ಅಕ್ರಮವಾಗಿ ಎಂ.ಡಿ.ಎಂ.ಎ ಕ್ರಿಸ್ಟಲ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೇರಿಯಾ ದೇಶದ ಆರೋಪಿಯನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು 5 ಲಕ್ಷ ರೂ ಬೆಲೆ ಬಾಳುವ 125 ಗ್ರಾಂ ತೂಕದ ಎಂ.ಡಿ.ಎಂ.ಎ.ಕ್ರಿಸ್ಟಲ್ ಮಾದಕ ವಸ್ತುವನ್ನು ಆರೋಪಿ ಯಿಂದ ವಶಪಡಿಸಿಕೊಳ್ಳಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ, ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ, ಅಗ್ನಿಶಾಮಕ ಠಾಣೆಯ ಹತ್ತಿರದ ಪೂಜಾ ದೋಸೆ ಕ್ಯಾಂಪ್ ರಸ್ತೆಯಲ್ಲಿ, ಒಬ್ಬ ವಿದೇಶಿ ಪ್ರಜೆಯು ತನ್ನ ವಶದಲ್ಲಿ ಯಾವುದೋ ಮಾದಕ ವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂದು ಬಾತ್ಮೀದಾರರಿಂದ ಬಂದ ನಿಖರವಾದ ಮಾಹಿತಿ ಮೇರೆಗೆ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಶ್ರೀ ಶಹಜಾಹನ್, ಸನದಿ ಮತ್ತು ಸಿಬ್ಬಂದಿಯವರುಗಳು ಪಂಚರ ಸಮಕ್ಷಮ ವಿದೇಶಿ ಪ್ರಜೆಯಾದ ಡೇನಿಯಲ್ ಎಂಬುವನನ್ನು ವಶಕ್ಕೆ ಪಡೆದು ಸದರಿ ಆರೋಪಿಯ ವಶದಲ್ಲಿದ್ದ ಸುಮಾರು 5 ಲಕ್ಷ ರೂ ಬೆಲೆಯ ಎಂ.ಡಿ.ಎಂ.ಎ. ಕ್ರಿಸ್ಟಲ್ ಮಾದಕ ವಸ್ತುವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಸದರಿ ಆರೋಪಿಯು ನೈಜೇರಿಯಾದ ದೇಶದ ಪ್ರಜೆಯಾಗಿದ್ದು, Ikechukwu Daniel@Daniel ಈತನು 2020 ರಲ್ಲಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ನಂತರ ಈತನು 2020 ರಲ್ಲಿಯೇ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿಯಾಗಿ ಜೈಲಿಗೆ ಹೋಗಿ ಬಂದಿದ್ದು, ನಂತರ ಇದೇ ವರ್ಷ-2022 ರಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿಯೂ ಕೂಡ ಇದೇ ಮಾದರಿ ಕೃತ್ಯವನ್ನು ವೆಸಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುತ್ತಾನೆ. ಸದರಿ ಆರೋಪಿ ಅವಧಿ ಮುಗಿದಿದ್ದರೂ ಸಹ ಅನಧಿಕೃತವಾಗಿ ಅಕ್ರಮವಾಗಿ ಭಾರತ ದೇಶದಲ್ಲಿ ನೆಲೆಸಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದ್ದು, ಸದರಿ ಆರೋಪಿ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲಾತಿಗಳ ನೈಜತೆಯ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಪೂರ್ವ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಡಾ||ಭೀಮಾಶಂಕರ್ ಗುಳೇದ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ, ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ, ಶ್ರೀ.ಎನ್.ಬಿ.ಸಕ್ರಿ ರವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಎಲ್.ಸಂತೋಷ್ ಕುಮಾರ್ ಮತ್ತು ಪಿಎಸ್‌ಐ ಶ್ರೀ.ಶಹಜಾಹನ್, ಸನದಿ. ಶ್ರೀ.ನಾಗರಾಜ ನೇದಲಗಿ, ಸಿಬ್ಬಂದಿಯವರಾದ ಎ.ಎಸ್.ಐ. ಶ್ರೀ.ಪ್ರಕಾಶ್, ಶ್ರೀ.ಬಾಲಾಜಿ, ಶ್ರೀ.ಆನಂದ್, ಶ್ರೀ.ಅತೀಫ್ ಹುಸೇನ್, ಶ್ರೀ.ವಿನೋದ್ ಕುಮಾರ್, ಶ್ರೀನಂದೀಶ್, ಶ್ರೀ.ಸುರೇಶ್, ನಾಗಣ್ಣವರ್, ಶ್ರೀ.ಬಸವರಾಜು, ಡಿ.ಎಸ್. ರವರುಗಳು ಆರೋಪಿಯನ್ನು ಬಂಧಿಸಿ ಎಂ.ಡಿ.ಎಂ.ಎ. ಕ್ರಿಸ್ಟಲ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಾಣಸವಾಡಿ ಪೊಲೀಸರ ಕಾರ್ಯಾಚರಣೆ
Date: