲಿ ಆಧಾರ್ ಕಾರ್ಡ್, ನಕಲಿ ಮಾರ್ಕ್ಸ್ ಕಾರ್ಡ್ ಹಾಗೂ ಅಸಲಿ ಪಾಸ್ ಪೋರ್ಟ್ ವಶಕ್ಕೆ.
ದಕ್ಷಿಣ ವಿಭಾಗದ ಡಿಸಿಪಿ ಶ್ರೀ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ, ಎಸಿಪಿ ಶ್ರೀನಿವಾಸ್ ಮೂರ್ತಿ, ಬಸವನಗುಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಮಣ್ಯಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಕಲಿ ದಾಖಲಾತಿಗಳನ್ನು ಬಳಸಿ ಪಾಸ್ ಪೋರ್ಟ್ ಮಾಡಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
