22.3 C
Bengaluru
Thursday, June 20, 2024

ಅನಾಥ ಶವಗಳಿಗೆ ಮುಕ್ತಿದಾತಾ- ಈ ನಮ್ಮ ಜನಸ್ನೇಹಿ ಪೊಲೀಸ್

Date:

“ಹುಟ್ಟು ಉಚಿತ ಸಾವು ಖಚಿತ”
ಭೂಮಿ ಮೇಲೆ ಜನಿಸಿದ ಪ್ರತಿಯೊಂದು ಜೀವಿಗೂ ಮರಣ ಖಚಿತ ಎಂಬುದು ತಿಳಿದಿದ್ದರೂ, ಸಾವಿನ ನಂತರ ಜೊತೆಯಲ್ಲೇ ಇದ್ದ ವ್ಯಕ್ತಿಯನ್ನು ‘ಹೆಣ’ ಎಂದು ಸಂಭೋದಿಸುವ ನಾವುಗಳು ಅಂತ್ಯ ಸಂಸ್ಕಾರಕ್ಕೆ ಹತ್ತು ಹಲವು ಕಂದಾಚಾರಗಳ ಮಡಿ ಮೈಲಿಗೆಗಳ ನೀತಿ ನಿಯಮಗಳ ಸುಳಿಗೆ ಸಿಲುಕಿ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದರೆ ಮನಸ್ಸು ಭಾರವೆಂತಲೂ, ತಮ್ಮ ಸ್ವಂತದವರ,ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೇ ಹೋಗಲು ನೂರು ಭಾರಿ ಯೋಚಿಸುವವರ ನಡುವೆ ಅನಾಥ ಹೆಣಗಳ ಸ್ಥಿತಿಯೇನು ಎಂಬುದನ್ನು ಎಂದಾದರೂ ಯೋಚಿಸಿದ್ದೇವೆಯೇ? ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವವರಾರು? ಅನಾಥ ಶವಗಳ ಸಂಸ್ಕಾರದ ಕಾಳಜಿ ವಹಿಸುವವರಾರು?
ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುವುದು ಸಹಜ
ಈ ಎಲ್ಲಾ ಪ್ರಶ್ನೆಗೆ ಉತ್ತರ ಖಾಕಿ
ಏನಿದು ಖಾಕಿಗೂ ಅನಾಥ ಶವಗಳಿಗೂ ಏನು ಸಂಬಂಧ ಎಂದು ಯೋಚಿಸುವುದಾದರೆ ಇಲ್ಲೊಬ್ಬರು ಖಾಕಿಯೊಳಗಿನ ಮಾನವೀಯ ಮೂರ್ತಿ ಯೊಬ್ಬರು ಅನಾಥ ಶವಗಳಿಗೆ ಸದ್ಗತಿ ತೋರಿಸುವ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಪೊಲೀಸರೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಖಾಕಿಯೊಳಗೊಬ್ಬ ಮಾನವೀಯ ಮೌಲ್ಯಗಳುಳ್ಳ ಮನುಷ್ಯನಿದ್ದಾನೆ ಎಂಬುದನ್ನು ಅನೇಕ ಭಾರಿ ಸಾಬೀತು ಪಡಿಸಿದ್ದಾರೆ.
