ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಬೆಂಗಳೂರಿನ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಡಾ.ಭೀಮಾ ಶಂಕರ್ ಗುಳೇದ್ ರವರಿಗೆ ವಿಶ್ವ ಚೇತನಾ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.
ಅಖಿಲ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸುರೇಶ ಜೀವನ್ಮುಖಿ ಯವರು ಮಾತನಾಡಿ ವರ್ಷಕ್ಕೆ ಒಂದು ಭಾರಿ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಗೈದ ವ್ಯಕ್ತಿಗಳನ್ನು ಗುರುತಿಸಿ ನಮ್ಮ ಸಂಸ್ಥೆಯ ವತಿಯಿಂದ ವಿಶ್ವ ಚೇತನಾ ಪ್ರಶಸ್ತಿ ನೀಡುತ್ತೇವೆ ಎಂದು ತಿಳಿಸಿರುತ್ತಾರೆ.
ಮಾನವೀಯ ಮೌಲ್ಯಗಳುಳ್ಳ ಅಧಿಕಾರಿ ಹಾಗೂ ಜನರೊಡನೆ ಅವರ ಒಡನಾಟ ಅವರ ಜನಪರ ಕಾಳಜಿ ಹಾಗೂ ಜನಪರ ಸ್ಪಂದನೆ , ಜನಸ್ನೇಹಿ ಅಧಿಕಾರಿ ಎಂಬುದನ್ನು ಪರಿಗಣಿಸಿ ಇವರಿಗೆ ವಿಶ್ವ ಚೇತನಾ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿರುತ್ತಾರೆ.
ಪೊಲೀಸ್ ಅಧಿಕಾರಿಗಳು ಜನಪರ ಕಾಳಜಿ ಉಳ್ಳವರು, ಇವರ ಜನಸ್ನೇಹಿ ಕಾರ್ಯ ವೈಕರಿಗಾಗಿ ಇವರಿಗಾಗಿ ಸಂದ ಗೌರವ ವಿದು ಎಂಬುದು ನಿಜಕ್ಕೂ ಅತ್ಯಂತ ಹೆಮ್ಮೆಯ ವಿಚಾರ.
ನಿಮ್ಮ ಸಮಾಜಮುಖಿ, ಜನಪರ ಕಾಳಜಿಯ ಕಾರ್ಯಗಳು ಹೀಗೆ ಅವಿರತವಾಗಿ ಸಾಗಲಿ, ಇನ್ನಷ್ಟು ಮತ್ತಷ್ಟು ಪ್ರಶಸ್ತಿ ಪುರಸ್ಕಾರಗಳು ನಿಮ್ಮದಾಗಲಿ ಎಂದು ಹಾರೈಸುತ್ತಾ?
ವಿಶ್ವ ಚೇತನಾ: ಭೀಮಾಶಂಕರ್ ಗುಳೇದ್
Date: