ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಕುಖ್ಯಾತ ದ್ವಿಚಕ್ರ ವಾಹನ ಕಳವು ಮಾಡುವ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ವರ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ :20-10-2022 ರಂದು ಆರೋಪಿಗಳಾದ ಎ.ಬಾಬು ಬಿನ್ ಲೇಟ್ ವೆಂಕಟೇಶಪ್ಪ, 24ವರ್ಷ, ವಾಸ, ಪರಮಾನದಲ್ಲಿ ಗ್ರಾಮ, ತುಮ್ಮಲದಲ್ಲಿ ಪೋಸ್ಟ್, ಹೊಸೂರು ತಾ, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ಎ3.ನಿತೀನ್ 11 ಬಜ್ ಮೊರ್ಲಿ ಬಿನ್ ವೆಂಕಟರಮಣಪ್ಪ, 23ವರ್ಷ, ವಾಸ; ಮುದುಗಾನದಲ್ಲಿ ಗ್ರಾಮ, ದೇವರದಲ್ಲಿ ಪೋಸ್ಟ್, ಹೊಸೂರು ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ಇವರುಗಳನ್ನು ತಾಣಾ ಮೊ.ಸಂ.224/2022 ಕಲಂ 41(ಡಿ), 102 ಸಿಆಪಿಸಿ ರೆ/ವಿ 379 ಐಪಿಸಿ ಕೇಸಿನಲ್ಲಿ ದಸ್ತಗಿರಿ ಮಾಡಿ ಇವರುಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 15,00,000/- ರೂ ಬೆಲೆ ಬಾಳುವ ವಿವಿಧ ಕಂಪೆನಿಯ 20 ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
ಸದರಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವೈಟ್ ಫೀಲ್ಡ್ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್ ಮತ್ತು ಮಾರತಹಳ್ಳಿ ಉಪವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಕಿಶೋರ್ ಭರಣಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಸೋಮಶೇಖರ್ ರವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀ ತಿಮ್ಮರಾಯಪ್ಪ ಸಿಬ್ಬಂದಿಯವರಾದ ಶ್ರೀ ಕೃಷ್ಣಮೂರ್ತಿ ಹೆಚ್ ಸಿ.5985, ಕೃಷ್ಣಮೂರ್ತಿ ಪಿಸಿ.12290, ಮಹಾಂತೇಶ್ ಪಿಸಿ,16268 ಮತ್ತು ತೇಜು ನಾಯ್ಕ ಪಿಸಿ.14335 ರವರುಗಳು ಆರೋಪಿಗಳನ್ನು ಬಂಧಿಸಿ ವಿವಿಧ ಕಂಪೆನಿಯ 20 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.