26.9 C
Bengaluru
Saturday, January 25, 2025

*ಬನಶಂಕರಿ ಪೊಲೀಸರ ಭರ್ಜರಿ ಕಾರ್ಯಾಚರಣೆ *

Date:


ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತಿದ್ದ ಒರಿಜಿನಲ್ ಕಳ್ಳರನ್ನು ದಸ್ತಗಿರಿ ಮಾಡಿದ ಸೂಪರ್ ಕಾಪ್ ಬನಶಂಕರಿ ಇನ್ಸ್ಪೆಕ್ಟರ್ ಗಿರೀಶ್ ನಾಯಕ್.

ಶ್ರೀ.ಕುಮಾರ ನಾಯ್ಕರವರು ಠಾಣೆಗೆ ಹಾಜರಾಗಿ ಹಾಜರಾಗಿ ತಮ್ಮ ಕವಿ-06-ಜೆ-2849 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಸಿಯಾಜ್ ಕಾರಿನ ನೊಂದಣಿ ಸಂಖ್ಯೆಯನ್ನು ಬೇರೊಂದು ಕಾರಿಗೆ ಅಳವಡಿಸಿಕೊಂಡು ಅಕ್ರಮವಾಗಿ ಬಳಸಿಕೊಂಡು ತುಮಕೂರು ಆರ್.ಟಿ.ಓ ಕಛೇರಿಯಲ್ಲಿ ಪಿರಾದುದಾರರ ಕಾರಿನ ಮಾಲೀಕತ್ವ ಬದಲಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ಉಲ್ಲೇಖಿಸಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖಾಕಾಲದಲ್ಲಿ ಪಿರಾದುದಾರರ ಕಾರಿನ ಕೆಎ-06-ಜೆ-2849 ನೊಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಹಾಕಿಕೊಂಡಿದ್ದ ಚಂದ್ರಪ್ರಕಾಶ್ ಎಂಬುವವರಿಗೆ ಸೇರಿದ ಸುಜುಕಿ ಸಿಯಾಜ್ ಕಾರನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದು, ಆರೋಪಿಗಳು ಹಳದಿ ಬೋರ್ಡನ ನೊಂದಣಿ ಸಂಖ್ಯೆ: ಕೆಎ-06-ಎಎ- 6993ರ ಸುಜುಕಿ, ಸಿಯಾಜ್ ಕಾರಿನ ಸಾಲ ಬಾಕಿ ಇದ್ದ ಕಾರಣ ಅದೇ ಮಾಡೆಲ್ ಮತ್ತು ಬಣ್ಣದ ಪಿರಾದುದಾರರ ಕಾರಿನ ನೊಂದಣಿ ಸಂಖ್ಯೆಯನ್ನು ತಮ್ಮ ಕಾರಿನಲ್ಲಿ ಬಳಸಿಕೊಂಡಿರುವುದು ಕಂಡುಬಂದ ಮೇರೆಗೆ ಭಾಗಿಯಾಗಿದ್ದ ಆರೋಪಿಗಳಾದ ಪ್ರಭಾಕರ ಸಿ ಬಿನ್ ಚಿನ್ನಸ್ವಾಮಿಗೌಡ, ಪ್ರಕಾಶಎಸ್ @ ಚೀಟಿ ಪ್ರಕಾಶ, ಕಿರಣ್‌ಆರ್ ಬಿನ್ ರಾಮು ಕೆ, ರವರುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರ ಮಾಡಲಾಗಿ ಇವರುಗಳು ತಲೆಮರೆಸಿಕೊಂಡಿರುವ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ಬೆಂಗಳೂರು, ತುಮಕೂರು, ನೆಲಮಂಗಲ, ಮಂಡ್ಯ ಮುಂತದ ಕಡೆಗಳಲ್ಲಿ ಬ್ಯಾಂಕ್‌ ಮತ್ತು ಪೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ಸಾಲ ಬಾಕಿ ಉಳಿಸಿಕೊಂಡಿದ್ದ ಕಾರುಗಳನ್ನು ಅವುಗಳ ಮಾಲೀಕರುಗಳೊಂದಿಗೆ ಶಾಮೀಲಾಗಿ ಅಥವಾ ಸದರಿ ಕಾರುಗಳ ಮೇಲಿನ ಸಾಲವನ್ನು ತಾವೇ ಕಟ್ಟುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸಿ ತಂದು ಹೀಗೆ ಸಾಲ ಬಾಕಿ ಇರುತ್ತಿದ್ದ ಕಾರುಗಳನ್ನು ಸಂಬಂಧಪಟ್ಟ ಪೈನಾನ್ಸ್ / ಬ್ಯಾಂಕ್‌ಗಳ ಸಾಲ ಮುಕ್ತಾಯವಾಗಿರುವಂತೆ ಬಿಂಬಿತವಾಗುವ ರೀತಿಯಲ್ಲಿ ಎನ್.ಓ.ಸಿ ಪತ್ರ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪತ್ರಗಳನ್ನು ನಕಲಿಯಾಗಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಪ್ರಿಂಟ್‌ ಔಟ್ ತೆಗೆದು ಸೃಷ್ಟಿಸಿಕೊಂಡು ಅವೇ ನಕಲಿ ಎನ್.ಓ.ಸಿ ಪತ್ರಗಳನ್ನು ಬಳಿಸಿಕೊಂಡು ಆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಗ್ರಾಹಕರುಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಮಾರುತಿ ಸುಜಿಕಿ, ಸಿಯಾಜ್, ಟೋಯೊಟಾ ಫಾರ್ಚುನರ್, ಟೊಯೋಟಾ ಇನ್ನೊವಾ ಕ್ರಿಸ್ಟಾ ಟೆಂಪೋ ಟ್ರಾವೆಲ್ಲರ್, 2 ಹುಂಡೈ ಏ?) ಮತ್ತು ಸುಜುಕಿ ಸ್ವಿಪ್ಟ್ ಡಿಸೈರ್ ಸೇರಿದಂತೆ ಸುಮಾರು 90 ಲಕ್ಷ ಬೆಲೆ ಬಾಳುವ ಒಟ್ಟು 7 ಕಾರುಗಳನ್ನು ಹಾಗೂ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳು | ಕೆನರಾ ಬ್ಯಾಂಕ್, ಹೆಚ್.ಡಿ.ಎಫ್.ಸಿ, ಬ್ಯಾಂಕ್, ಐಡಿಎಫ್‌ಸಿ, ಫಸ್ಟ್ ಬ್ಯಾಂಕ್, ಟೊಯೋಟಾ ಪೈನಾನ್ಸ್, ಚೋಳಮಂಡಳಂ ಫೈನಾನ್ಸ್ ಮತ್ತು ಮಹಿಂದ್ರಾ ಪೈನಾನ್ಸ್ ಹಾಗೂ ಇತರೆ ಪೈನಾನ್ಸ್ ಕಂಪನಿಗಳ ನಕಲಿ ಎನ್.ಓಸಿಗಳನ್ನು ಸೃಷ್ಟಿಸಿಕೊಂಡು ಸೈನಾನ್ಸ್ ಕಂಪನಿಗಳಿಗೆ ಮತ್ತು ಗ್ರಾಹಕರುಗಳಿಗೆ ಮೋಸ ಮಾಡಿದ್ದು, ತನಿಖೆ ಮುಂದುವರೆಸಿರುತ್ತದೆ.