ಈ ಭಾರಿ ಈ ಮಾನವೀಯ ಕಾರ್ಯಕ್ಕೆ ಶ್ಲಾಘನೆ ಪಡೆಯುತ್ತಿರುವವವರು ಪ್ರಸ್ತುತ ಕಬ್ಬನ್ ಪಾರ್ಕ್ ಎಸಿಪಿ ಐ ಒ ಅಸಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಂದೀಶ್ ರವರು. ಮಾನವೀಯ ಕಾರ್ಯಕ್ಕೆ ಪದವಿ ಅಧಿಕಾರ ಅಂತಸ್ತು ಹಣ ಯಾವುದೂ ಮುಖ್ಯವಲ್ಲ ಸಹಾಯಮಾಡುವ ಗುಣ ಮಾತ್ರ ಮುಖ್ಯ ಎಂಬುದನ್ನು ನಂದೀಶ್ ರವರು ಸಾಬೀತು ಪಡಿಸಿದ್ದಾರೆ.
ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಮುನ್ನೂರಕ್ಕೂ ಅಧಿಕ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿರುವ ಗರಿಮೆ ಇವರದು. ಒಂದು ಶವ ಸಂಸ್ಕಾರಕ್ಕೆ ಎರಡೂವರೆ ಸಾವಿರದಿಂದ ಮೂರು ಸಾವಿರ ವೆಚ್ಚ ತಗುಲುತ್ತಿತ್ತು ಆ ಹಣವನ್ನು ತಮ್ಮ ಸಂಬಳದ ಮೂಲಕ ಭರಿಸುತಿದ್ದ ನಂದೀಶ್ ರವರು ಅನಾಥ ಶವಗಳ ಸಂಸ್ಕಾರವನ್ನು ಅಚ್ಚುಕಟ್ಟಾಗಿ ಪೂಜೆ ಮಾಡಿ ಸದ್ಗತಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ, ಅವು ಅನಾಥ ಶವಗಳು ಎಂಬ ಕೀಳಿರಿಮೆ ತೋರದೆ ತಾವೇ ಮುಂದೆ ನಿಂತು ಶವ ಸಂಸ್ಕಾರ ನೆರವೇರಿಸುತ್ತಿದ್ದರು.
ಇವರು ಕೇವಲ ಮಾನವೀಯ ಕಾರ್ಯಕ್ಕೆ ಮಾತ್ರವಲ್ಲ ಇಲಾಖೆಯಲ್ಲಿ ಸೇವೆಗೂ ಸಹ ಎತ್ತಿದ ಕೈ. ಕೋವಿಡ್ ಸಮಯದಲ್ಲಿ ಒಂದು ದಿನವೂ ಸಹ ರಜೆ ಪಡೆಯದೇ,ಕಾಯಕವೇ ಕೈಲಾಸ ಎಂಬಂತೆ ಕಾರ್ಯ ನಿರ್ವಹಿಸಿದ್ದರು. ಕೋವಿಡ್ ಸಮಯದಲ್ಲಿ ದಾನಿಗಳಿಂದ ಬಂದಂತಹ ಹಣ್ಣು ಹಂಪಲು ದಿನಸಿ ಸಾಮಗ್ರಿಗಳನ್ನು ಬೀದಿ ಬದಿಯ ನಿರ್ಗತಿಕರ ಹೊಟ್ಟೆ ತುಂಬುವಂತೆ ನೋಡಿಕೊಂಡವರು ಈ ನಂದೀಶ್. ಇನ್ನು ಪತ್ತೇದಾರಿಕೆಯಲ್ಲೂ ಇವರು ಮುಂದು ಡ್ರಗ್ ಜಾಲವನ್ನು ಭೇದಿಸಿ
