ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳ್ಳತನ ದೂರನ್ನು ದಾಖಲಿಸಿ ತನಿಖೆ ಕೈಗೊಂಡ ನಂತರ ಈ ಪ್ರಕರಣದ ತನಿಖೆಗೆ ಇಳಿದ ಮಹದೇವಪುರ ಪೊಲೀಸರು ಆರೋಪಿಯಾದ ಪ್ರಶಾಂತ್.ಎಸ್ @ ಡಾಲಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಮೇಲ್ಕಂಡ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಮಹದೇವಪುರ ಪೊಲೀಸ್ ಠಾಣೆಯ 2 ಪ್ರಕರಣಗಳು, ವೈಟ್ ಫೀಲ್ಡ್ ಪೊಲೀಸ್ ಠಾಣೆಯ 3 ಪ್ರಕರಣಗಳು, ಕೆ.ಆರ್.ಪುರಂ ಪೊಲೀಸ್ ಠಾಣೆಯ 3 ಪ್ರಕರಣಗಳು, ಸೋಲದೇವನಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ, ಸರ್ಜಾಪುರ ಪೊಲೀಸ್ ಠಾಣೆಯ 2 ಪ್ರಕರಣಗಳು, ತುಮಕೂರು ನ್ಯೂ ಎಕ್ಸ್‌ಟೆಂಷನ್ ಪೊಲೀಸ್ ಠಾಣೆಯ 1 ಪ್ರಕರಣ, ದಾಬಸ್ ಪೇಟೆ ಪೊಲೀಸ್ ಠಾಣೆಯ 1 ಪ್ರಕರಣ ಹಾಗೂ ಇತರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು ಸುಮಾರು 25,00,000/-ರೂಗಳು ಬೆಲೆ ಬಾಳುವ 42 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿರುತ್ತದೆ.
ಮಾನ್ಯ ಶ್ರೀ. ಗಿರೀಶ್.ಎಸ್, ಡಿ.ಸಿ.ಪಿ, ವೈಟ್ ಫೀಲ್ಡ್ ವಿಭಾಗರವರ ಮಾರ್ಗದರ್ಶನದಲ್ಲಿ, ಮಾನ್ಯ ಶ್ರೀ. ಶಾಂತಮಲ್ಲಪ್ಪ, ಎ.ಸಿ.ಪಿ ವೈಟ್ ಫೀಲ್ಡ್ ಉಪ ವಿಭಾಗರವರ ನಿರ್ದೇಶನದ ಮೇರೆಗೆ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಪ್ರಶಾಂತ್.ಆರ್.ವರ್ಣಿ ಮತ್ತು ಪಿ.ಎಸ್.ಐ ಶ್ರೀ. ಹರಿನಾಥಬಾಬ ಎಸ್.ಆ ಹಾಗೂ ಸಿಬ್ಬಂದಿಗಳಾದ ಶ್ರೀ. ಎಸ್ .ನಂಜುಂಡೇಶ್ವರ, ಶ್ರೀ ಭಾಸ್ಕರ್ ಕಂಬಾರ, ಶ್ರೀ. ಚಂದ್ರಪ್ಪ, ಶ್ರೀ, ರಾಜೇಂದ್ರ, ಶ್ರೀ. ಭೀಮ್, ಶ್ರೀ. ನಂಜಯ್ಯ, ಶ್ರೀ. ಲಕ್ಷಣ್ ಗಾಯಕ್ ವಾಡ್, ಶ್ರೀ. ಸಂಜಯ್ ರಾಥೋಡ್, ಶ್ರೀ. ಬಸವರಾಜ್ ಶ್ರೀ. ಸಂತೋಷ್ ಕರ್ಜಗಿ ರವರುಗಳು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಹಾಗೂ 42 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.