ವಕೀಲರೊಬ್ಬರ ವಗೈರೆಗಳು
ಆಗ ಅಡಿಕೆ ಫಸಲು ಬರುವ ಸಮಯ. ಅಡಿಕೆ ಬೆಳೆಗೆ ಅಳಿಲುಗಳ ಕಾಟ; ಪೀಚುಕಾಯಿಗಳ ರಸ ಹೀರಿ ಕೆಳಗೆ ಉದುರಿಸಿಬಿಡುತ್ತಿದ್ದವು. ಅಡಿಕೆಮರಗಳನ್ನು ಕಾಯುವ ಸರದಿ ನನಗೂ ಇರುತ್ತಿತ್ತು. ತೋಟದ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ತಗಡಿನ ಡಬ್ಬಾವನ್ನು ಜೋರಾಗಿ ಬಾರಿಸುತ್ತ ಓಡಾಡಿದರೆ ಅಳಿಲುಗಳು ಅಡಿಕೆ ಮರಗಳಿಂದ ದೂರ ಓಡುತ್ತಿದ್ದವು. ಅಡಿಕೆ ತೋಟ ಕಾಯಲು ನನ್ನ ವಯಸ್ಸಿನ ಹಲವು ಹುಡುಗರು ಬರುತ್ತಿದ್ದರು. ತೋಟ ಕಾಯುವುದನ್ನು ಬಿಟ್ಟು ಒಮ್ಮೊಮ್ಮೆ ನಾವೆಲ್ಲ ಒಂದೆಡೆ ಸೇರಿ ಹುಡುಗಾಟ ಆಡುತ್ತಿದ್ದೆವು. ಅಷ್ಟರಲ್ಲಿ ಅಳಿಲುಗಳು ಪೀಚು ಕಾಯಿಗಳನ್ನು ಉದುರಿಸಿ ಹೋಗಿಬಿಡುತ್ತಿದ್ದವು. ನನ್ನಪ್ಪ, ದೊಡ್ಡಪ್ಪಂದಿರು ಬಂದು ನೋಡಿಯಾರೆಂದು ಉದುರಿದ ಕಾಯಿಗಳನ್ನೆಲ್ಲ ನೀಗಿಸಿ ಆಚೆ ಎಸೆದು ನನ್ನ ಕಾವಲಿನ ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಿದ್ದೆ.
ಬೇಲೂರು ಶ್ರೀನಿವಾಸ ಅಯ್ಯಂಗಾರ್ ಕೊಲೆ ಕೇಸಿನ ಕಾವು ನಮ್ಮ ಹಳ್ಳಿಯಲ್ಲಿ ಇನ್ನೂ ಆರಿರಲಿಲ್ಲ. ಅಡಿಕೆ ಫಸಲು ಬಂದಿತ್ತು. ನಮ್ಮ ಹಳ್ಳಿಯ ಅರ್ಧದಷ್ಟು ಕುಟುಂಬಗಳಿಗೆ ಅಡಿಕೆ ತೋಟಗಳಿದ್ದವು. ದೊಡ್ಡಬಳ್ಳಾಪುರದಿಂದ ಅಡಿಕೆ ಖರೀದಿದಾರರು ಬರತೊಡಗಿದ್ದರು. ನಮ್ಮ ಮನೆಗೆ ಸಹ ದೊಡ್ಡಬಳ್ಳಾಪುರದ ಖರೀದಿದಾರರು ತಮ್ಮ ಈರ್ವರು ಯುವ ಮಕ್ಕಳೊಂದಿಗೆ ಬಂದರು.
ಮಾತು ವ್ಯಾಪಾರದ ವಿಷಯಕ್ಕೆ ಹೋಗುವ ಮುಂಚೆ ಲಕಾಭಿರಾಮದ ಮಾತುಗಳನ್ನಾಡುವ ವಾಡಿಕೆ ಖರೀದಿದಾರರದು. ಚಹ, ವೀಳ್ಯ, ಅಡಿಕೆ, ಹೊಗೆಸೊಪ್ಪುಗಳು.
10 / ವಕೀಲರೊಬ್ಬರ ವಗೈರೆಗಳು ಅತಿಥ್ಯ ಆಗುತ್ತಿರುವಂತೆಯೇ ನಮ್ಮ ದೊಡ್ಡಪ್ಪ “ನಾ ಹುಟ್ಟಿದಾರಭ್ಯ ಶ್ರೀವಾಸ ಅಯ್ಯಂಗಾರ್‌ರಂಥ ಕೊಲೆ ಕೇಸನ್ನು ಕೇಳಿದ್ದಿಲ್ಲ” ಎಂದರು.
ಅದಕ್ಕೆ ಅಡಿಕೆ ಖರೀದಿದಾರರು. “ಅದ್ಯಾಕೆ ತಿಮ್ಮಣ್ಣನವರೇ, ಜಸ್ ಮೇದಪ್ಪನವರ ಕೊಲೆಗೆ ಯತ್ನಿಸಿ ಜೈಲಿಗೆ ಹೋದ ಎಸ್.ಎಸ್. ರಾಜು ಎಂಬ ರಾಯ ಪ್ರಕರಣವನ್ನು ನೀವು ಕೇಳಿಲ್ವೆ?” ಎಂದು ಆಶ್ಚರ್ಯದಿಂದ ಕೇಳಿದರು.
“ನಮ್ಮ ಹಳ್ಳಿಗೆ ಪೇಪರ್ ಬರ್ತಾ ಇರೋದೆ ಇತ್ತೀಚ್ಚಿ, ಬಾಳಾ ಮುಂಚೇದು ಇರ್ಬೆಕು ಆ ಕೇಸು” ಎಂದು ನಮ್ಮ ದೊಡ್ಡಪ್ಪ ಆ ಕೇಸಿನ ವಿವರ ಹೇಳಿ ಎನ್ನುವಂತೆ ಕೌತುಕ ತೋರಿದರು. ನನ್ನ ಕಿವಿಗಳನ್ನು ಚುರುಕುಗೊಳಿಸಿಕೊಂಡೆ ಲಾಯರ್ ರಾಜು ಪ್ರಕರಣ ಕೇಳಲು.
ಎಲ್.ಎಸ್. ರಾಜು ಬೆಂಗಳೂರಿನ ಖ್ಯಾತ ಕ್ರಿಮಿನಲ್ ಲಾಯರ್; ಅಧಿಕಾರ, ಅಂತಸ್ತು, ಸಂಪತ್ತುಗಳಲ್ಲಿ ತೂಗುಯ್ಯಾಲೆ ಆಡುತ್ತಿದ್ದವರು. ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಸಮೀಪದಲ್ಲಿ ಅರಮನೆಯಂಥ ಮನೆಯೊಳಗೆ ಪುಷ್ಕರಣಿಯನ್ನು ನಿರ್ಮಿಸಿದ್ದರು. ಈ ಪುಷ್ಕರಣಿಯ ಅಕ್ಕಪಕ್ಕಕ್ಕೆ ದೇವರ ಚಿಕ್ಕಗುಡಿಗಳು, ಗುಡಿಗಳ ಮಧ್ಯದ ದಾರಿಯ ಕಲ್ಲುಬಂಡೆಯ ಮೇಲೆ ಛತ್ತು. ಆ ಛತ್ತಿಗೆ ತೂಗುಯ್ಯಾಲೆ… ಲಾಯರ್ ರಾಜು ಸ್ಥಾನ ಮಾಡಿ ಬಂದು ಈ ತೂಗುಯ್ಯಾಲೆಯಲ್ಲಿ ಕೂತು ಎರಡೂ ದೇವರುಗಳಿಗೆ ಹೂ ಅರ್ಪಿಸುತ್ತಿದ್ದರು; ಉಯ್ಯಾಲೆ ಒಂದು ಗುಡಿಯೆಡೆ ತೂಗಿಕೊಂಡಾಗ ಆ ದೇವರಿಗೆ ಪುಷ್ಪ, ಮತ್ತೊಂದೆಡೆ ತೂಗಿಕೊಂಡಾಗ ಇನ್ನೊಂದು ದೇವರಿಗೆ ಪುಷ್ಯ…!
ಮೈಸೂರು ರಾಜ್ಯದ ಹೈಕೋರ್ಟ್ ಚೀಫ್ ಜಸ್ಟಿಸ್ ಆಗಿದ್ದ ರಾವ್‌ಬಹದ್ದೂರ್ ಪಿ. ಮೇದಪ್ಪನವರೊಂದಿಗೆ ಲಾಯ ರಾಜುಗೆ ಮನಸ್ತಾಪ ಆಯಿತು. ಅದಕ್ಕೆ ಕಾರಣ ಅಹಂ.
ಜೀವನದ ಸಂಜೆಯಲ್ಲಿದ್ದ ಅರವತ್ತರ ರಾಜು ಮೇದಪ್ಪನವರನ್ನು ಕೊಲೆಗೈಯ್ಯುವ ಸಂಚು ಹೂಡಿದರು. ಅದಕ್ಕಾಗಿ ದಾರಿ ಹುಡುಕತೊಡಗಿದರು. ಮೇದಪ್ಪನವರ ಕೊಲೆಯ ಗುಂಗಿನ ಗ್ರಹ ಹಿಡಿಯಿತು ಅವರಿಗೆ, ತಾವು ಹಿಡಿದ ಕೇಸುಗಳ ಬಗ್ಗೆ ಯೋಚಿಸಲೂ ಅವಕಾಶವಿರದಂತೆ ಆವರಿಸಿಕೊಂಡಿತು ಕೊಲೆಯ ಕೃಷ…’
ಜಸ್ಟಿಸ್ ಮೇದಪ್ಪನವರ ಮನೆಯಲ್ಲಿ ಕೆಲಸಕ್ಕಿದ್ದ ಹೆಣ್ಣಾಳು ಕೊಲೆಗೆ ದಾರಿಯಾಗಿ ಕಂಡಳು ರಾಜುಗೆ. ಅವಳಿಗೆ ಹಣದ ಆಮಿಷ ಒಡ್ಡಿ ತಮ್ಮ ಬುಟ್ಟಿಗೆ ಹಾಕಿಕೊಂಡರು. ಲಾಯ ರಾಜು ಅವರಿಂದ ಹಣ ಪಡೆದ ಕೆಲಸದ ಹೆಣ್ಣು ವಿಷಕನೆಯಾಗಿದ್ದಾಳೆಂದು ಜಸ್ಟಿಸ್ ಮೇದಪ್ಪನವರಿಗೆ ತಿಳಿಯಲಿಲ್ಲ. ಮೇದಪ್ಪನವರಿಗೆ ನಿತ್ಯ ಬೆಡ್ ಕಾಫಿ ಕೊಡುತ್ತಿದ್ದಳು ಆ ಕೆಲಸದ ಹೆಣ್ಣು. ಆಕೆಯ ಮನಸ್ಸನ್ನು ಕೊಲೆಗೆ ಸಿದ್ಧಗೊಳಿಸಲು ರಾಜು ಹಲವಾರುವಕೀಲರೊಬ್ಬರ ವಗೈರೆಗಳು 1
ದಿವಸಗಳನ್ನೇ ತೆಗೆದುಕೊಂಡರು. ಒಂದು ಮುಂಜಾನೆ ಕೆಲಸದವಳು ಕಾಫಿಯನ್ನು ಮೇದಪ್ಪನವರ ಟೇಬಲ್ ಮೇಲಿಟ್ಟು ಹೋದಳು. ಕಾಫಿ ಕಪ್‌ನ ತುಟಿ ವಿಷನಾಗರವಾಗಿದೆಯೆಂದು ಅರಿಯದ ಜಸ್ಟಿಸ್ ಮೇದಪ್ಪ ಅದನ್ನು ಕುಡಿಯಲೆಂದು ಎತ್ತಿಕೊಂಡರು. ಜಸ್ಟಿಸ್ ಅರಿವಿಗೆ ಬಾರದ್ದು ಅವರ ಮೂಗಿಗೆ ಬಂದಿತು. ಏನೋ ಘಾಟು ವಾಸನೆಯನ್ನು ಗ್ರಹಿಸಿದ ಜಸ್ಟಿಸ್ ಕಾಫಿಯ ಕಪ್ಪನ್ನು ಹಾಗೇ ಟೇಬಲ್ ಮೇಲಿಟ್ಟು ಐದು ನಿಮಿಷ ಬೆಡ್‌ರೂಮಲ್ಲೇ ಶತಪಥ ಹಾಕಿದರು. ಅಷ್ಟರಲ್ಲಿ ಅನುಮಾನ ಬೆಳೆದು ದೊಡ್ಡದಾಗಿತ್ತು. ಕೂಡಲೇ ತಮ್ಮ ಸಾಕುನಾಯಿಯನ್ನು ಕರೆತಂದರು. ಕಾಫಿಯನ್ನು ಇನ್ನಷ್ಟು ಊದಿ ತಣ್ಣಗಾಗಿಸಿದರು. ನಾಯಿಗೆ ಕುಡಿಸಿದರು; ಕೆಲವೇ ಕ್ಷಣಗಳಲ್ಲಿ ನಾಯಿ ವಿಲವಿಲನೆ ಒದ್ದಾಡಿ ನಾಲಿಗೆ ಕಚ್ಚಿಕೊಂಡು ಸೆಟೆದು ಬಿದ್ದಿತು…!
