ಬೆಂಗಳೂರು ನಗರದ ಹೆಣ್ಣೂರು ಪೊಲೀಸ್ ಠಾಣೆಯ ಸರಹದ್ದಿನ ಮನೆಗಳಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವ ಕುಖ್ಯಾತ ಕಳ್ಳನಾದ ಕಾರ್ತಿಕ್ ಅಲಿಯಾಸ್ ಎಸ್ಕೆಪ್ ಕಾರ್ತಿಕ್ ನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಪ್ರಕೃತಿ ಲೇಔಟ್, ಕಲ್ಯಾಣ ನಗರ ಮೊಸ್ಟ್ ಹೆಣ್ಣೂರು ಬೆಂಗಳೂರು ನಗರ, ಎಂಬುವನನ್ನು ಹೆಣ್ಣೂರು ಪೊಲೀಸರು ದಸ್ತಗಿರಿ ಮಾಡಿ ಆರೋಪಿಯಿಂದ ಹೆಣ್ಣೂರು ಪೊಲೀಸ್ ಠಾಣೆಯ ಮೂರು ಮನೆ ಕಳ್ಳತನ ಪ್ರಕರಣಗಳಲ್ಲಿನ ಒಟ್ಟು 278 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಮಾನತು ಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ಅಂದಾಜು
ಸುಮಾರು 12,51,000/-ರೂ ಗಳಾಗಿರುತ್ತವೆ.
ಪೂರ್ವ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಡಾ|| ಭೀಮಾಶಂಕ ಎಸ್ ಗುಳೇದ್ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಮತ್ತು ಶಲಿಕೇಶಿ ನಗರ ಉಪ- ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ನಿಂಗಪ್ಪ ಬಿ ಸಕ್ತಿ ಮತ್ತು ಶ್ರೀ.: ಅಬ್ದುಲ್ ಖಾಧರ್ ರವರ ನೇತೃತ್ವದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಎಂ. ಮಂಜುನಾಥ ರವರ ಮುಂದಾಳತ್ವದಲ್ಲಿ, ಶ್ರೀ. ನಿಂಗರಾಜು ಕೆ.ಹೆಚ್. ಪಿ.ಎಸ್.ಐ. ಶ್ರೀ. ಪ್ರತಾಪ್, ಪಿ.ಎಸ್.ಐ, ಶ್ರೀ. ರಂಜೀತ್ ಪಿ.ಎಸ್.ಐ ಹಾಗೂ ಸಿಬ್ಬಂಧಿಯವರಾದ ಶ್ರೀ. ಅಬ್ದುಲ್ ಹಮೀದ್ ಹೆಚ್ ಸಿ-8956, ಶ್ರೀ, ವಿಠಲ್ ಹೆಚ್ ಸಿ-1193, ಶ್ರೀ. ಲಕ್ಷ್ಮಣ ರಾಠೋಡ್ ಹೆಚ್ ಸಿ-0133, ಶ್ರೀ. ಗಣೇಶ್.ಕ ಹೆಚ್.ಸಿ-9487, ೨, ಮಹೇಶ್ ಅಂಗಳ ಪಿ.ಸಿ-14081, ಶ್ರೀ: ಶಿವಾನಂದ ಬಿರಾದಾರ ಪಿ.ಸಿ-14092, ಶ್ರೀ. ಆನಂದ ಜೈನಾರ ಪಿ.ಸಿ-
14097, ಶ್ರೀ. ಸಿದ್ದಲಿಂಗೇಶ ಪಿ.ಸಿ-20472 ಮತ್ತು ಟೆಕ್ನಿಕಲ್ ವಿಭಾಗದ ನಾಗರಾಜು ರವರು ಆರೋಪಿ ಕಳ್ಳತನ ಮಾಡಿ, ಮಾರಾಟ ಮಾಡಿದ್ದ ಚಿನ್ನದ ಒಡವೆಗಳನ್ನು ಅಮಾನತು
ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಮಾನ್ಯ ಅಪರ ಪೊಲೀಸ್ ಆಯುಕ್ತರು (ಪೂರ್ವ) ಬೆಂಗಳೂರು, ನಗರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.