ವಾಹನ ಸವಾರರಿಗೆ ನನ್ನದೊಂದು ಕೋರಿಕೆ…ಬರೆದವರು ಯಾರೋ ತಿಳಿದಿಲ್ಲ ಆದರೆ ಒಳ್ಳೆಯದನ್ನೇ ಬರೆದಿದ್ದಾರೆ ದಯಮಾಡಿ ಕೆಳಗೆ ಬರೆದಿರುವ ಸಾಲುಗಳನ್ನ ಒಮ್ಮೆ ಓದಿ
ವಾಹನ ಸವಾರರೆ ಡಿಮ್-ಡಿಪ್ ಮಾಡಿ ಜೀವ ಕಾಪಾಡಿ!
- ವಾಹನ ಗಳಲ್ಲಿ ಎಲ್ಇಡಿ ಲೈಟ್ ಬಳಸಬೇಡಿ
- ರಾತ್ರಿ ಚಲಿಸುವಾಗ ಡಿಮ್-ಡಿಪ್ ಮಾಡಿ ಅಪಘಾತ ತಡೆಯಿರಿ
- ಕುಟುಂಬದ ಹೊಣೆಹೊತ್ತ ಅದೆಷ್ಟೋ ಜೀವಗಳು ನಿಮ್ಮ ಮುಂದಿರುತ್ತವೆ
- ಒಂದು ಸಂಸಾರದ ಸರ್ವನಾಶಕ್ಕೆ ನೀವು ಕಾರಣರಾಗದಿರಿ
ಜನರ ದಿನನಿತ್ಯ ಚಟುವಟಿಕೆಗಳಲ್ಲಿ ಸಮಯಕ್ಕನುಗುಣವಾಗಿ ಸೇರುವ ಜಾಗಕ್ಕೆ ಸೇರಲು ಸಹಕರಿಸುವ ವಾಹನಗಳು ನಿಜಕ್ಕೂ ನಮ್ಮ ಜೀವನದ ಒಂದು ಭಾಗವೇ ಆಗಿರುತ್ತವೆ. ಈ ವಾಹನ ಗಳಿಂದ ಅದೆಷ್ಟು ಉಪಯೋಗವಿದೆಯೋ ಅಷ್ಟೇ ಭೀಕರವಾಗಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಬೆಳಿಗ್ಗೆ ಬೇಗ ಗಡಿಬಿಡಿಯಲ್ಲೇ ರೆಡಿ ಆಗಿ ಮನೆಯಿಂದ ಹೊರಟು ಟ್ರಾಫಿಕ್ ನಲ್ಲಿ ಸಿಲುಕಿಕೊಂಡು 5 ನಿಮಿಷ ಹೆಚ್ಚು ಕಡಿಮೆಯಾದರು ಕೆಲಸದ ಜಾಗಕ್ಕೆ ತಲುಪಿ ಅಂತೂ ಬಂದೆವಲ್ಲ ಅಂತ ನಿಟ್ಟುಸಿರು ಬಿಡುತ್ತಾರೆ. ದಿನದ ಹೆಚ್ಚು ಅವಧಿಯನ್ನು ಕೆಲಸದ ಜಾಗದಲ್ಲೇ ಕಳೆದು ಸಂಜೆ ಕತ್ತಲೆ ಯಾಗುತ್ತಿದಂತೆ ಕೆಲಸ ಮೂಡ್ ನಿಂದ ಹೊರಬಂದು ಮನೆಯಲ್ಲಿರುವ ಕುಟುಂಬಸ್ಥರ ಜೊತೆ ಒಂದು ಸ್ವಲ್ಪ ಹೊತ್ತಾದರೂ ಆರಾಮಾಗಿ ಟೈಮ್ ಕಳೆಯೋಣ ಅಂತ ಹೊರಟಾಗ ಮತ್ತೆ ನಮಗೆ ಎದುರಾಗುವುದು ನಮ್ಮಂತೆ ಮನೆಗೆ ಹೋರಾಟ ಅನೇಕ ವಾಹನ ಸವಾರರು. ರಾತ್ರಿ ಯಾಗುತ್ತಿದಂತೆ ಸೀರಿಯಲ್ ಸೆಟ್ ಬೆಳಕಿನಂತೆ ರಸ್ತೆಯಲ್ಲಿ ಕಾಣಸಿಗುವ ವಾಹನಗಳು ಆಕಾಶದಲ್ಲಿ ಇರುವ ನಕ್ಷತ್ರನಾದ್ರೂ ಎಣಿಸಬಹುದು ಈ ವಾಹನ ಗಳನ್ನ ಎಣಿಸೋಕೆ ಆಗಲ್ಲ ಅನ್ನೋ ಭಾವನೇನೇ ಮೂಡಿಸಿ ಬಿಡುತ್ತೆ. ಹೀಗೆ ರಸ್ತೆಯಲ್ಲಿ ರಾತ್ರಿ ಹೊರಟಾಗ ಒಂದೊಂದು ವಾಹನದ ಬೆಳಕು ಒಂದೊಂದು ಬಣ್ಣ ಚಿತ್ರ ವಿಚಿತ್ರದ ಬೆಳಕು ಕಣ್ಣೇ ಬಿಡಲಾಗದಷ್ಟು ಪೋಕಸ್. ನಮ್ಮ ವಾಹನ ಕಂಡರೂ ಡಿಮ್-ಡಿಪ್ ಕೊಡದೆ ಚಮ್ಕಾಯಿಸುವ ಕೆಲವು ವಾಹನ ಸವಾರರು ನಮಗೆ ಕೆಲವು ಕ್ಷಣ ನರಕವನ್ನೇ ಕಣ್ಣ ಮುಂದೆ ತಂದೊಡ್ಡುತ್ತಾರೆ.ಸಾದಾರಣ ಹೆಡ್ ಲೈಟ್ ಅನ್ನು ತೆಗೆದು ವಾಹನಗಳಿಗೆ ಭಯಾನಕ ಎಲ್ಇಡಿ ಗಳನ್ನೂ ಹಾಕಿ ಒಂದು ಕ್ಷಣ ರಸ್ತೆಯೇ ಕಾಣದಂತೆ ಕಣ್ಣಿಗೆ ಕುಕ್ಕುತ್ತಾರೆ.ಇದರಿಂದ ಅದೆಷ್ಟೋ ಜೀವಗಳು ಬಲಿಯಾಗಿರುವ ಉದಾಹರಣೆಗಳು ಇವೆ. ಶೋಕಿ ಗೋಸ್ಕರ ಬಣ್ಣ ಬಣ್ಣದ ಬೆಳಕು ಹಾಕಿಕೊಂಡು ಮುಂದೆ ವಾಹನ ಕಂಡರೂ ಡಿಮ್-ಡಿಪ್ ಮಾಡದೇ ಇರುವ ಅದೆಷ್ಟೋ ಯಮರೂಪಿ ವಾಹನ ಸವಾರರು ದಿನ ನಿತ್ಯ ನಮಗೆ ಎದುರಾಗುತ್ತಾರೆ.
ವಾಹನ ಸವಾರರೆ ಕೆಲಸದ ಒತ್ತಡದಿಂದ ಹೊರಬಂದು ತನ್ನ ಅಪ್ಪ,ಅಮ್ಮ,ಅಕ್ಕ,ತಂಗಿ,ಅಣ್ಣ,ತಮ್ಮ,ಹೆಂಡತಿ,ಮಕ್ಕಳೊಡನೆ ಕಾಲಕಳೆಯುವ ಅಂತ ತಮ್ಮ ಪುಟ್ಟ ಸಂಸಾರದ ನೆನಪು ಮಾಡಿಕೊಳ್ಳುತ್ತ ಕಣ್ಣಿನಲ್ಲಿ ಹಲವಾರು ಕನಸು ತುಂಬಿಕೊಂಡ ಸಂಸಾರದ ಹೊಣೆಹೊತ್ತ ಅದೆಷ್ಟೋ ಜೀವಗಳು ನಿಮಗೆ ರಾತ್ರಿ ರಸ್ತೆಯಲ್ಲಿ ಎದುರಾಗುತ್ತವೆ ನಿಮ್ಮ ವಾಹನದ ಬೆಳಕಿನಿಂದ ಕಣ್ಣು ಮುಚಿದ್ದ ಅವರು ಮತ್ತೆ ಕಣ್ಣು ತೆರೆಯುತ್ತಾರಾ ಎಂಬುದು ದೇವರಿಗೆ ಮಾತ್ರ ತಿಳಿದಿರುತ್ತದೆ ಅಂತ ಜೀವಗಳನ್ನು ಬಲಿ ತೆಗೆದುಕೊಂಡು ಒಂದು ಕುಟುಂಬದ ಸರ್ವನಾಶಕ್ಕೆ ನೀವು ಕಾರಣರಾಗಬೇಡಿ ರಾತ್ರಿ ವೇಳೆ ವಾಹನ ಚಲಾಯಿಸುವಾಗ ಡಿಮ್-ಡಿಪ್ ಮಾಡಿ ಸುಗಮ ಸಂಚಾರಕ್ಕೆ ಸಹಕರಿಸಿ.