ತಕ್ಷಣವೇ ಪೊಲೀಸರನ್ನು ಕರೆಸಿ ಕೆಲಸದ ಹೆಣ್ಣನ್ನು ಬಂದಿಸಲು ಸೂಚಿಸಿದರು.
ಪೊಲೀಸರ ವಿಚಾರಣೆಯ ರೀತಿ ಶೈಲಿಗಳಿಗೆ ಬೆದರಿ ಬೆವತುಹೋದ ಕೆಲಸದಾಕೆ ಸತ್ಯವನ್ನು ಹೊರಹಾಕಿದಳು. ಕೆಲಸದಾಕೆಯನ್ನು ಆರೋಪಿ ಮಾಡದೆ ಅಪೂವರ್‌ಅನ್ನಾಗಿ ಮಾಡಿ ಲಾಯರ್ ರಾಜುವನ್ನು ಆರೋಪಿಯನ್ನಾಗಿ ಮಾಡಿದರು.
ತಮ್ಮ ಕೇಸನ್ನು ತಾವೇ ವಾದಿಸಿಕೊಳ್ಳುವುದಾಗಿ ಘೋಷಿಸಿದ ರಾಜು ಈ ಕೇಸು ಮೈಸೂರು ರಾಜ್ಯದಲ್ಲಿ ನಡೆಯುವುದು ಬೇಡವೆಂದು ವಿನಂತಿಸಿಕೊಂಡರು. ಕೇಸು ಬಾಂಬೆಗೆ ಟ್ರಾನ್ಸ್‌ಫರ್ ಆಯಿತು. ಲಾಯರ್ ರಾಜು ತಮ್ಮ ಕೊಲೆಗೆ ಏಕೆ ಪ್ರಯತ್ನಿಸಿದರೆಂದು ಜಸ್ಟಿಸ್ ಮೇದಪ್ಪ ಹೇಳಲೇ ಇಲ್ಲ. ರಾಜು ಸಹ ತಾನು ಕೊಲೆಗೆ ಏಕೆ ಪ್ರಯತ್ನಿಸಿದರೆಂದು ಹೇಳಲೇ ಇಲ್ಲ. ರಾಜು ಸಹ ತಾನು ಕೊಲೆಗೆ ಪ್ರಚೋದಿಸಲಿಲ್ಲವೆಂದೇ ಕೊನೆಯವರೆಗೂ ವಾದಿಸಿದರೇ ವಿನಃ ಮೂಲ ಕಾರಣವನ್ನು ಬಯಲಿಗಿಟ್ಟು ತಮ್ಮ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ.
ಕೆಲಸದಾಕೆಯ ಸಾಕ್ಷಿ, ರಾಜು ಅವಳಿಗೆ ನೀಡಿದ್ದ ಆಮಿಷದ ಹಣ, ನಾಯಿತ ಪೋಸ್ಟ್‌ಮಾರ್ಟಮ್ ರಿಪೋರ್ಟ್ ಇವೆಲ್ಲ ರಾಜುಗೆ ಆಜೀವ ಸಜೆಯ ತೀರ್ಪು ನೀಡಿದವು.