ಸದರಿ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಕೆ.ವಿ ಶ್ರೀನಿವಾಸ ರವರ ಮಾರ್ಗದರ್ಶನದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಗಿರೀಶ್ ನಾಯ್ಕರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರವರುಗಳಾದ ಶ್ರೀ ಸಂತೋಷ್ ಉಡಚಣ ಮತ್ತು ಸಿಬ್ಬಂದಿಯವರಾದ ಶ್ರೀ ಗಣೇಶ್, ಶ್ರೀ ಸತೀಶ್, ಶ್ರೀ ನಾಗಪ್ಪ, ಶ್ರೀ ಪ್ರವೀಣ್, ಶ್ರೀ ಯಲ್ಲಪ್ಪ ರವರುಗಳು ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಮೋಸದ ಪ್ರಕರಣಕ್ಕೆ ಸಂಬಂಧಪಟ್ಟ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಮೇಲ್ಕಂಡ ಉತ್ತಮ ಕಾರ್ಯವನ್ನು ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ರೀ.ಸಿ.ಹೆಚ್ ಪ್ರತಾಪ್ ರೆಡ್ಡಿ, ಐ.ಪಿ.ಎಸ್, ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರರವರು, ಶ್ರೀ ಸಂದೀಪ್ ಪಾಟೀಲ್‌ ಐ.ಪಿ.ಎಸ್, ಮಾನ್ಯ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ, ಬೆಂಗಳೂರು ನಗರ ರವರು ಹಾಗೂ ಶ್ರೀ.ಪಿ ಕೃಷ್ಣಕಾಂತ್ ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗರವರು ಪ್ರಶಂಶಿಸಿರುತ್ತಾರೆ.

Latest Stories

LEAVE A REPLY

Please enter your comment!
Please enter your name here