112ಕೇಸಿನ 176 ಪೆಡ್ಲೆರ್ ಗಳನ್ನು ಕಂಬಿ ಹಿಂದೆ ನಿಲ್ಲಿಸಿದ ಹಿರಿಮೆ ಇವರದು.ಮಾರ್ನಿಂಗ್ ಗ್ಲೋರಿ ಡ್ರಗ್ ಇದೆ ಎಂದು ರಾಜ್ಯದಲ್ಲಿ ಮೊದಲು ಪತ್ತೆ ಮಾಡಿದ್ದು ಇವರೇ, ಇವರ ಸಾಧನೆಗಳ ಪಟ್ಟಿ ಒಂದೆರಡಲ್ಲ ಶ್ರುತಿ ಹರಿಹರನ್ ಮೀಟು ಪ್ರಕರಣ , ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ,ಮಣಿಪಾಲ್ ಆಸ್ಪತ್ರೆ 78ಕೋಟಿ ಹಗರಣ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವುದು ಗಮನಾರ್ಹ ವಿಷಯ. ಕರ್ತವ್ಯಕ್ಕೂ ಸೈ ಸಮಾಜ ಸೇವೆಗೂ ಜೈ ಎಂದಿರುವ ಇಂತಹ ಸಮಾಜಮುಖಿ ಪೊಲೀಸ್ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿ ನಂದೀಶ್.
ಜನಸ್ನೇಹಿ ಪೊಲೀಸ್ ಹೀರೋ ನಂದೀಶ್ರ ಕಿರುಪರಿಚಯ : ಚಿಕ್ಕಮಗಳೂರು ಜಿಲ್ಲೆಯ ಗ್ರಾಮದ ವ್ಯವಸಾಯ ಕುಟುಂಬದಿಂದ ಬಂದಂತಹ ನಂದೀಶ್ ರವರು ಕಡು ಬಡತನದಿಂದಲೇ ಜೀವನ ಕಟ್ಟಿ ಕೊಂಡವರು,ಬಡತನದ ಭೇಗೆ ಕಷ್ಟ ಸುಖದ ಅರಿವಿರುವ ನಂದೀಶ್ ರವರಿಗೆ ಅನಾಥರ, ನಿರ್ಗತಿಕರ, ಬಗ್ಗೆ ಕಾಳಜಿ ಹೆಚ್ಚು.
ಎಂ.ಕಾಮ್, ಎಲ್.ಎಲ್.ಬಿ ಪದವೀಧರರಾದ ನಂದೀಶ್ ರವರು ಉಜಿರೆಯ ರತ್ನ ಮಾನಸ ಹಾಸ್ಟೆಲ್ ನಲ್ಲಿ ಉಳಿದುಕೊಂಡೆ ವಿದ್ಯಾಭ್ಯಾಸ ಮಾಡಿದವರು ಹಾಸ್ಟೆಲ್ ನಿಯಮದಂತೆ ಲೈಫ್ ಸ್ಕಿಲ್ಸ್ ಎಜುಕೇಶನ್ ಮುಕಾಂತರ ಭವಿಷ್ಯ ರೂಪಿಸಿಕೊಂಡವರು. 2021ನೇ ಸಾಲಿನ ಸಿಎಂ ಮೆಡಲ್ಗೂ ಕೂಡ ಭಾಜನರಾದವರು.
ಇಂತಹ ಸಹೃದಯಿ ,ನಿಷ್ಠಾವಂತ, ಮಾನವೀಯ ಮೌಲ್ಯಗಳುಳ್ಳ, ಸಹಜ ಸ್ವಾಭಾವಿಕ, ಎಲೆ ಮರೆ ಕಾಯಿಯಂತೆ ತಮ್ಮ ಸಮಾಜಮುಖಿ ಕಾರ್ಯವನ್ನು ಪ್ರಚಾರವಿಲ್ಲದೆ, ಪ್ರಚಾರ ಬಯಸದೇ, ಸದ್ದಿಲ್ಲದೇ ತಮ್ಮ ಕರ್ತವ್ಯದ ಒಂದು ಭಾಗದಂತೆ ನಿರ್ವಹಿಸುತ್ತಿರುವ ಇಂತಹ ಸರಳ ಸಜ್ಜನ ಪೊಲೀಸ್ ಅಧಿಕಾರಿಯನ್ನ ಪಡೆದು ನಾವೇ ಧನ್ಯರು.
ನಿಮ್ಮ ಸಮಾಜಮುಖಿ ಕಾರ್ಯಕ್ಕೆ ನಮ್ಮದೊಂದು ಸಲಾಂ??

Latest Stories

1 COMMENT

LEAVE A REPLY

Please enter your comment!
Please enter your name here