ಬೆಂಗಳೂರು ಸೆಂಟ್ರಲ್ ಜೈಲು ಸೇರಿದ ರಾಜು ಹೈಕೋರ್ಟ್, ನಂತರ ಸುಪ್ರೀಂಕೋರ್ಟುಗಳಲ್ಲಿ ಅಪೀಲು ಮಾಡಿಕೊಂಡರು. ಅಲ್ಲೆಲ್ಲ ಸೆಷನ್ಸ್ ನ್ಯಾಯಾಲಯದ ತೀರ್ಪು ಕನ್‌ಫರ್ಮ್ ಆಯಿತು. ಬೆಂಗಳೂರಿನ ಸೆಂಟ್ರಲ್ ಜೈಲಲ್ಲಿರುವಾಗಲೇ ಅದೇನೋ ಕಾಯಿಲೆ ಬಂದು ರಾಜು ಮರಣವನ್ನಪ್ಪಿದರು.
ಈ ಕೇಸು ನಡೆಸುವಾಗ ಚಾಗಲಾ ಅವರು ಬಾಂಬೆಯ ಸೆಷನ್ಸ್ ನ್ಯಾಯಾಧೀಶರಾಗಿದ್ದರು, ನಂತರ ಇವರು ಕೇಂದ್ರ ಸರ್ಕಾರದಲ್ಲಿ ಕಾನೂನು ಮಂತ್ರಿಯೂ12 / ವಕೀಲರೊಬ್ಬರ ವಗೈರೆಗಳು
ರಾಜು ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು. ಆಸ್ತಿ ಅವರ ಕೈಗೆ ದಕ್ಕಲಿಲ್ಲ. ಅವರಿಬ್ಬರೂ ಲಾರಿ ಡ್ರೈವರ್‌ಗಳಾದರೂ ಎಂದು ಬೆಂಗಳೂರಿನಲ್ಲಿ ಜನ ಮಾತಾಡಿಕೊಳ್ಳತೊಡಗಿದರು…
ಈ ಕಥೆ ಕೇಳಿ ಲಾಯರ್ ಆಗಬೇಕೆನ್ನುವ ಆಸೆ ಹೊತ್ತುಕೊಂಡು ಕೂತಿದ್ದ ನನಗೆ ಭಯ, ನಡುಕಗಳು ಶುರುವಾಗಿ ಬೆವತುಕೊಂಡ. ಕ್ರಿಮಿನಲ್ ಲಾಯರ್ ಶ್ರೀನಿವಾಸ ಅಯ್ಯಂಗಾರ್‌ರಂತೆಯೇ ಈ ಲಾಯರ್ ರಾಜು ಸಹ ಜೀವ ಕಳೆದುಕೊಂಡಿದ್ದ. ಲಾಯರ್ ಆಗುವುದೋ, ಬಿಡುವುದೋ ಎನ್ನುವ ನನ್ನೆದೆಯ ತಳಮಳವನ್ನು ಯಾರಿಗಾದರೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಹಾಗೆ ಹೇಳಿಕೊಳ್ಳಲು ಹೋದರೆ ‘ಓ ಇವನೊಬ್ಬ ಈಗಲೇ ಲಾಯರಾಗೋಕೆ ಹೊಂಟಿದಾನೆ’ ಎನ್ನುವ ಲೇವಡಿ, ಅಣಕಗಳನ್ನು ಎದುರಿಸಬೇಕಾಗುತ್ತಿತ್ತು.
ಒಂದು ಚೀಟಿಯಲ್ಲಿ ಲಾಯರ್ ಆಗುವುದು ಸರಿ ಎಂದೂ ಮತ್ತೊಂದು ಚೀಟಿಯಲ್ಲಿ ಸರಿಯಲ್ಲ ಎಂದೂ ಬರೆದು ಅವೆರಡನ್ನೂ ಸುರುಳಿ ಸುತ್ತಿ ಒಂದು ಡಬ್ಬದಲ್ಲಿ ಹಾಕಿ ಅಲುಗಾಡಿಸಿದೆ. ಮನೆದೇವರು ಆಂಜನೇಯನ ಹೆಸರು ಹೇಳಿ ಕಣ್ಮುಚ್ಚಿಕೊಂಡು ಡಬ್ಬದೊಳಗಿಂದ ಒಂದು ಚೀಟಿಯನ್ನು ಎತ್ತಿಕೊಂಡ.
ಲಾಯರ್ ಆಗೋದು ಸರಿ ಎಂದು ಬರೆದ ಚೀಟಿ ಕೈಯಲ್ಲಿತ್ತು…